fbpx
ಮನೋರಂಜನೆ

 ಸದ್ದು ಮಾಡ್ತಿದೆ ಬಿಗ್’ಬಾಸ್ ಜೇಕೆ ನಟನೆಯ ಮೇ 1st ಚಿತ್ರದ ಟ್ರೈಲರ್!

 ಸದ್ದು ಮಾಡ್ತಿದೆ ಬಿಗ್’ಬಾಸ್ ಜೇಕೆ ನಟನೆಯ ಮೇ 1st ಚಿತ್ರದ ಟ್ರೈಲರ್!

 

 

ಕಿರುತೆರೆಯ ಸೂಪರ್ ಸ್ಟಾರ್ ಎಂದೇ ಪರಿಚಿತರಾಗಿರುವ ಕಾರ್ತಿಕ್ ಜಯರಾಮ್ ಅಲಿಯಾಸ್ ಜೇಕೆ ಅವರು ಬಿಗ್ ಬಾಸ್ ಮುಗಿದ ನಂತರ ಏನು ಮಾಡಬೇಕು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ ಕಿರುತೆರೆ ಹಾಗು ಬೆಳ್ಳಿ ತೆರೆಯ ಮೇಲೆ ಮಿಂಚುತ್ತಿರುವ ಕಾರ್ತಿಕ್ ಸದ್ಯ ಅವರ ಸಿನಿಮಾ ಬಿಡುಗಡೆಯ ಬ್ಯುಸಿ ಯಲ್ಲಿದ್ದಾರೆ.

 

 

ಸದ್ಯ ಯುಟೂಬ್ ನಲ್ಲಿ ಜೆಕೆ ಅಭಿನಯದ ‘ಮೇ ೧ st ‘ ಎಂಬ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್’ಗೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ವಿಚಿತ್ರ ಟೈಟಲ್ ನಿಂದಲೇ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಸಸ್ಪೆನ್ಸ್‌ ಥ್ರಿಲ್ಲರ್‌ ಮತ್ತು ಹಾರರ್‌ ಕಥಾ ಹಂದರವನ್ನು ಹೊಂದಿರಲಿದೆ.ಸಿನಿಮಾ ಎನಿಸುವ ಚಿತ್ರದ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಜೆಕೆ ಬಿಗ್‌‌ಬಾಸ್‌‌‌‌‌ಗೆ ಹೋಗುವ ಮುಂಚೆಯೇ ಈ ಚಿತ್ರದ ಶೂಟಿಂಗ್ ಮುಗಿದಿತ್ತು ಎನ್ನಲಾಗಿದ್ದು, ಇದೀಗ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ ಎಂದು ಹೇಳಲಾಗುತ್ತಿದೆ..

ಈ ಚಿತ್ರ ಶ್ರೀ ಲಕ್ಷ್ಮೀ ಸಾಯಿ ಕ್ರಿಯೇಷನ್ಸ್ ಬ್ಯಾನರ್ ನ ಅಡಿ ಹೊರಬರುತ್ತಿದ್ದು , ನಾಗೇಂದ್ರ ಅರಸ್ ಆಕ್ಷನ್ ಕಟ್ ಹೇಳಲಿದ್ದು , ಈ ಚಿತ್ರಕ್ಕೆ ಸ್ವತಃ ಜೆ.ಕೆಯವರೇ ಕಥೆ ಹಾಗು ಸ್ಕ್ರಿಪ್ಟ್ ಕೆಲಸವನ್ನು ಮಾಡಿದ್ದರಂತೆ , ಸತೀಶ್ ಬಾಬು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ, ಚಿತ್ರದಲ್ಲಿ ಜೆಕೆಗೆ ನಾಯಕಿಯಾಗಿ ರಕ್ಷಾ ಸೋಮಶೇಖರ್ ನಟಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top