fbpx
ಕಿರುತೆರೆ

ಚಂದನ್ ಶೆಟ್ಟಿ ಹೇಳಿದ್ರು ಅವರ ಲವ್ ಬ್ರೇಕಪ್ ಸ್ಟೋರಿ!

ಚಂದನ್ ಶೆಟ್ಟಿ ಹೇಳಿದ್ರು ಅವರ ಲವ್ ಬ್ರೇಕಪ್ ಸ್ಟೋರಿ!

 

 

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ‘ಬಿಗ್ ಬಾಸ್ ಕನ್ನಡ ಸೀಸನ್-5’ ಅಂತ್ಯಗೊಂಡಿದ್ದು ವೀಕ್ಷಕರ ಬಯಕೆಯಂತೆ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವಾಕರ್‌ ಬಿಗ್‌ಬಾಸ್‌ ಸೀಸನ್ 5ನ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

 

 

ಬಿಗ್ ಬಾಸ್ ಮುಗಿದಿದ್ದರೂ ಆಟದ ತಾಪ ಮಾತ್ರ ಇನ್ನೂ ಹಾಗೆಯೇ ಇದೇ, ಬಿಗ್ ಬಾಸ್ ಮುಗಿದು ನಾಲ್ಕು ದಿನಗಳೇ ಕಳೆದರೂ ಸ್ಪರ್ಧಿಗಳನ್ನು ಟಿವಿ ಚಾನೆಲ್ ಗಳು ಮಾತ್ರ ಬಿಡುವಂತೆ ಕಾಣಿಸುತ್ತಿಲ್ಲ. ಅವರನ್ನು ಟಿವಿ ಸ್ಟುಡಿಯೋಗಳಲ್ಲಿ ಕೂರಿಸಿಕೊಂಡು ಬಿಗ್ ಮನೆಯ ಕಥೆ ಪುರಾಣಗಳನ್ನೆಲ್ಲಾ ಕೇಳಿ ಕಾರ್ಯಕ್ರಮಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಶನಗಳಲ್ಲಿ ಕನ್ನಡ ರ್ಯಾಪರ್ ಚಂದನ್ ಶೆಟ್ಟಿಯವರ ಬ್ರೇಕ್ ಅಪ್ ವಿಚಾರ ಕೂಡ ಆಚೆಬಂದಿದೆ.

ಈ ಮುಂಚೆ ಚಂದನ್’ಗೆ ಲವ್ ಆಗಿತ್ತಂತೆ, ಅವರಿಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರಂತೆ. ಆದರೆ ಕೆಲವು ದಿನಗಳ ನಂತರ ಆ ಇಬ್ಬರ ನಡುವೆ ಕೆಲವು ಬಿನ್ನಾಭಿಪ್ರಾಯಗಳು ಉಂಟಾಯಿತಂತೆ. ಚಂದನ್ ಅವರು ಅವರ ತಂದೆ-ತಾಯಿಯನ್ನು ಬಿಟ್ಟು ಬೇರೆ ಮನೆ ಮಾಡಬೇಕೆಂದು ಆಕೆ ಹೇಳಿದ್ದಳಂತೆ. ಈ ವಿಷಯದಲ್ಲಿ ಇಬ್ಬರಿಗೂ ಹೊಂದಾಣಿಕೆಯಾಗದ ಕಾರಣಕ್ಕೆ ಅವರಿಬ್ಬರ ಸ್ನೇಹ ಮುರಿದು ಬಿದ್ದಿತಂತೆ” ಹೀಗಂತ ಸ್ವತಃ ಚಂದನ್ ಶೆಟ್ಟಿಯೇ ಸಂದರ್ಶನದಲ್ಲಿ ವಿವರಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top