fbpx
ಸಮಾಚಾರ

ದೇವ್ರಂಥಾ ಮನುಷ್ಯನ ಬಗ್ಗೆ ಬಿರುಗಾಳಿಯಂಥಾ ಕುತೂಹಲ!

ದೇವ್ರಂಥಾ ಮನುಷ್ಯನ ಬಗ್ಗೆ ಬಿರುಗಾಳಿಯಂಥಾ ಕುತೂಹಲ!

 

 

 

ಬಿಗ್‌ಬಾಸ್ ನಾಲಕ್ಕನೇ ಸೀಜನ್ ವಿನ್ನರ್ ಪ್ರಥಮ್ ಸಾಲುಸಾಲಾಗಿ ನಾಯಕ ನಟರಾಗಿ ಅಭಿನಯಿಸುತ್ತಿರೋದು ಗೊತ್ತಿರೋ ವಿಚಾರ. ಆದರೆ ದೇವ್ರಂಥಾ ಮನುಷ್ಯ ಚಿತ್ರ ಪ್ರಥಮ್ ನಾಯಕನಾಗಿರೋ ಮೊದಲ ಚಿತ್ರ. ಈಗಾಗಲೇ ಪ್ರೇಕ್ಷಕರಲ್ಲೊಂದು ಕ್ಯೂರಿಯಾಸಿಟಿ ಕಾಪಿಟ್ಟುಕೊಂಡಿರೋ ಈ ಚಿತ್ರ ತೆರೆ ಕಾಣಲು ಘಂಟೆಗಳಷ್ಟೇ ಬಾಕಿ ಉಳಿದಿವೆ.

ಬಿಗ್‌ಬಾಸ್ ಶೋ ಮೂಲಕವೇ ಪ್ರವರ್ಧಮಾನಕ್ಕೆ ಬಂದಿರೋ ಪ್ರಥಮ್ ಬಳಿಕ ಸಿನಿಮಾ ರಂಗವನ್ನೇ ಪ್ರಧಾನವಾಗಿ ಪರಿಗಣಿಸಿದ್ದಾರೆ. ನಿರ್ದೇಶನದತ್ತ ವಾಲುತ್ತಾರೆಂದುಕೊಂಡಿದ್ದ ಪ್ರಥಮ್ ನಾಯಕ ನಟನಾಗಿ ಪಡೆದುಕೊಂಡಿರೋ ಸಾಲು ಸಾಲು ಅವಕಾಶಗಳನ್ನು ಕಂಡು ಎಲ್ಲರೂ ಬೆರಗಾಗಿದ್ದಾರೆ. ಹಾಗೆ ಪ್ರಥಮ್ ಮೊದಲು ನಾಯಕನಾದ ಚಿತ್ರ ದೇವ್ರಂಥಾ ಮನುಷ್ಯ ಇದೀಗ ತೆರೆ ಕಾಣಲು ಕ್ಷಣಗಣನೆ ಶುರುವಾಗಿದೆ.

 

 

ಅಷ್ಟಕ್ಕೂ ಪ್ರಥಮ್ ಬಿಗ್‌ಬಾಸ್ ವಿನ್ನರ್ ಎಂಬ ಜನಪ್ರಿಯತೆಯ ಆಚೆಗೆ ಈ ಚಿತ್ರ ಹಲವಾರು ಕಾರಣಗಳಿಂದ ಸದ್ದು ಮಾಡುತ್ತಾ ಬಂದಿದೆ. ಆರಂಭದಲ್ಲಿಯೇ ಬಿಡುಗಡೆಯಾಗಿದ್ದ ಟೀಸರ್‌ನಲ್ಲಿನ ಖದರ್ ಹೊಂದಿದ್ದ ಡೈಲಾಗುಗಳು ಒಂದಷ್ಟು ನಿರೀಕ್ಷೆ ಹುಟ್ಟಿಸಿದ್ದವು. ಬಳಿಕ ಬಿಡುಗಡೆಯಾಗಿದ್ದ ಟ್ರೈಲರ್ ನೋಡಿದ ಮಂದಿ ಈ ಚಿತ್ರ ಏನೋ ಒಂದು ಕಮಾಲ್ ಸೃಷ್ಟಿಸಲಿದೆ ಎಂಬಂಥಾ ನಿರೀಕ್ಷೆ ಮೂಡಿಕೊಂಡಿದೆ.

