fbpx
ಮನೋರಂಜನೆ

ಈ ಚಿತ್ರದಲ್ಲಿ ಮಾಮೂಲು ದೆವ್ವಗಳಿಲ್ಲ!

ಈ ಚಿತ್ರದಲ್ಲಿ ಮಾಮೂಲು ದೆವ್ವಗಳಿಲ್ಲ!

 

 

 

 

ಇದು ಹೇಳಿ ಕೇಳಿ ಕನ್ನಡ ಚಿತ್ರರಂಗದ ಪಾಲಿಗೆ ಹಾರರ್ ಜಮಾನ. ವಿಶೃತ್ ನಾಯ್ಕ ನಿರ್ದೇಶನದ ಮಂಜರಿ ಚಿತ್ರವೂ ಆ ಸಾಲಿನಲ್ಲಿ ಸೇರುತ್ತದೆಯಾದರೂ ಅದು ಮಾಮೂಲು ವರಸೆಯ ದೆವ್ವದ ಕಥೆ ಅಲ್ಲ ಎಂಬ ಟ್ವಿಸ್ಟನ್ನು ಚಿತ್ರತಂಡ ಈಗಾಗಲೇ ಕೊಟ್ಟಿದೆ. ಅಪ್ಪಟ ಹಾರರ್ ಕಥೆಯಾದರೂ ಸಿದ್ಧಸೂತ್ರಗಳಾಚೆ ರೆಡಿಯಾಗಿದೆ ಎಂಬುದೇ ಮಂಜರಿ ಚಿತ್ರದ ವಿಶೇಷ ಮತ್ತು ಕುತೂಹಲ. ಮಂಜರಿ ನಾಳೆ ಬಿಡುಗಡೆಯಾಗುತ್ತಿರೋದರಿಂದ ಅದರ ಹೊಸತನವೇನೆಂಬ ಕುತೂಹಲ ಇನ್ನೊಂದು ದಿನದಲ್ಲಿಯೇ ತಣಿಯಲಿದೆ.

ಶಂಕರ್ ಹಾಗೂ ಕಿರಣ್ ಗೌಡ ಸಿನಿಮಾಪ್ರೀತಿ ಹೊಂದಿರುವವರು. ಇವರಿಬ್ಬರೂ ಸೇರಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ವಿಶೃತ್ ನಾಯ್ಕ ನಿರ್ದೇಶನ ಮಾಡಿದ್ದಾರೆ. ಒಂದಷ್ಟು ಕಾಲದ ನಂತರ ಚಿತ್ರ ರಂಗದಿಂದ ಮರೆಯಾದಂತಿದ್ದ ನಟಿ ರೂಪಿಕಾ ಈ ಚಿತ್ರದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

 

 

 

 

 

ಒಂದೊಳ್ಳೆ ಸಿನಿಮಾ ಮಾಡಬೇಕೆಂಬ ತುಡಿತ ಹೊಂದಿರೋ ವಿಶೃತ್ ನಾಯ್ಕ ಈ ಚಿತ್ರಕ್ಕೆ ಮಾಮೂಲಿ ಹಾರರ್ ಸಿನಿಮಾಗಳಿಗಿಂತಲೂ ವಿಭಿನ್ನವಾದೊಂದು ಕಥೆ ರೆಡಿ ಮಾಡಿಕೊಂಡಿದ್ದಾರಂತೆ. ಸಾಮಾನ್ಯವಾಗಿ ಇಂಥಾ ಹಾರರ್ ಚಿತ್ರಗಳೆಂದ ಮೇಲೆ ಯಾವುದೋ ಸಾವು, ದೆವ್ವದ ದ್ವೇಷ ಮುಂತಾದ ಮಾಮೂಲಿ ಫಾರ್ಮಾಟ್ ಒಂದಿದೆ. ಆದರೆ ಮಾಡಿದರೆ ಹೊಸತೇನನ್ನೋ ಮಾಡಬೇಕೆಂಬ ಮನಸ್ಥಿತಿ ಹೊಂದಿರೋ ವಿಶೃತ್ ಹೊಸಾ ಬಗೆಯಲ್ಲಿಯೇ ಇಡೀ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರಂತೆ. ಇದಕ್ಕೆ ನಿರ್ಮಾಪಕರಾದ ಶಂಕರ್ ಹಾಗೂ ಕಿರಣ್ ಗೌಡ ಹೆಜ್ಜೆ ಹೆಜ್ಜೆಗೂ ಸಾಥ್ ಕೊಟ್ಟು ಮಂಜರಿಯನ್ನು ಚೆಂದಗೆ ನಿರ್ಮಾಣ ಮಾಡಿದ್ದಾರೆಂಬುದು ಚಿತ್ರ ತಂಡದ ಭರವಸೆ.

 

 

 

 

 

ಇನ್ನುಳಿದಂತೆ ನಟಿ ರೂಪಿಕಾ ಅವರದ್ದಿಲ್ಲಿ ಎರಡು ಶೇಡ್ ಇರುವ ಸವಾಲಿನ ಪಾತ್ರವಂತೆ. ಈ ಪಾತ್ರದ ಮೂಲಕವೇ ರೂಪಿಕಾಗೆ ಮತ್ತೊಂದು ಸುತ್ತಿನ ಗ್ರ್ಯಾಂಡ್ ಓಪನಿಂಗ್ ಸಿಗುತ್ತದೆ ಎಂಬ ನಿರೀಕ್ಷೆಗಳೂ ಇದ್ದಾವೆ. ಮಂಜರಿಯ ಅಸಲೀ ಆಟ ನೋಡಲು ಇನ್ನು ಕೆಲ ಘಂಟೆಗಳಷ್ಟೇ ಬಾಕಿ ಉಳಿದಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top