fbpx
ಕಿರುತೆರೆ

ದಿವಾಕರ್ ಫ್ಯುಚರ್ ಪ್ಲಾನ್’ನ ಚಂದನ್ ಹೇಗೆ ಮಾಡಿದ್ದಾರೆ ಅನ್ನೋದು ತಿಳ್ಕೊಂಡ್ರೆ ಭೇಷ್ ಅಂತೀರಾ!

ದಿವಾಕರ್ ಫ್ಯುಚರ್ ಪ್ಲಾನ್’ನ ಚಂದನ್ ಹೇಗೆ ಮಾಡಿದ್ದಾರೆ ಅನ್ನೋದು ತಿಳ್ಕೊಂಡ್ರೆ ಭೇಷ್ ಅಂತೀರಾ!

 

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ‘ಬಿಗ್ ಬಾಸ್ ಕನ್ನಡ ಸೀಸನ್-5’ ಅಂತ್ಯಗೊಂಡಿದ್ದು ವೀಕ್ಷಕರ ಬಯಕೆಯಂತೆ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವಾಕರ್‌ ಬಿಗ್‌ಬಾಸ್‌ ಸೀಸನ್ 5ನ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ..

 

ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿರುವಾಗ ಟಾಸ್ಕ್ ಮಾಡುವ ವೇಳೆಯಲ್ಲಿ “ದಿವಾಕರ್ ಅವರೇ ಬಿಗ್’ಬಾಸ್ ಟ್ರೋಫಿ ಗೆಲ್ಲಬೇಕು, ಅವರು ಗೆದ್ದರೆ ನನಗೆ ತುಂಬಾ ಸಂತೋಷ ಎಂದು ಚಂದನ್ ಹೇಳುತ್ತಿದ್ದರು. ಅಲ್ಲದೇ ತಮಗೆ ದುಡ್ಡಿನ ಮೇಲೆ ಆಸೆ ಇಲ್ಲ ದುಡ್ಡನ್ನು ನಾನು ಸುಲಭವಾಗಿ ಸಂಪಾಧಿಸಬಹುದು,ನನ್ನಲ್ಲಿ ಆ ಪ್ರತಿಭೆ ಇದೆ ಹಾಗಾಗಿ ದಿವಾಕರ್ ಗೆದ್ದರೆ ಹಣ ಅವನಿಗೆ ಉಪಯೋಗವಾಗುತ್ತದೆ ಎಂದು ಚಂದನ್ ಶೆಟ್ಟಿ ಹೇಳುತ್ತಿದ್ದರು. ಆದರೆ ಚಂದನ್ ಅವರೇ ಬಿಗ್’ಬಾಸ್ ಗೆದ್ದ ಬಳಿಕ ತನ್ನ ಗೆಳೆಯ ದಿವಾಕರ್ ಗೆ ಹಣಸಹಾಯ ಮಾಡುವ ಬಗ್ಗೆ ಯಾವುದೇ ಮಾತನ್ನು ಕೂಡ ಆಡಲಿಲ್ಲ., ಚಂದನ್ ಅವರ ಈ ನಡೆ ತುಂಬಾ ಟೀಕೆಗೆ ಗುರಿಯಾಗಿತ್ತು.

 

 

ಆದರೆ ದಿವಾಕರ್ ಫ್ಯುಚರ್ ಬಗ್ಗೆ ಚಂದನ್ ಶೆಟ್ಟಿ ಆಡಿರುವ ಈ ಮಾತುಗಳು ಈಗ ಟೀಕೆಕಾರರ ಮಾಯಿ ಮುಚ್ಚಿಸಿದೆ. ಹೌದು ಚಂದನ್ ಅವರು ದಿವಾಕರ್’ಗಾಗಿ ಒಂದು ಕಥೆಯನ್ನು ಸಿದ್ಧಪಡಿಸಿದ್ದರಂತೆ ಸಾದ್ಯವಾದರೆ ಆ ಚಿತ್ರವನ್ನು ಅವರೇ ನಿರ್ದೇಶಿಸುತ್ತಾರಂತೆ. ಇನ್ನು ದಿವಾಕರ್ ಮಾಡುವ ಮುಂದಿನ ಚಿತ್ರಗಳಿಗೆ ಚಂದನ್ ಅವರೇ ಸಂಗೀತ ನೀಡುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರಂತೆ. “ದಿವಾಕರ್ ಬಳಿ ಒಳ್ಳೆಯ ಪ್ರತಿಭೆಯಿದೆ ಅದನ್ನು ಸರಿಯಾಗಿ ಉಪಯೋಗ ಪಡಿಸಿಕೊಳ್ಳಬೇಕು. ಈಗ ಸಹಾಯ ಮಾಡುವ ನೆಪದಲ್ಲಿ ಆತನಿಗೆ ದುಡ್ಡುಕೊಟ್ಟರೆ ಸ್ನೇಹಕ್ಕೆ ಬೆಳೆಯಿರೋದಿಲ್ಲ” ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top