ಜ್ಯೋತಿಷ್ಯ

12 ರಾಶಿಯವರು ಅವರ ಗುಣಗಳಿಗೆ ಅನುಸಾರವಾಗಿ ಯಾವ ಯಾವ ವೃತ್ತಿಯಲ್ಲಿ ಯಶಸ್ಸು ಮತ್ತು ಅದೃಷ್ಟ ಲಭಿಸಲಿದೆ ಎಂದು ನಿಮಗೆ ಗೊತ್ತಾ ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

12 ರಾಶಿಯವರು ಅವರ ಗುಣಗಳಿಗೆ ಅನುಸಾರವಾಗಿ ಯಾವ ಯಾವ ವೃತ್ತಿಯಲ್ಲಿ ಯಶಸ್ಸು ಮತ್ತು ಅದೃಷ್ಟ ಲಭಿಸಲಿದೆ ಎಂದು ನಿಮಗೆ ಗೊತ್ತಾ ?

 

ಕೆಲವೊಂದು ರಾಶಿಯವರು ಕೆಲವೊಂದು ಕ್ಷೇತ್ರಗಳಲ್ಲಿ ಯಶಸ್ಸನ್ನು ಕಾಣುತ್ತಾರೆ. ಮೇಷದಿಂದ ಮೀನ ರಾಶಿಯವರಿಗೆ ಯಾರು ಯಾವ ವೃತ್ತಿಯಲ್ಲಿ ಮುನ್ನಡೆದರೆ ಯಶಸ್ಸು ಕಾಣುತ್ತಾರೆಂದು ನೋಡೋಣ ,ಹಾಗೆ ಆಯಾ ರಾಶಿಯವರ ಮನಸ್ಥಿತಿ ಹೇಗಿರುತ್ತದೆ ಎಂದು ತಿಳಿಯುವ ಪ್ರಯತ್ನ ಮಾಡೋಣ …

 

 

ನಿಮ್ಮ ರಾಶಿಗೆ ಅನುಸಾರವಾಗಿ ನೀವು ಕೆಲಸ ಮಾಡಬೇಕಾದ ಕ್ಷೇತ್ರವನ್ನು ಆರಿಸಿಕೊಳ್ಳುವುದು ಸೂಕ್ತ . ನಿಮ್ಮ ಅಭಿರುಚಿಗೆ ತಕ್ಕಂತೆ ಆರಿಸಿಕೊಂಡರೆ ವಿಫಲವಾಗುವ ಪ್ರಮೇಯವೇ ಇರುವುದಿಲ್ಲ, ಏಕೆಂದರೆ ಆತ್ಮವಿಶ್ವಾಸ ಎಲ್ಲ ವಿಶ್ವಾಸಗಳಿಗೆ ತುಂಬಾ ದೊಡ್ಡದು.

ಮೇಷ ರಾಶಿ.
ಇವರ ಗುಣ : ಇವರಿಗೆ ಬುದ್ಧಿ ಬಲ ಹೆಚ್ಚು, ಹಠಮಾರಿಗಳು.
ಯಶಸ್ಸು ಲಭಿಸುವ ಕ್ಷೇತ್ರಗಳು: ಇವರಿಗೆ ಸವಾಲುಗಳನ್ನು ತಂದೊಡ್ಡುವ ಕೆಲಸಗಳೆಂದರೆ ಇಷ್ಟ, ಆದ್ದರಿಂದ ಇವರು ಸೇನೆ, ರಾಜಕೀಯ ರಂಗಗಳಲ್ಲಿ ಮಿಂಚುತ್ತಾರೆ, ಹಾಗೆ ಕೈಗಾರಿಕೋದ್ಯಮಿಯಾಗಿಯೂ ಸಹ ಯಶಸ್ಸನ್ನು ಕಾಣುತ್ತಾರೆ .

ವೃಷಭ ರಾಶಿ .
ಇವರ ಗುಣ : ಇವರು ತುಂಬಾ ಶ್ರಮ ಜೀವಿಗಳು, ಅಂದವಾಗಿರುತ್ತಾರೆ,ವಿಲಾಸಿ ಜೀವನ ನಡೆಸುತ್ತಾರೆ.
ಯಶಸ್ಸು ಲಭಿಸುವ ಕ್ಷೇತ್ರಗಳು: ಡಿಸೈನರ್ ಅಥವಾ ಬಾಣಸಿಗ.

 

 

ಮಿಥುನ ರಾಶಿ.
ಇವರ ಗುಣ : ಸ್ನೇಹ ಜೀವಿಗಳು ಹಾಗೂ ಬುದ್ಧಿವಂತರಾಗಿರುತ್ತಾರೆ.
ಯಶಸ್ಸು ಲಭಿಸುವ ಕ್ಷೇತ್ರಗಳು: ತಾಂತ್ರಿಕ ಉದ್ಯೋಗ, ಮಾರ್ಕೆಟಿಂಗ್ , ಮಾರಾಟಗಾರರಾದರೆ ಯಶಸ್ಸು ಸಿಗುತ್ತದೆ.

ಕಟಕ ರಾಶಿ.
ಇವರ ಗುಣ: ತುಂಬಾ ಭಾವನಾ ಜೀವಿಗಳು, ರಕ್ಷಣಾತ್ಮಕವಾಗಿ ಕೆಲಸ ನಿರ್ವಹಿಸುತ್ತಾರೆ, ಸೃಜನಶೀಲರಾಗಿರುತ್ತಾರೆ.
ಯಶಸ್ಸು ಲಭಿಸುವ ಕ್ಷೇತ್ರಗಳು: ಬೋಧಕ ವೃತ್ತಿ ಮತ್ತು ಮನೋವಿಜ್ಞಾನ, ಸಮಾಜ ಸೇವೆ .

