fbpx
ದೇವರು

ಇಂದ್ರ ಪದವಿ ಕಳೆದುಕೊಳ್ಳಬಹುದೆಂದು ಇಂದ್ರ ಏನು ಮಾಡಿದ ಗೊತ್ತಾ ? ಓದಿ ಶುಣ ಶೇಷನ ಕಥೆ

ಇಂದ್ರ ಪದವಿ ಕಳೆದುಕೊಳ್ಳಬಹುದೆಂದು ಇಂದ್ರ ಏನು ಮಾಡಿದ ಗೊತ್ತಾ ? ಓದಿ ಶುಣ ಶೇಷನ ಕಥೆ

 

ವಿಶ್ವಾಮಿತ್ರನು ತಪಸ್ಸು ಮಾಡುವಾಗಲೇ ಅಯೋಧ್ಯೆಯಲ್ಲಿ ಅಂಬರೀಶನೆಂಬ ರಾಜನು ಆಳುತ್ತಿದ್ದನು. ಅವನೊಂದು ಯಾಗವನ್ನು ಆರಂಭಿಸಿದನು. ಆ ಯಾಗದಿಂದಾಗಿ ಇಂದ್ರ ಪದವಿಯನ್ನೇ ಅಂಬರೀಷ ಪಡೆಯುವನೆಂದು ಇಂದ್ರನಿಗೆ ಗಾಬರಿಯಾದಾಗ ಅಂಬರೀಶನ ಯಜ್ಞಾಶ್ವವನ್ನು ಇಂದ್ರನು ಅಪಹರಿಸಿದನು. ಇದನ್ನು ತಿಳಿದ ಅಂಬರೀಷನು ಅಶ್ವವನ್ನು ಹಿಂತಿರುಗಿಸುವಂತೆ ಇಂದ್ರನನ್ನು ಕೇಳಿದನು. ಸ್ವತಃ ಯಜ್ಞದಲ್ಲಿ ಬಲಿಯಾಗುವ ವ್ಯಕ್ತಿಯನ್ನು ಕರೆತಂದರೆ ಅಶ್ವವನ್ನು ಕೊಡುತ್ತೇನೆ ಎಂದನು ಇಂದ್ರ ಅಂಬರೀಷನಿಗೆ.

 

 

ಯಾರು ಸಾಯಲು ಬಯಸುವುದಿಲ್ಲ. ಅದರಿಂದಾಗಿ ಯಜ್ಞ ನಿಲ್ಲುವುದು ಎಂದು ಇಂದ್ರನು ಆಲೋಚಿಸಿದನು. ಹೀಗೆ ಇಂದ್ರನ ಮೋಸದಿಂದಾಗಿ ಅಂಬರೀಶನ ಯಜ್ಞವು ಅಪೂರ್ಣವಾಯಿತು. ಅವನು ತನ್ನ ಮನಸ್ಸಿನ ಶಾಂತಿಗಾಗಿ ಕಾಡು ಮೇಡುಗಳನ್ನು ಅಲೆದನು. ಬೃಗತುಂಗಾ ಎಂಬ ಪ್ರದೇಶದಲ್ಲಿರುವ ಋಚೀಕ ಎಂಬುವವನಿಗೆ ಮೂವರು ಮಕ್ಕಳಿದ್ದರು. ಅವರಿಂದ ತನ್ನ ಸಮಸ್ಯೆಯೂ ದೂರವಾಗಬಹುದು ಎಂದು ಆಲೋಚಿಸಿದನು. ಋಚೀಕನನ್ನು ತನ್ನ ಕಾರ್ಯಕ್ಕಾಗಿ ಬಲಿಯಾಗಲು ಒಬ್ಬ ಮಗನನ್ನು ಕೊಡು ಎಂದಾಗ ಋಚೀಕನು ಹಿರಿಯ ಮಗನನ್ನು ಹಿಡಿದುಕೊಂಡನು. ಅವನ ಪತ್ನಿ ಕಿರಿ ಮಗನನ್ನು ಹಿಡಿದಳು.

 

 

ಮದ್ಯದ ಮಗನೇ ಶುನಃಶೇಫ ಅವನು ಅಂಬರೀಷನು ನಾನು ನಿನ್ನೊಂದಿಗೆ ಬರುತ್ತೇನೆ ಎಂದು ಹೇಳಿದಾಗ ಅಂಬರೀಷನು ಒಪ್ಪಿ ಅವನನ್ನೇ ಕರೆದುಕೊಂಡು ಅಯೋಧ್ಯೆಗೆ ಬಂದನು. ದಾರಿಯಲ್ಲಿಯೇ ವಿಶ್ವಾಮಿತ್ರನು ತಪಸ್ಸು ಮಾಡುತ್ತಿದ್ದುದನ್ನು ಕಂಡು ನಮಿಸಿದನು. ಕೌಶಿಕನು ಅಂಬರೀಷನನ್ನು ಕುಶಲ ಕೇಳಿ ಈ ಹುಡುಗ ಯಾರು ? ಏಕೆ ಬಂದಿದ್ದಾನೆ ? ಎಂದು ಕೇಳಿದನು. ಅಂಬರೀಷನು ವಿಷಯ ತಿಳಿಸಿದನು.

 

 

ಕೌಶಿಕನು ಆ ಹುಡುಗನ ಬಗ್ಗೆ ಕರುಣೆಯಿಂದ ಎರಡು ಮಾತುಗಳನ್ನು ಉಪದೇಶಿಸಿದನು. ಯಾಗ ಕಾಲದಲ್ಲಿ ಅಗ್ನಿಗೆ ಅಭಿಮುಖನಾಗಿದ್ದು ಈ ಮಂತ್ರಗಳನ್ನು ಪಠಿಸು ನಿನಗೆ ಒಳ್ಳೆಯದಾಗುತ್ತದೆ. ಎಂದನು. ಅಂಬರೀಷನು ಶುನಃ ಶೇಷನನ್ನು ಕರೆದುಕೊಂಡು ಯಾಗವನ್ನು ಆರಂಭಿಸಿದನು. ಕೌಶಿಕನು ಬೋಧಿಸಿದ ಮಂತ್ರಗಳನ್ನು ಶುನಃಶೇಷನು ಪಠಿಸಿದಾಗ ಇಂದ್ರ ಉಪೇಂದ್ರರು ಅವನಿಗೆ ದೀರ್ಘಾಯುಷ್ಯವನ್ನು ಕರುಣಿಸಿದರು. ಅಂಬರೀಷನಿಗೆ ಯಜ್ಞ ಫಲ ಸಿಗುವಂತೆ ಮಾಡಿದರು. ಹೀಗೆ ಕೌಶಿಕನಿಂದಾಗಿ ಶುನಃಶೇಫನು ಬಲಿಯಾಗುವುದು ತಪ್ಪಿತ್ತು.

ಕೌಶಿಕನು ಪುನಃ ಉಗ್ರವಾದ ತಪಸ್ಸನ್ನು ಆಚರಿಸಿದನು. ಬ್ರಹ್ಮಾದಿ ದೇವತೆಗಳು ಕೌಶಿಕನಿಗೆ ‘ಋಷಿ’ ಎಂದು ಪದವಿ ನೀಡಿದರು. ಆದರೆ ಅವನ ಉದ್ದೇಶ ಬ್ರಹ್ಮರ್ಷಿ ಯಾಗುವುದಿತ್ತು. ಆದುದರಿಂದ ಮತ್ತೆ ಕೌಶಿಕನು ತಪಸ್ಸನ್ನು ಆಚರಿಸಲು ಹೊರಟನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top