fbpx
ಸಮಾಚಾರ

ಬಿಗ್ ಬಾಸ್ ಗೆದ್ದ ಚಂದನ್ ಶೆಟ್ಟಿಗೆ ವಿದೇಶದಿಂದ ಬಂತು ಸ್ಪೆಷಲ್ ಗಿಫ್ಟ್!

ಬಿಗ್ ಬಾಸ್ ಗೆದ್ದ ಚಂದನ್ ಶೆಟ್ಟಿಗೆ ವಿದೇಶದಿಂದ ಬಂತು ಸ್ಪೆಷಲ್ ಗಿಫ್ಟ್!

 

 

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ‘ಬಿಗ್ ಬಾಸ್ ಕನ್ನಡ ಸೀಸನ್-5’ ಅಂತ್ಯಗೊಂಡಿದ್ದು ವೀಕ್ಷಕರ ಬಯಕೆಯಂತೆ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವಾಕರ್‌ ಬಿಗ್‌ಬಾಸ್‌ ಸೀಸನ್ 5ನ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ..

 

 

ತಮ್ಮ ಮ್ಯೂಸಿಕ್ಸ್ ನಿಂದ ದೊಡ್ಡ ಮಟ್ಟದ ವೀಕ್ಷಕರ ಬಳಗವನ್ನು ಸೃಷ್ಟಿಸಿಕೊಂಡಿದ್ದ ಚಂದನ್ ವೀಕ್ಷಕರ ನಿರೀಕ್ಷೆಯಂತೆ ಬಿಗ್ ಬಾಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಚಂದನ್ ಅವರಿಗೆ ಟ್ರೋಫಿ ಜೊತೆ 50 ಲಕ್ಷ ನಗದು ಬಹುಮಾನ ದಕ್ಕಿದೆ. ಇದೇ ಖುಷಿಯಲ್ಲಿ ಚಂದನ್’ಗೆ ಫಾರಿನ್’ನಿಂದ ಬಂದಿರೋ ವಿಶೇಷ ಉಡುಗೊರೆ ಸಿಕ್ಕಿದೆ, ಅಷ್ಟಕ್ಕೂ ಆ ಗಿಫ್ಟ್ ಕೊಟ್ಟಿದ್ದು ಮತ್ಯಾರು ಅಲ್ಲ ಸ್ವತಃ ಅವರ ತಾಯಿಯವರೇ.

 

 

ಚಂದನ್ ಶೆಟ್ಟಿಯವರಿಗೆ ಚಿಕ್ಕಂದಿನಿಂದಲೂ ನಾಯಿಮರಿಗಳು ಎಂದರೆ ಬಹಳ ಇಷ್ಟವಂತೆ ಹಾಗಾಗಿ ರ್ಶಿಜ್ಲಾ ಬ್ರೀಡ್ ಎಂಬ ಚೈನಾ ತಳಿಯ ನಾಯಿಮರಿಯನ್ನು ಚಂದನ್’ಗೆ ಅವರ ತಾಯಿ ಚೀನಾದಿಂದ ತರಿಸಿ ಉಡುಗೊರೆ ನೀಡಿದ್ದಾರೆ. ಅವರ ಮನೆಗೆ ತರಬೇಕಾದ ನಾಯಿಮರಿಗೆ `ಆಪಲ್’ ಎಂದು ಹೆಸರಿಡಬೇಕು ಎಂದು ಚಂದನ್ ಅವರು ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ಆಸೆ ಪಟ್ಟಿದ್ದಾರಂತೆ. ಹಾಗಾಗಿ ಚಂದನ್ ಅವರ ಆಸೆಯಂತೆಯೇ ಆ ನಾಯಿಮರಿಗೆ ‘ಆಪಲ್’ ಎಂದು ಹೆಸರಿಡಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top