fbpx
ಆರೋಗ್ಯ

ಎಡ ಮಗ್ಗುಲಾಗಿ ಮಲಗಿ ನಿದ್ದೆ ಮಾಡೋದ್ರಿಂದ ಈ ಪ್ರಯೋಜನಗಳನ್ನ ಪಡ್ಕೋಬೋದು!

ಎಡ ಮಗ್ಗುಲಾಗಿ ಮಲಗಿ ನಿದ್ದೆ ಮಾಡೋದ್ರಿಂದ ಈ ಪ್ರಯೋಜನಗಳನ್ನ ಪಡ್ಕೋಬೋದು!

 

 

ಎಡ ಮಗ್ಗುಲಾಗಿ ಮಲಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಕೆಲ ಆರೋಗ್ಯತಜ್ಞರು ಅಭಿಪ್ರಾಯ ಪಟ್ಟಿದ್ದಾರೆ . ನಮ್ಮ ದೇಹದ ಎಡ ಭಾಗ ಮತ್ತು ಬಲ ಭಾಗಗಳು ವಿಭಿನ್ನವಾಗಿ ವರ್ತಿಸುತ್ತವೆ . ಎಡ ಮಗ್ಗುಲಾಗಿ ಮಲಗುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಿದ್ದಾಂತ ಪ್ರಾಚೀನ ಕಾಲದಲ್ಲೇ ಹುಟ್ಟಿಕೊಂಡಿತು .ಎಡ ಮಗ್ಗುಲಾಗಿ ಮಲಗುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ಹೇಳ್ತಿವಿ ತಿಳ್ಕೊಳ್ಳಿ .

 

 

ಎಡ ಮಗ್ಗುಲಾಗಿ ನಿದ್ರಿಸುವುದರಿಂದಾಗಿ ಜೀರ್ಣ ಶಕ್ತಿ ಹೆಚ್ಚಾಗುತ್ತದೆ . ಜಠರ ಹಾಗೂ ಮೇದೋಜೀರಕ ಗ್ರಂಥಿಗಳು ದೇಹದ ಎಡ ಭಾಗದಲ್ಲಿ ಇರುತ್ತವೆ . ಎಡ ಮಗ್ಗುಲಾಗಿ ಮಲಗುವುದರಿಂದ ಅವುಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಕಾರವಾಗುತ್ತದೆ . ಹೀಗೆ ಮಲಗುವುದರಿಂದ ಮಲಬದ್ಧತೆಯ ಸಮಸ್ಯೆಯು ನಿವಾರಣೆಯಾಗುತ್ತದೆ .

 

 

ಹೃದಯ ದೇಹದ ಎಡ ಭಾಗದಲ್ಲಿ ಇರುತ್ತದೆ . ಎದ ಮಗ್ಗುಲಾಗಿ ಮಲಗುವುದರಿಂದ ಹೃದಯಕ್ಕೆ ರಕ್ತಸಂಚಾರ ಸುಲಭವಾಗಿ ಆಗುತ್ತದೆ .

 

 

ಗರ್ಭಿಣಿಯರು ಎಡ ಮಗ್ಗುಲಾಗಿ ಮಲಗುವುದರಿಂದ ಅನೇಕ ಪ್ರಯೋಜನಗಳಿವೆ . ಗರ್ಭಕೋಶ ಹಾಗೂ ಬ್ರೂಣಕ್ಕೆ ಹೆಚ್ಚಿನ ರಕ್ತ ಸಂಚಾರವಾಗುವಂತೆ ಮಾಡುತ್ತದೆ . ಎಡ ಮಗ್ಗುಲಾಗಿ ಮಲಗುವುದರಿಂದ ಬೆನ್ನಮೇಲಿನ ಒತ್ತಡವನ್ನು ನಿವಾರಿಸಬಹುದಾಗಿದೆ .

 

 

ಎಡ ಮಗ್ಗುಲಾಗಿ ಮಲಗುವುದರಿಂದಾಗಿ ಗೊರಕೆ ಸಮಸ್ಯೆಯಿಂದ ನಿವಾರಣೆ ಪಡೆಯಬಹುದು . ಎಡ ಮಗ್ಗುಲಾಗಿ ಮಲಗುವುದರಿಂದ ನಾಲಗೆ ಹಾಗೂ ಗಂಟಲು ತಟಸ್ಥವಾಗಿರುತ್ತವೆ . ಇದರಿಂದ ಉಸಿರಾಡಲು ತೊಂದರೆಯಾಗುವುದಿಲ್ಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top