fbpx
ಮನೋರಂಜನೆ

ನಾಳೆ ರಿಲೀಸ್ ಆಗ್ತಿದೆ ದರ್ಶನ್ ಅಭಿನಯದ ಹೊಸ ಹಾಡು!

ನಾಳೆ ರಿಲೀಸ್ ಆಗ್ತಿದೆ ದರ್ಶನ್ ಅಭಿನಯದ ಹೊಸ ಹಾಡು!

 

 

ಇತ್ತೀಚಿಗೆ ಚಿತ್ರೀಕರಣಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸರ್ಜಾ ಫ್ಯಾಮಿಲಿಯ ಕಲಾವಿದರು ಹೆಜ್ಜೆ ಹಾಕಿದ್ದ ಹಾಡನ್ನು ಪ್ರೇಮಬರಹ ಚಿತ್ರಕ್ಕಾಗಿ ಶೂಟಿಂಗ್ ಮಾಡಲಾಗಿತ್ತು. ಈಗ ಆ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಫೆಬ್ರವರಿ 1 ಅಂದರೆ ನಾಳೆ ದರ್ಶನ್ ಕುಣಿತದ ಈ ಹಾಡು ಬಿಡುಗಡೆಯಾಗುತ್ತಿದೆ..

 

 

ಪ್ರೇಮಬರಹ ಚಿತ್ರದ ವಿಶೇಷ ಹಾಡೊಂದರಲ್ಲಿ ಅರ್ಜುನ್ ಸರ್ಜಾ , ಚಿರಂಜೀವಿ ಸರ್ಜಾ,ಐಶ್ವರ್ಯ ಅರ್ಜುನ್ ಹಾಗೂ ಧ್ರುವ ಸರ್ಜಾ ಜೊತೆಗೆ ದರ್ಶನ್ ಕೂಡ ಹೆಜ್ಜೆಹಾಕಿದ್ದಾರೆ. ಸರ್ಜಾ ಕುಟುಂಬ ಆಂಜನೇಯನ ಭಕ್ತರಾಗಿರುವುದರಿಂದ ಈ ಹಾಡಿನಲ್ಲಿ ಎಲ್ಲರೂ ಹನುಮನ ಭಂಟನ ರೀತಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ‘ತಿಪ್ಪಸಂದ್ರ’ದ ಆಂಜನೇಯ ದೇವಸ್ಥಾನದ ಬಳಿಯಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದ್ದು ಹಾಡಿಗೆ ಮೋಹನ್ ಕೊರಿಯೋಗ್ರಫಿ ಮಾಡಿದ್ದಾರೆ. ವಿಜಯ ನರಸಿಂಹ ಬರೆದಿರುವ ಈ ಹಾಡನ್ನು ಎಸ್ ಪಿ ಬಾಲಸುಬ್ರಮಣ್ಯಂ ಹಾಡಿದ್ದು ಜೆಸ್ಸಿಗಿಫ್ಟ್ ಸಂಗೀತ ನಿರ್ದೆಶನ ಮಾಡಿದ್ದಾರೆ.

 

 

ಅಂದಹಾಗೆ ಪ್ರೇಮಬರಹ ಚಿತ್ರಕ್ಕೆ ಬಿಗ್ ಬಾಸ್ ಸೀಸನ್ 3ರ ರನ್ನರ್ ಅಪ್ ಚಂದನ್ ನಾಯಕ. ಸಾಧು ಕೋಕಿಲಾ, ಸುಹಾಸಿನಿ, ರಂಗಾಯಣ ರಘು ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದು ಜೆಸ್ಸಿ ಗಿಫ್ಟ್ ಅವರ ಸಂಗೀತ ಚಿತ್ರಕ್ಕಿದೆ. ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಕೂಡ ಅರ್ಜುನ್ ಸರ್ಜಾ ಅವರೇ ಹೊತ್ತಿದ್ದಾರೆ.

ಪ್ರೇಮಬರಹ ಚಿತ್ರಕ್ಕೆ ಸೆನ್ಸಾರ್ ಬೋರ್ಡ್’ನಿಂದ ಯಾವುದೇ ಕಟ್ ಇಲ್ಲದೆ u ಸರ್ಟಿಫಿಕೆಟ್ ಸಿಕ್ಕಿದ್ದು ಫೆಬ್ರವರಿ 09ರಂದು ಪ್ರೇಮಿಗಳ ದಿನಾಚರಣೆಯ ಅಂಗವಾಗಿ ತೆರೆಗೆ ಬರುತ್ತಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top