fbpx
ಹೆಚ್ಚಿನ

ವಿಶ್ವಗುರುವಿನತ್ತ ಸಾಗುತ್ತಿರುವ ಭಾರತ.. ವಿಶ್ವದ ಶ್ರೀಮಂತ ದೇಶದಲ್ಲಿ 6ನೇ ಸ್ಥಾನ ಪಡೆದ ಭಾರತ.

ವಿಶ್ವಗುರುವಿನತ್ತ ಸಾಗುತ್ತಿರುವ ಭಾರತ.. ವಿಶ್ವದ ಶ್ರೀಮಂತ ದೇಶದಲ್ಲಿ 6ನೇ ಸ್ಥಾನ ಪಡೆದ ಭಾರತ.

ವಿಶ್ವದ ಶ್ರೀಮಂತ ದೇಶಗಳಲ್ಲಿ ಭಾರತಕ್ಕೆ 6ನೇ ಸ್ಥಾನ ಲಭಿಸಿದೆ ಎಂದು ಸಮೀಕ್ಷೆಯ ವರದಿಯೊಂದು ತಿಳಿಸಿದೆ. ‘ನ್ಯೂ ವರ್ಲ್ಡ್‌ ವೆಲ್ತ್‌’ ಸಮೀಕ್ಷಾ ವರದಿಯ ಪ್ರಕಾರ ಭಾರತ ದೇಶದ ನಾಗರಿಕರ ಒಟ್ಟು ಖಾಸಗಿ ಸಂಪತ್ತಿನ ಮೌಲ್ಯ ₹ 534 ಲಕ್ಷ ಕೋಟಿ ಇದೆ. ಹಿಂದಿನ ವರ್ಷ ಭಾರತ ದೇಶಕ್ಕೆ 7ನೇ ಸ್ಥಾನ ಲಭಿಸಿತ್ತು. ಅಮೇರಿಕಾ ದೇಶ ಪ್ರಥಮ ಸ್ಥಾನದಲ್ಲಿ ಇದೆ. ಸಂಪತ್ತಿನ ಮಾರುಕಟ್ಟೆಯಲ್ಲಿ ಭಾರತದ ಸಾಧನೆ ಅತಿ ಉತ್ತಮವಾಗಿದೆ ಎನ್ನಲಾಗಿದೆ. 2016ರಲ್ಲಿ ಈ ಸಂಪತ್ತು ₹ 427 ಲಕ್ಷ ಕೋಟಿ ಇತ್ತು. 2017ರಲ್ಲಿ ಶೇ 25ರಷ್ಟು ಏರಿಕೆ ಖಂಡಿದೆ.

 

 

ಬಯಲು ಶೌಚಾಲಯದ ಸಮಸ್ಯೆ, ಅಪೌಷ್ಟಿಕತೆ, ಅನಕ್ಷರತೆ, ನಿರುದ್ಯೋಗ ಸಮಸ್ಯೆ ಸೇರಿದಂತೆ ಕಿತ್ತು ತಿನ್ನುವ ಬಡತನ ಅನೇಕ ಸಮಸ್ಯೆಗಳ ನಡುವೆಯೂ ಭಾರತ ವಿಶ್ವದ ಹತ್ತು ಶ್ರೀಮಂತ ರಾಷ್ಟ್ರಗಳ ಪೈಕಿ ಆರನೇ ಸ್ಥಾನ ಪಡೆದಿದೆ.

 

 

ಶ್ರೀಮಂತ ರಾಷ್ಟ್ರಗಳ ಪಟ್ಟಿ
1. ಅಮೆರಿಕ – 64,584 ಶತಕೋಟಿ ಡಾಲರ್‌
2. ಚೀನಾ – 24,803 ಶತಕೋಟಿ ಡಾಲರ್‌
3. ಜಪಾನ್‌ – 19,522 ಶತಕೋಟಿ ಡಾಲರ್‌

4. ಬ್ರಿಟನ್‌ – 9,919 ಶತಕೋಟಿ ಡಾಲರ್‌
5. ಜರ್ಮನಿ – 9,660 ಶತಕೋಟಿ ಡಾಲರ್‌

6. ಭಾರತ – 8,230 ಶತಕೋಟಿ ಡಾಲರ್‌
7. ಫ್ರಾನ್ಸ್‌ – 6,649 ಶತಕೋಟಿ ಡಾಲರ್‌
8. ಕೆನಡಾ – 6,393 ಶತಕೋಟಿ ಡಾಲರ್‌
9. ಆಸ್ಟ್ರೇಲಿಯಾ – 6,142 ಶತಕೋಟಿ ಡಾಲರ್‌
10. ಇಟಲಿ – 4,276 ಶತಕೋಟಿ ಡಾಲರ್‌

 

 

ಚೀನಾ ದೇಶದ ಸಂಪತ್ತು ಶೇ.22 ಹೆಚ್ಚಾಗಿದ್ದು, ಇಡೀ ವಿಶ್ವದ ಸಂಪತ್ತು ಶೇ.12ರಷ್ಟು ಏರಿಕೆಯನ್ನು ಕಂಡುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top