fbpx
ಹೆಚ್ಚಿನ

ಸಂಚರಿಸುತ್ತಿದ್ದ ವಿಮಾನದಲ್ಲೇ ಹೆರಿಗೆ ಮಾಡಿಸಿದ ಭಾರತೀಯ ವೈದ್ಯನಿಗೆ ಅಭಿನಂದನೆಯ ಮಹಾಪೂರ

ಸಂಚರಿಸುತ್ತಿದ್ದ ವಿಮಾನದಲ್ಲೇ ಹೆರಿಗೆ ಮಾಡಿಸಿದ ಭಾರತೀಯ ವೈದ್ಯನಿಗೆ ಅಭಿನಂದನೆಯ ಮಹಾಪೂರ

 

ಗೆಳೆಯರೊಬ್ಬರ ಮದುವೆ ಸಮಾರಂಭಕ್ಕಾಗಿ ಭಾರತಕ್ಕೆ ಅಗಿಮಿಸಿದ್ದ ಭಾರತೀಯ ಮೂಲದ ಅಮೆರಿಕನ್ ವೈದ್ಯ ವಿದ್ಯಾರ್ಥಿ ಡಾ. ಸಿಜ್‌ ಹೇಮಲ್‌(27) ಮರಳಿ ದೆಹಲಿಯಿಂದ ನ್ಯೂಯಾರ್ಕ್ ಗೆ ವಿಮಾನದಲ್ಲಿ ಸಾಗುತ್ತಿರುವಾಗ ಮಹಿಳೆಯೊಬ್ಬರಿಗೆ ಹೆರಿಗೆಯ ನೋವು ಕಾಣಿಸಿಕೊಂಡಾಗ ವಿಮಾನದಲ್ಲಿದ್ದ ಇನ್ನೊಬ್ಬರೊಂದಿಗೆ ಸೇರಿ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ತಾಯಿ ಮಗು ಈಗ ಆರೋಗ್ಯವಾಗಿದ್ದರೆ.

 

 

ದೆಹಲಿಯಿಂದ ನ್ಯೂಯಾರ್ಕ್‌ಗೆ ಪ್ರಯಾಣ ಮಾಡುತ್ತಿರುವಾಗ ಅವರು ಪ್ಯಾರಿಸ್‌ನಲ್ಲಿ ವಿಮಾನವನ್ನು ಬದಲಾವಣೆ ಮಾಡಬೇಕಿತ್ತು. ಟ್ರಾನ್ಸ್‌-ಅಟ್ಲಾಂಟಿಕ್‌ ವಿಮಾನವು 35 ಸಾವಿರ ಫೀಟ್ ಎತ್ತರದಲ್ಲಿ ಗಗನದಲ್ಲಿ ಸಂಚರಿಸುತ್ತಿದ್ದಾಗ, ಮಹಿಳೆಯೊಬ್ಬರಿಗೆ ಚಿಕಿತ್ಸೆಯ ಅವಶ್ಯಕೆತೆ ಇತ್ತು ಆಗ ವಿಮಾನದಲ್ಲಿದ್ದ ಸಿಬ್ಬಂದಿ ಯಾರಾದರೂ ಡಾಕ್ಟರ್ ಇದ್ದೀರಾ ಎಂದು ಕೇಳಿದಾಗ ಹೇಮಲ್‌ ಅವರು ಮಹಿಳೆಗೆ ಕಿಡ್ನಿ ಕಲ್ಲುಗಳ ಸಮಸ್ಯೆ ಇರಬಹುದು ಎಂದು ಹೋದರಂತೆ.

 

 

 

ಮಹಿಳೆಯ ಬಳಿ ಹೋದಾಗ ಅವಳಿಗೆ ಹೆರಿಗೆಯ ನೋವು ಇದೆ ಎಂದು ತಿಳಿದಾಗ ಅವರು ದೃತಿಗೆಡದೆ ವಿಮಾನದಲ್ಲಿದ್ದ ಮಕ್ಕಳ ತಜ್ಞರ ಸಲಹೆ ಪಡೆದು ಮಹಿಳೆಗೆ ಯಶಸ್ವಿ ಹೆರಿಗೆ ಮಾಡಿದ್ದಾರೆ. ಮಹಿಳೆಗೆ ಗಂಡು ಮಗು ಹುಟ್ಟಿದು, ಆ ಮಗುವಿಗೆ ಜೆಕ್ ಎಂದು ನಾಮಕರಣ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಮಹಿಳೆ, ಆಸ್ಪತ್ರೆಯಲ್ಲಿ ನೀಡುವ ಚಿಕಿತ್ಸೆ ನನಗೆ ವಿಮಾನದಲ್ಲಿ ಸಿಕ್ಕಿದೆ ಎಂದು ಹರ್ಷ ವ್ಯಕ್ತ ಪಡಿಸಿದ್ದಾಳೆ. ವೈದ್ಯರಿಗೆ ಧನ್ಯವಾದ ತಿಳಿಸಿದ್ದಾಳೆ.

 

 

ಜೆಟ್ ಏರ್‌ವೇಸ್ ನಿಯಮಾವಳಿ ಪ್ರಕಾರ ಮಹಿಳೆಯರು ಗರ್ಭ ಧರಿಸಿ 36 ವಾರ ಆಗುವ ತನಕ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಆದರೆ ಭಾನುವಾರ ವಿಮಾನದಲ್ಲಿ ಗಂಡು ಮಗುವಿಗೆ ಜನನ ನೀಡಿದ ಮಹಿಳೆ 30 ವಾರಗಳ ಗರ್ಭಿಣಿ ಆಗಿದ್ದರು ಎಂದು ತಿಳಿದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top