ಹಾಸ್ಯ, ದ್ವೇಷ, ಮೋಸ, ಕೋಪ, ಮುಗ್ದ, ಹೀಗೆ ೧೦ ಮುಖಗಳಲ್ಲಿ ಶ್ರೀಮಂತ ಅಪ್ಪನ ಪೆಚ್ಚು ಮಗನಾಗಿ ಪ್ರಥಮ್ ಕಾಣಿಸಿಕೊಂಡಿದ್ದಾರೆ. ಪ್ರತಿ ೧೦ ನಿಮಿಷಕ್ಕೆ ಸನ್ನಿವೇಶಗಳು ಬದಲಾಗಲಿದ್ದು, ಮುಂದೇನು? ಎಂಬುದು ಪ್ರೇಕ್ಷಕನಿಗೆ ತಿಳಿಯುವುದಿಲ್ಲ. ಮತ್ತು ಈಗ ಬರುವ ದೃಶ್ಯಗಳು ಮುಂದೆ ಬರುವುದಿಲ್ಲ. ಡಬ್ಬಲ್ ಮೀನಿಂಗ್ ಸಂಭಾಷಣೆಗಳು ಇರುವುದಿಲ್ಲ. ಬೆಂಗಳೂರು ಕನ್ನಡವನ್ನು ಉಳಿಸುವ ಹಾಗೂ ಒಂದು ಅರ್ಥಪೂರ್ಣ ಸಂದೇಶವನ್ನು ಹೇಳಲಾಗಿದೆ. ಸಂಜೆ ಮೇಲೆ ಸಿಗ್ಬೇಡಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿದ್ದು ಅದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು ಅಂತ ತಂಡವು ಹೇಳಿಕೊಳ್ಳುತ್ತದೆ. ಜೆಸ್ಸಿಗಿಫ್ಟ್ ಸಂಗೀತದಲ್ಲಿ ಎರಡು ಹಾಡುಗಳು ಹಿಟ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ.

 

 

 

ಮೊದಲ ಬಾರಿ ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಕಿರಣ್‌ಶೆಟ್ಟಿ ಅವರು ಹೇಳುವಂತೆ ಕಾಮಿಡಿ ಇದ್ದರೂ ಕುತೂಹಲ ಹುಟ್ಟಿಸುತ್ತದೆ. ೨.೦೩ ಘಂಟೆಗಳ ಕಾಲ ಮನರಂಜನೆ ನೀಡಲಿದ್ದು, ಸುಚೇಂದ್ರಪ್ರಸಾದ್, ಪವನ್‌ಕುಮಾರ್, ತಬಲನಾಣಿ ಅಭಿನಯ ಮರೆಗು ತರಿಸುತ್ತದೆ. ಆರು ಸಿನಿಮಾಗಳ ಪೈಕಿ ಕೊನೆಯಲ್ಲಿ ಸಹಿ ಮಾಡಲಾಗಿದ್ದು, ಬಿಡುಗಡೆಯಾಗುತ್ತಿರುವುದು ಇದೇ ಮೊದಲ ಚಿತ್ರವಾಗಿದ್ದರಿಂದ ಸಹಜವಾಗಿ ಖುಷಿಯಾಗಿದ್ದಾರೆ ನಾಯಕಿ ವೈಷ್ಣವಿಚಂದ್ರನ್. ನಾಯಕನನ್ನು ಹತೋಟಿಗೆ ತರುವ ಪಾತ್ರದಲ್ಲಿ ಶೃತಿ ನಾಯಕಿ. ಹೆಚ್.ಸಿ.ಮಂಜುನಾಥ ಮತ್ತು ಕೆ.ತಿಮ್ಮರಾಜು ನಿರ್ಮಾಪಕರುಗಳಾಗಿ ಪ್ರಥಮ ಅನುಭವ. ಜಯಣ್ಣ ಕಂಬೈನ್ಸ್ ಮುಖಾಂತರ ಸುಮಾರು ೧೫೦ ಕೇಂದ್ರಗಳಲ್ಲಿ ಶುಕ್ರವಾರದಂದು ತರೆಕಾಣಲಿದೆ.
ನಟನೆಯನ್ನು ಗಂಭೀರವಾಗಿಯೇ ಪರಿಗಣಿಸಿದ್ದಾರೆಂಬುದನ್ನು ಪ್ರಥಮ್ ಈಗಾಗಲೇ ನಿರೂಪಿಸಿದ್ದಾರೆ. ಪ್ರೇಕ್ಷಕರೂ ಕೂಡಾ ಭಾರೀ ನಿರೀಕ್ಷೆಯಿಂದಲೇ ದೇವ್ರಂಥಾ ಮನುಷ್ಯನಿಗಾಗಿ ಕಾಯಲಾರಂಭಿಸಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top