fbpx
ಸಮಾಚಾರ

ಜಿಯೋನಿಂದ ಬಂತು ಭರ್ಜರಿ ಆಫರ್: ಕೇವಲ 49 ರೂಗಳಿಗೆ ತಿಂಗಳಿಗೆ ಅನ್’ಲಿಮಿಟೆಡ್ ಡಾಟಾ.

ಜಿಯೋನಿಂದ ಬಂತು ಭರ್ಜರಿ ಆಫರ್: ಕೇವಲ 49 ರೂಗಳಿಗೆ ತಿಂಗಳಿಗೆ ಅನ್’ಲಿಮಿಟೆಡ್ ಡಾಟಾ.

 

 

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಗ್ರಾಹಕರನ್ನು ಸೃಷ್ಟಿಸಿಕೊಂಡಿರುವ ರಿಲಯನ್ಸ್ ಜಿಯೋ ವರ್ಷಕ್ಕೆ ಎರಡು ಆಫರ್’ಗಳನ್ನ ಘೋಷಿಸಿದೆ. ಜಿಯೋ ಸಿಮ್ ಬಂದಾಗಿನಿಂದಲೂ ತತ್ತರಿಸಿ ಹೋಗಿದ್ದ ಉಳಿದ ಟೆಲಿಕಾಂ ಸಂಸ್ಥೆಗಳು ಜಿಯೋಗೆ ಸೆಡ್ಡುಹೊಡೆಯಲು ಒಂದರ ಮೇಲೆಂದು ಆಫರ್ ಗಳನ್ನೂ ನೀಡುತ್ತಾ ಬಂದಿದ್ದರೂ ತನ್ನ ಪ್ರಭಾವವನ್ನು ಕುಗ್ಗಿಸಿಕೊಳ್ಳದ ಜಿಯೋ ಭಾರಿ ಆಫರ್ ನೀಡಿದೆ. ಜಿಯೋ ತನ್ನ ನೂತನ ಆಫರ್ ಘೋಷಣೆ ಮಾಡಿದ್ದು ಕೇವಲ 49 ರೂ.ಗಳಿಗೆ ಅನಿಯಮಿತ ಡಾಟಾ ಹಾಗೂ ಕರೆ ಸೌಲಭ್ಯವನ್ನು ನೀಡುತ್ತಿದೆ.

 

 

ಆದರೆ 49 ರುಪಾಯಿಯ ಈ ಆಫ಼ರ್ ಸ್ಮಾರ್ಟ್ ಫೋನ್’ಗಳಿಗೆ ಲಭ್ಯವಿರುವುದಿಲ್ಲ ಬದಲಾಗಿ ಜಿಯೋ ಕಂಪನಿಯ ಬೇಸಿಕ್ ಹ್ಯಾಂಡ್ ಫೋನ್ ಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಪ್ರಕಾರ ಪ್ರತಿದಿನ ಹೈಸ್ಪೀಡ್ ಇಂಟರ್ನೆಟ್ ಸಿಗುತ್ತದೆ ನಂತರ ಇಂಟರ್ನೆಟ್ ವೇಗ ಕಡಿಮೆಯಾಗಲಿದೆ ಕರೆಗಳು ಒಂದು ತಿಂಗಳಿನ ವರೆಗೆ ಸಂಪೂರ್ಣ ಉಚಿತವಾಗಿರಲಿವೆ.

ಈ ಹೊಸ ಆಫರ್ ಜನವರಿ 26ರಿಂದ ಜಾರಿಗೆ ಬಂದಿದ್ದು ಇದೇ ರೀತಿ ಕೈಗೆಟಕುವ ಬೆಲೆಯಲ್ಲಿ ರೂ.11,21,51 ಹಾಗೂ 101 ರೂ.ಗಳಿಗೂ ಆಫರ್’ಗಳನೂ ಕೂಡ ಬೇಸಿಕ್ ಫೋನ್ ಗಳಿಗಾಗಿ ಘೋಷಿಸಿದೆ. ಮತ್ತು ಈಗಾಗಲೇ ಸ್ಮಾರ್ಟ್ ಫೋನ್’ಗಳಿಗೆ ಯೂಸ್ ಮಾಡುವ ಜಿಯೋ ಗ್ರಾಹಕರಿಗೆ ಹಾಲಿ ಆಫರ್ ನಲ್ಲಿ ಪ್ರತಿದಿನ 500 ಎಂಬಿ ಹೆಚ್ಚುವರಿ ಡೇಟಾವನ್ನು ವಿಸ್ತರಿಸಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top