fbpx
ಮನೋರಂಜನೆ

ಚಂದನ್ ಶೆಟ್ಟಿಯನ್ನು ಹುಡುಕಿಕೊಂಡು ಬಂತು ಹತ್ತು ಕೋಟಿ ಆಫರ್! ಬಿಗ್ ಬಾಸ್ ನಿಂದ ಬಂದ ಮೇಲೆ ಸತ್ಯ ಬಾಯ್ಬಿಟ್ಟ ಚಂದನ್

ಚಂದನ್ ಶೆಟ್ಟಿಯನ್ನು ಹುಡುಕಿಕೊಂಡು ಬಂತು ಹತ್ತು ಕೋಟಿ ಆಫರ್! ಬಿಗ್ ಬಾಸ್ ನಿಂದ ಬಂದ ಮೇಲೆ ಸತ್ಯ ಬಾಯ್ಬಿಟ್ಟ ಚಂದನ್.

 

 

ಸದ್ಯ ಬಿಗ್ ಬಾಸ್ ವಿಜೇತ ಶೆಟ್ಟಿ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ, ಒಂದು ಕಡೆ ಬಿಗ್ ಬಾಸ್ ಷೋ ಗೆದ್ದಿರುವ ಖುಷಿಯಲ್ಲಿದ್ದಾರೆ ಮತ್ತೊಂದು ತಮ್ಮ ಟಕೀಲ ಹಾಡು ಮಾಡಿರುವ ಸಾಧನೆ ಕಂಡು ಸಂತಸವಾಗಿದ್ದಾರೆ. ಒಂದು ಕಾಲದಲ್ಲಿ ಅವಕಾಶಗಳಿಗಾಗಿ ಆತೊರೆಯುತ್ತಿದ್ದ ಹುಡುಗನ ಕಾಲ ಬಳಿಗೆ ಇಂದು ಆಫರ್ ಗಳು ಬಂದು ಬೀಳುತ್ತಿವೆ. ಎಷ್ಟರ ಮಟ್ಟಿಗೆ ಎಂದರೆ ಎರಡು ಮೂರು ದಿನಗಳಲ್ಲೇ ಸುಮಾರು ಹತ್ತು ಕೋಟಿ ಆಫರ್ ಬರುವಷ್ಟು. ಇದನ್ನ ನಾವ್ ಹೇಳ್ತಿಲ್ಲ ಸ್ವತಃ ಚಂದನ್ ಶೆಟ್ಟಿಯವರೇ ಹೇಳಿಕೊಂಡಿದ್ದಾರೆ.

 

 

ಕಳೆದ ಎರಡು ಮೂರು ದಿನಗಳಿಂದ ಆ ಚಾನೆಲ್ ಈ ಚಾನೆಲ್ ಅಂತ ಸಂದರ್ಶನಕ್ಕೆ ಹೋಗ್ತಿರುವ ಚಂದನ್ ಬಿಗ್’ಬಾಸ್ ನಿಂದ ಬಂದ ನಂತರ ಅವರ ಮನೆಯವರನ್ನ ಸರಿಯಾಗಿ ಮಾತನಾಡಿಸಿದ್ದಾರೋ ಇಲ್ಲವೋ ಗೊತ್ತಿಲ್ಲ ಆದರೆ ಟಿವಿ ಚಾನೆಲ್ಲುಗಳಿಗೆ ಸಂದರ್ಶನ ನೀಡಿ ಅವರಿಗೆ ಟಿ ಆರ್ ಪಿ ಹಸಿವನ್ನು ನೀಗಿಸುತ್ತಿದ್ದಾರೆ. ಅಂತೆಯೇ ಇಂದೂ ಕೂಡ ಮತ್ತೊಂದು ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನಕ್ಕೆಂದು ಬಂದಿದ್ದ ವೇಳೆ ತಮ್ಮ ಹತ್ತು ಕೋಟಿ ಆಫರ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅಷ್ಟಕ್ಕೂ ಚಂದನ್ ಶೆಟ್ಟಿ ಏನ್ ಹೇಳುದ್ರು ಅಂತೀರಾ ಮುಂದೆ ಓದಿ!

 

 

ಚಂದನ್ ಅವರಿಗೆ ನಿರ್ದೇಶಕ ಎಸ್.ನಾರಾಯಣ್ ಸೇರಿದಂತೆ ಕೆಲವು ನಿರ್ದೇಶಕರು ಕರೆ ಮಾಡಿದ್ದರಂತೆ ಬಂದಿರುವ ಒಟ್ಟು ಚಿತ್ರಗಳ ಒಟ್ಟು ಸಂಭಾವನೆ ಐದು ಕೋಟಿಯನ್ನೂ ಮೀರುತ್ತದೆಯಂತೆ. ಹಾಗೆ ಚಂದನ್ ಅವರು ಮ್ಯೂಸಿಕ್ ಸ್ಪೆಷಲಿಸ್ಟ್ ಆಗಿರೋದ್ರಿಂದ 5 ಕೋಟಿ ಸಂಭಾವನೆಯ ಈವೆಂಟ್’ಗಳು ಇವರಿಗಾಗಿ ಕಾಯುತ್ತಿದೆಯಂತೆ! ಒಟ್ಟಿನಲ್ಲಿ ಚಂದನ್ ನ ಅದೃಷ್ಟ ಎಂಬ ಕುದುರೆ ಲಂಗು ಲಗಾಮು ಇಲ್ಲದೆ ಓಡುತ್ತಿದ್ದು ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳದೆ ಎಚ್ಚರಿಕೆಯಿಂದ ಹೆಜ್ಜೆಯಿಟ್ಟರೆ ಚಿತ್ರರಂಗಕ್ಕೆ ಒಬ್ಬೊಲ್ಲೇ ನಾಯಕ ಸಿಗುವುದರಲ್ಲಿ ಯಾವುದೇ ಸಂದೇಹವಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top