fbpx
ಕಿರುತೆರೆ

ತನ್ನ ಈ ಆಸೆಯನ್ನು ಈಡೇರಿಸಿದ ಕಿಚ್ಚ ಸುದೀಪ್’ಗೆ ಧನ್ಯವಾದ ತಿಳಿಸಿದ ರ‍್ಯಾಪರ್ ಚಂದನ್ ಶೆಟ್ಟಿ!

ತನ್ನ ಈ ಆಸೆಯನ್ನು ಈಡೇರಿಸಿದ ಕಿಚ್ಚ ಸುದೀಪ್’ಗೆ ಧನ್ಯವಾದ ತಿಳಿಸಿದ ರ‍್ಯಾಪರ್ ಚಂದನ್ ಶೆಟ್ಟಿ!

 

 

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ‘ಬಿಗ್ ಬಾಸ್ ಕನ್ನಡ ಸೀಸನ್-5’ ಅಂತ್ಯಗೊಂಡಿದ್ದು ವೀಕ್ಷಕರ ಬಯಕೆಯಂತೆ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವಾಕರ್‌ ಬಿಗ್‌ಬಾಸ್‌ ಸೀಸನ್ 5ನ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಬಿಗ್ ಬಾಸ್ ಟ್ರೋಫಿಯನ್ನು ಗೆದ್ದುಕೊಂಡಿರುವ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಚಂದನ್ ಶೆಟ್ಟಿಯವರು ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನವೇ ವೇದಿಕೆಯಲ್ಲಿ “ನನ್ನ ಟಕಿಲಾ ಸಾಂಗ್’ಅನ್ನು ಯಾವುದಾದರೂ ಒಂದು ವಾರ ಇದೇ ವೇದಿಕೆಯಲ್ಲಿ ನಿಮ್ಮ ಕೈಯಿಂದ ಬಿಡುಗಡೆ ಮಾಡಬೇಕು” ಸುದೀಪ್ ಅವರಲ್ಲಿ ಕೇಳಿಕೊಂಡಿದ್ದರು. ಚಂದನ್ ಅವರ ಆಸೆಯಂತೆ ಸುದೀಪ್ ಅವರು ಟಕಿಲಾ ಸಾಂಗ್ ಅನ್ನು ವೇದಿಕೆಯ ಮೇಲೆ ಬಿಡುಗಡೆ ಮಾಡಿದ್ದರು.

 

 

ಕಿಚ್ಚ ಸುದೀಪ್ ಅವರ ಕೈಯಿಂದ ಲಾಂಚ್ ಆದ ಈ ಹಾಡು ಗ್ರೇಟ್ ಸಕ್ಸಸ್ ಕಂಡಿದ್ದು ರಿಲೀಸ್ ಆದ 17 ಗಂಟೆಯ ಒಳಗೆ ಒಂದು ಮಿಲಿಯನ್’ಗೂ ಹೆಚ್ಚು ಜನರು ವೀಕ್ಷಿಸಿದ್ದರು. ಈಗ ಸಾಂಗ್ ಬಿಡುಗಡೆಯಾದ ಒಂದು ತಿಂಗಳಿನಲ್ಲೇ ದಾಖಲೆಯ ಒಂದು ಕೋಟಿ 30ಲಕ್ಷ ವ್ಯೂವ್ಸ್ ಪಡೆದುಕೊಂಡಿದೆ.ಕನ್ನಡ ಯಾವ ಸ್ಟಾರ್ ನಂತರ ಹಾಡುಗಳು ಬಿಡುಗಡೆಯಾದಾಗಲೂ ಇಷ್ಟು ವೇಗವಾಗಿ ವೀವ್ಸ್ ಬಂದಿರಲಿಲ್ಲ. ಹಾಡು ಇಷ್ಟು ದೊಡ್ಡ ಮಟ್ಟಿಗೆ ಹಿಟ್ ಆಗುತ್ತೆ ಅಂತ ಅವರು ಊಹಿಸಿರಲೇ ಇಲ್ಲವಂತೆ. ಹಾಗಾಗಿ ಹಾಡಿನ ಸಕ್ಸಸ್ ಗೆ ಕಾರಣವಾದ ಸುದೀಪ್ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

 

 

ಖಾಸಗಿ ಸುದ್ದಿವಾಹಿನಿಯಲ್ಲಿ ಈ ಬಗ್ಗೆ ಮನ ಬಿಚ್ಚಿ ಮಾತನಾಡಿದ ಚಂದನ್ ” ನಾನು ಸುದೀಪ್ ಸರ್‍ಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ, ನನ್ನ ‘ಟಕಿಲ’ ಹಾಡನ್ನು ವೇದಿಕೆಯ ಮೇಲೆ ರಿಲೀಸ್ ಮಾಡಿಕೊಡಿ ಎಂದು ಕೇಳಿಕೊಂಡಾಗ ಅವರು ಆಯ್ತು ಎಂದು ಪ್ರಾಮಿಸ್ ಕೂಡ ಮಾಡಿದ್ದರು. ಅವರ ಮಾತನ್ನು ಉಳಿಸಿಕೊಂಡಿದ್ದಾರೆ. ನಿಜಕ್ಕೂ ಹೇಳಬೇಕಂದ್ರೆ ಸುದೀಪ್ ಸರ್ ಕರ್ನಾಟಕ ಕಿರೀಟದ ಮೇಲಿರುವಂತಹ ವಜ್ರ. ಬಿಗ್’ಬಾಸ್ ವೇದಿಕೆಯಲ್ಲಿ ‘ಟಕಿಲ’ ಹಾಡು ಬಿಡುಗಡೆ ಆಗಿದ್ದಕ್ಕೆ ಅದು ಸಾಕಷ್ಟು ಜನಪ್ರಿಯವಾಗಿದೆ. ಇದರಲ್ಲೇ ಗೊತ್ತಾಗುತ್ತೆ ಬಿಗ್ ಬಾಸ್ ಎಷ್ಟು ಫೇಮಸ್ ಅಂತ” ಎಂದು ಹೇಳಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top