fbpx
ಮನೋರಂಜನೆ

GST ಗ್ರ್ಯಾಂಡ್ ಸಕ್ಸಸ್ ಆದ ನಂತರ GST-2 ಮಾಡಲು ಮುಂದಾದ ಆರ್’ಜಿವಿ.

GST ಗ್ರ್ಯಾಂಡ್ ಸಕ್ಸಸ್ ಆದ ನಂತರ GST-2 ಮಾಡಲು ಮುಂದಾದ ಆರ್’ಜಿವಿ.

 

 

ರಾಮ್ ಗೋಪಾಲ್ ವರ್ಮಾ ಅವರ ವಿವಾದಾತ್ಮಕ ಚಿತ್ರ “ಗಾಡ್, ಸೆಕ್ಸ್ ಅಂಡ್ ಟ್ರುತ್” (GST) ಇಂಟರ್ನೆಟ್ ನಲ್ಲಿ ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಚಿತ್ರದ ಮುಂದಿನ ಅವತರಿಣಿಕೆಯನ್ನು ತಯಾರು ಮಾಡಲು ಮುಂದಾಗಿದ್ದಾರೆ. ಇದೇ ಸೋಮವಾರ ಅವರು ಗಾಡ್, ಸೆಕ್ಸ್ ಅಂಡ್ ಟ್ರುತ್” (GST) ಸೀಕ್ವೆಲ್ ಅನ್ನು ಅತಿ ಶೀಘ್ರವಾಗಿ ಮಾಡುವುದಾಗಿ ಘೋಷಿಸಿದ್ದಾರೆ.

 

 

ಪ್ರತಿಭಟನೆಗಳು ಮತ್ತು ವರ್ಮಾ ವಿರುದ್ಧದ FIR ಗಳ ಹೊರತಾಗಿಯೂ, ನಿರ್ದೇಶಕ ಶನಿವಾರ ಆನ್ಲೈನ್ನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಮಹಿಳೆಯೊಬ್ಬಳ ಲೈಂಗಿಕ ಆಸಕ್ತಿ ಮತ್ತು ಪ್ರಭಾವದ ಕುರಿತು ಕಥೆ ಮಾಡಿರುವ ವರ್ಮಾ ತನ್ನ ಈ ಚಿತ್ರದಲ್ಲಿ ಮಿಯಾ ಮಲ್ಕೋವಾ ಸಂಪೂರ್ಣವಾಗಿ ಬೆತ್ತಲೆಯಾಗಿ ತೋರಿಸಿದ್ದಾರೆ. ಚಿತ್ರ ವೀಕ್ಷಣೆಗೆ 150 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ.

 

 

ತಯಾರಿಕರ ಪ್ರಕಾರ ಗಾಡ್, ಸೆಕ್ಸ್ ಅಂಡ್ ಟ್ರುತ್” (GST) ಚಿತ್ರವು ಹಣ ಗಳಿಕೆಯ ವಿಚಾರದಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆಯಂತೆ. ಅಲ್ಲದೆ ಚಿತ್ರದ ಬಗ್ಗೆ ವರ್ಮಾ ಅವರಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಇದರ ಸೀಕ್ವೆಲ್ ಮಾಡಲು ಪ್ರೇರಣೆಯಾಗಿದೆಯಂತೆ.

 

 

ಇನ್ನು ಜನಪ್ರಿಯತೆಯ ವಿಚಾರಕ್ಕೆ ಬಂದರೆ “ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಗಿಂತ ಮಿಯಾ ಮಲ್ಕೊವಾ ಭಾರತೀಯರಲ್ಲಿ ಹೆಚ್ಚು ಜನಪ್ರಿಯರಾಗಿದ್ದಾಳೆ. ಕಳೆದ ಒಂದು ತಿಂಗಳಿನಲ್ಲಿ ಮೋದಿ, ಅಂಬಾನಿಗಿಂತ ಮಿಯಾ ಕುರಿತು ಸರ್ಚ್ ಮಾಡಿರುವವರೇ ಹೆಚ್ಚು ಭಾರತೀಯ” ಎಂದು ಗೂಗಲ್ ಸಚಿತ್ರದ ಜೊತೆ ಟ್ವೀಟ್ ಮಾಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top