fbpx
ಮನೋರಂಜನೆ

ಡಿ ಬಾಸ್ ಉತ್ಸವಕ್ಕೆ ಭರ್ಜರಿಯಾಗಿ ಸಜ್ಜಾಗಿದ್ದಾರೆ ದರ್ಶನ್ ಅಭಿಮಾನಿಗಳು.

ಡಿ ಬಾಸ್ ಉತ್ಸವಕ್ಕೆ ಭರ್ಜರಿಯಾಗಿ ಸಜ್ಜಾಗಿದ್ದಾರೆ ದರ್ಶನ್ ಅಭಿಮಾನಿಗಳು.

 

 

ದೇವರ ಹೆಸರಲ್ಲಿ ಉತ್ಸವ ಹಬ್ಬ ಮಾಡೋದು ವಾಡಿಕೆ ಆದರೆ ದೇವರ ರೀತಿಯಲ್ಲಿ ಮಾನವನಿಗೂ ಜಾತ್ರೆಯ ರೀತಿ ಹಬ್ಬ ಮಾಡಬೇಕು ಅಂದರೆ ಆತ ಕಲಾವಿದನಾಗಿರುತ್ತಾನೆ ಎಂತಲೇ ಅರ್ಥ. ಹೌದು ಅಂತಹ ಕಲಾವಿದರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್. ಸ್ಯಾಂಡಲ್ ವುಡ್ ನಲ್ಲಿ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ದಚ್ಚು ಹುಟ್ಟು ಹಬ್ಬಕ್ಕಾಗಿ ಅವರ ಅಭಿಮಾನಿಗಳು ತಿಂಗಳಿಂದಲೇ ತಯಾರಿ ನಡೆಸಿಕೊಂಡು ಬಂದಿದ್ದಾರೆ.

 

 

ದೇವರ ಹಬ್ಬಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುವ ರೀತಿಯಲ್ಲಿ ಫೆಬ್ರವರಿ 16ರ ನಟ ದರ್ಶನ್ ಅವರ ಹುಟ್ಟುಹಬ್ಬದ ಸಿದ್ಧತೆ ಜೋರಾಗಿ ನಡೆಯುತ್ತಾ ಇದೆ. ಈ ಭಾರಿ ಡಿ ಉತ್ಸವ ಎಂಬ ಹೆಸರಿನಲ್ಲಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಆಚರಣೆಯನ್ನು ಮಾಡುತ್ತಿರುವ ದರ್ಶನ್ ಅಭಿಮಾನಿಗಳು ಮುಂದಿನ ವರ್ಷದಿಂದ ಇದೇ ಹೆಸರಿನಲ್ಲಿ ಆಚರಿಸುತ್ತಾರಂತೆ. ಅಷ್ಟೇ ಅಲ್ಲದೇ ದರ್ಶನ್ ಹುಟ್ಟುಹಬ್ಬಕ್ಕೆಂದು ಅಧಿಕೃತ ಲೋಗೋವನ್ನು ಕೂಡ ಮಾಡಿಸಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುವ ಸೂಚನೆಯನ್ನು ನೀಡಿದ್ದಾರೆ.

 

 

ಡಿ ಕಂಪನಿ ಸೇರಿದಂತೆ ದರ್ಶನ್ ಹೆಸರಿನಲ್ಲಿರುವ ಅನೇಕ ಅಭಿಮಾನಿ ಸಂಘಗಳು ಸೇರಿ ದರ್ಶನ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ನಡೆಸಲು ಮುಂದಾಗಿದ್ದು ಅದಕ್ಕಾಗಿ ರಾಜ್ಯದ ವಿವಿಧ ಭಾಗಗಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಯಂತೆ. ಇನ್ನು ಹಿರೇಕೆರೂರಿನಲ್ಲಿ ದರ್ಶನ್ ಅಭಿಮಾನಿಗಳ ಸಂಘಟನೆಯಿಂದ ಕಬ್ಬಡಿ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ..

ಈ ಭಾರಿಯ ಇಷ್ಟೊಂದು ವಿಶೇಷವಾಗಿ ದರ್ಶನ್ ಹುಟ್ಟುಹಬ್ಬವನ್ನು ಆಚರಿಸಲು ಕಾರಣವೆಂದರೆ ಅವರು ತಮ್ಮ ವೃತ್ತಿ ಬದುಕಿನಲ್ಲಿ 50 ಚಿತ್ರಗಳನ್ನು ಪೂರೈಸಿರುವುದು. ಹಾಗಾಗಿ 50ನೇ ಚಿತ್ರದ ಸಂಭ್ರಮ ಮತ್ತು ದರ್ಶನ್ ಹುಟ್ಟುಹಬ್ಬ ಎರಡು ಕೂಡ ಒಂದೇ ವೇದಿಕೆಯಲ್ಲಿ ಅದ್ಧೂರಿಯಾಗಿ ಮಾಡು ಪ್ಲಾನ್ ದರ್ಶನ್ ಅಭಿಮಾನಿಗಳದ್ದು.ಕುರುಕ್ಷೇತ್ರ ಸಿನಿಮಾದಲ್ಲಿನ ದರ್ಶನ್ ಅವರ ದುರ್ಯೋಧನನ ಲುಕ್ ಅನ್ನು ಸ್ಯಾಂಡ್ ಆರ್ಟ್’ನಲ್ಲಿ ಮಾಡಿಸಲಾಗಿದೆ. ಇದೇ ದಿನ ಕುರುಕ್ಷೇತ್ರ ಚಿತ್ರದ ಟೀಸರ್ ಕೂಡ ರಿಲೀಸ್ ಆಗುವ ಸಾಧ್ಯತೆ ಇದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top