fbpx
ಸಿನಿಮಾ

ನಾಗತಿಹಳ್ಳಿ ಚಂದ್ರ ಶೇಖರ್ ನಿರ್ದೇಶನದಲ್ಲಿ ಮತ್ತೆ ಬರ್ತಿದ್ಯಾ ಅಮೇರಿಕಾ ಅಮೇರಿಕಾ -2 ?

ನಾಗತಿಹಳ್ಳಿ ಚಂದ್ರ ಶೇಖರ್ ನಿರ್ದೇಶನದಲ್ಲಿ ಮತ್ತೆ ಬರ್ತಿದ್ಯಾ ಅಮೇರಿಕಾ ಅಮೇರಿಕಾ -2 ?

ಹೇಮಾ ಪಂಚಮುಖಿ ಹೀರೊಯಿನ್ ?

20 ವರ್ಷಗಳ ಹಿಂದೆ ಅಮೇರಿಕಾ ಅಮೇರಿಕಾ ಚಿತ್ರ ಬಿಡುಗಡೆಗೊಂಡು ಜನಮಾನಸದಲ್ಲಿ ಬಾರಿ ಖ್ಯಾತಿ ಪಡೆದುಕೊಂಡಿತ್ತು , ತ್ರಿಕೋನ ಪ್ರೇಮಕಥಾ ಹಂದರವನ್ನು ಹೊಂದಿದ್ದ ಈ ಚಿತ್ರ ಭಗ್ನ ಪ್ರೇಮಿ ಸೂರ್ಯನ ಪಾತ್ರದಲ್ಲಿ ರಮೇಶ್ , ಶಶಾಂಕನ ಪಾತ್ರದಲ್ಲಿ ಹಾಗೆಯೇ ಭೂಮಿಕಾ ಪಾತ್ರದಲ್ಲಿ ಹೇಮಾ ಪಂಚಮುಖಿ ಮಿಂಚಿದ್ದರು .

 

 

ತ್ರಿಕೋನ ಪ್ರೇಮಕಥೆಯ ಜೊತೆಗೆ ಸುಂದರವಾಗಿ ಕಾಣುವ ಅಮೇರಿಕಾ ಆಸೆಯನ್ನು ಹೊತ್ತು ಜೀವನವನ್ನು ಭಗ್ನ ಮಾಡಿಕೊಂಡ ದುರಂತ ನಾಯಕ , ಸ್ನೇಹ ,ಭಾವನೆ ,ಪ್ರೀತಿ ,ತಮಾಷೆ ಇಷ್ಟಲ್ಲದೆ ಮನೋ ಮೂರ್ತಿಯವರ ಸುಮಧುರ ಹಾಡುಗಳು , ಅಮೆರಿಕಾದ ಸುಂದರ ತಾಣಗಳು , ಕರ್ನಾಟಕದ ಕಡಲ ತೀರದ ಪ್ರದೇಶಗಳು ಈ ಚಿತ್ರದ ವಿಶೇಷ .

ನೆನ್ನೆ ನಾಗತಿ ಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ , ಸಿನಿಮಾ ತರಬೇತಿ ಸಂಸ್ಥೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಲು ಹೋಗಿದ್ದ ಹೇಮಾ ಪಂಚಮುಖಿ ,ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ಅವರೊಡನೆ ತಮ್ಮ ಸೂಪರ್ ಹಿಟ್ ಸಿನಿಮಾ ಅಮೇರಿಕಾ ಅಮೇರಿಕಾ ನೆನಪುಗಳನ್ನು ಮೆಲುಕು ಹಾಕಿದ್ದಾರೆ .

 

ಬನ್ನಿ ಅದೇನು ವಿಶೇಷ ತಿಳಿದುಕೊಳ್ಳೋಣ

 

 

ನಾಗತಿ ಹಳ್ಳಿ : 20 ವರ್ಷಗಳ ಹಿಂದೆ ಅಮೇರಿಕಾ ಅಮೇರಿಕಾ ಚಿತ್ರ ಮಾಡಿದ್ದೆವು ಇಷ್ಟು ಬೇಗ 20 ವರ್ಷ ಕಳೆದಿವೆ ನಂಬೋಕೆ ಆಗ್ತಿಲ್ಲ , ನೀನು ಅಷ್ಟೇ ಫ್ರೆಶ್ ಆಗಿ ಕಾಣುತ್ತೀಯಾ ,ಇನ್ನೊಂದು ಅಮೇರಿಕಾ ಅಮೇರಿಕಾ ಮಾಡೋಣ

ಹೇಮಾ :೧೦೦% ನಾನು ರೆಡಿ ,ಎಲ್ಲರು ಕೇಳ್ತಾರೆ ಯಾಕೆ ನೀವು ಸಿನಿಮಾ ಮಾಡೋಲ್ಲ ಅಂತ , ಇನ್ನೊಂದು ಅಮೇರಿಕಾ ಅಮೇರಿಕಾ ಚಿತ್ರ ಮಾಡೋದಾದ್ರೆ ನಾನು ಈಗಲೇ ರೆಡಿ , ಆದ್ರೆ ಇನ್ನು ಸ್ವಲ್ಪ ಸಣ್ಣ ಆಗಿ ಬರ್ತೀನಿ .

ನಾಗತಿ ಹಳ್ಳಿ : ಬೆಳಗ್ಗೆ ಬೇಗ ಎದ್ದು ಶೂಟಿಂಗ್ ಗೆ ಬರಬೇಕಾಗುತ್ತೆ ಏನ್ಮಾಡ್ತಿಯಾ ?

 

 

ಹೇಮಾ : ಆಗ ಅಭ್ಯಾಸ ಇರಲಿಲ್ಲ ಈಗ ಅಭ್ಯಾಸ ಆಗಿದೆ ನಾನೇ ನಿಮ್ಮನ್ನು 4 ಗಂಟೆಗೆ ಎದ್ದೇಳಿಸುತ್ತೇನೆ

ನಾಗತಿ ಹಳ್ಳಿ : ಟೆಂಟ್ ಸಿನಿಮಾ , ಸಿನಿಮಾ ತರಬೇತಿ ಸಂಸ್ಥೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಲು ಬಂದದ್ದು ತುಂಬಾ ಸಂತೋಷ .ಅಮೇರಿಕಾ ಅಮೇರಿಕಾ ಚಿತ್ರ ಇಂತಹ ಪವಾಡ ಮಾಡಿತ್ತು .

 

 

ಹೇಮಾ : ಖಂಡಿತ ಇನ್ನೊಂದು ಅಮೇರಿಕಾ ಅಮೇರಿಕಾ ಚಿತ್ರ ಮಾಡಿ ನಾನೇ ಮೊದಲು ಬರ್ತೀನಿ

ನಾಗತಿ ಹಳ್ಳಿ : ನಗುತ್ತಾ … ಹೌದು ಪ್ರೊಡ್ಯೂಸರ್ ಮೊದಲು 🙂 ಅಂದ್ರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top