 

 

ಸಿಂಹ ರಾಶಿ.
ಇವರ ಗುಣ: ಇತರರ ಮನಸ್ಸನ್ನು ಅರಿತುಕೊಳ್ಳುವ ಶಕ್ತಿ ಇರುತ್ತದೆ. ಇತರರು ಹೇಳಿದ್ದನ್ನು ಕೇಳುವ ವ್ಯವಧಾನವಿರುತ್ತದೆ. ಇವರ ಸಂವಹನ ಕೌಶಲದಿಂದ ಇತರರ ಮನಸ್ಸನ್ನು ಗೆಲ್ಲುತ್ತಾರೆ .
ಯಶಸ್ಸು ಲಭಿಸುವ ಕ್ಷೇತ್ರಗಳು: ಕ್ರೀಡಾಕಾರರಾಗಿ ಯಶಸ್ಸು ಗಳಿಸುತ್ತಾರೆ .

ಕನ್ಯಾ ರಾಶಿ.
ಇವರ ಗುಣ: ಸೃಜನಶೀಲರು .ಯಶಸ್ಸನ್ನು ಸುಲಭವಾಗಿ ಗಳಿಸುವರು.
ಯಶಸ್ಸನ್ನು ಲಭಿಸುವ ಕ್ಷೇತ್ರಗಳು: ವಾಣಿಜ್ಯೋದಮ ಕ್ಷೇತ್ರ.

 

 

ತುಲಾ ರಾಶಿ.
ಇವರ ಗುಣ :ತುಂಬಾ ಶಾಂತಿ ಪ್ರಿಯರು, ಆದರ್ಶವಾದಿಗಳು.
ಯಶಸ್ಸು ಲಭಿಸುವ ಕ್ಷೇತ್ರಗಳು : ನ್ಯಾಯ ಸರ್ಕಾರಿ ಸಾಮಾಜಿಕ ಕೆಲಸಗಳು ಮತ್ತು ಕಾನೂನು ವೃತ್ತಿ ಸೂಕ್ತವಾಗಿವೆ.

ವೃಶ್ಚಿಕ ರಾಶಿ.
ತುಂಬಾ ಗಾಢವಾಗಿ ಆಲೋಚಿಸುವ ಗುಣ ಇರುತ್ತದೆ. ಇವರ ಗುಣ: ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ. ನಂಬಿಕಸ್ಥರು ,ರೂಪವಂತ ರಾಗಿರುತ್ತಾರೆ.
ಯಶಸ್ಸು ಲಭಿಸುವ ಕ್ಷೇತ್ರಗಳು : ಪತ್ತೆದಾರಿಕೆ,ಶಸ್ತ್ರ ವೈದ್ಯರಾದರೆ ಉತ್ತಮ .

 

 

ಧನಸ್ಸು ರಾಶಿ.
ಇವರ ಗುಣ : ತುಂಬಾ ಮೌನವಾಗಿರುತ್ತಾರೆ, ಪ್ರಯಾಣಿಸುವುದನ್ನು ಇಷ್ಟಪಡುತ್ತಾರೆ, ಆಧ್ಯಾತ್ಮಿಕತೆಯಲ್ಲಿ ಒಲವಿಲ್ಲದವರಾಗಿರುತ್ತಾರೆ.
ಯಶಸ್ಸು ಲಭಿಸುವ ಕ್ಷೇತ್ರಗಳು: ಇತರರನ್ನು ಪ್ರೇರೇಪಿಸಲು ,ತರಬೇತಿ ನೀಡಲು, ಮಂತ್ರಿಗಳಾಗಿ ತತ್ವಜ್ಞಾನಿಯಾಗಿ ಯಶಸ್ಸು ಕಾಣುತ್ತಾರೆ .

ಮಕರ ರಾಶಿ.
ಇವರ ಗುಣ : ಸವಾಲುಗಳನ್ನು ಸ್ವೀಕರಿಸುತ್ತಾರೆ, ಜೀವನವನ್ನು ವಿಭಿನ್ನವಾಗಿ ನಿರ್ವಹಿಸಲು ಇಷ್ಟಪಡುತ್ತಾರೆ, ಬಹಳ ಪ್ರಬುದ್ಧ ರಾಗಿರುತ್ತಾರೆ
ಯಶಸ್ಸು ಲಭಿಸುವ ಕ್ಷೇತ್ರಗಳು: ಐಟಿ, ಬ್ಯಾಂಕಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳು .

 

 

ಕುಂಭ ರಾಶಿ.
ಇವರ ಗುಣ : ತುಂಬಾ ಆಳವಾಗಿ ಆಲೋಚಿಸುತ್ತಾರೆ, ಹೆಚ್ಚು ಕುತೂಹಲ ಉಳ್ಳವರಾಗಿರುತ್ತಾರೆ.
ಯಶಸ್ಸು ಲಭಿಸುವ ಕ್ಷೇತ್ರಗಳು: ವಿಜ್ಞಾನಿ, ವೈಮಾನಿಕ ರಂಗ, ಜೈವಿಕ ರ೦ಗಗಳು .

ಮೀನ ರಾಶಿ.
ಇವರ ಗುಣ : ಸಹಾಯ ಮಾಡುವ ಗುಣ, ಸೃಜನಶೀಲರು, ಮುಂಗೋಪಿಗಳು.
ಯಶಸ್ಸು ಲಭಿಸುವ ಕ್ಷೇತ್ರಗಳು : ಕಲಾವಿದರಾಗಿ ಒಳ್ಳೆಯ ಹೆಸರನ್ನು ಗಳಿಸುತ್ತಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top