fbpx
ಕಿರುತೆರೆ

ಚಂದನ್ ಬಿಗ್’ಬಾಸ್ ಗೆದ್ದ ಬಗ್ಗೆ ಸೂಪರ್ ಸ್ಟಾರ್ ಜೇಕೆ ಹೇಳಿದ್ದು ಹೀಗೆ!

ಚಂದನ್ ಬಿಗ್’ಬಾಸ್ ಗೆದ್ದ ಬಗ್ಗೆ ಸೂಪರ್ ಸ್ಟಾರ್ ಜೇಕೆ ಹೇಳಿದ್ದು ಹೀಗೆ!

 

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ‘ಬಿಗ್ ಬಾಸ್ ಕನ್ನಡ ಸೀಸನ್-5’ ಅಂತ್ಯಗೊಂಡಿದ್ದು ವೀಕ್ಷಕರ ಬಯಕೆಯಂತೆ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವಾಕರ್‌ ಬಿಗ್‌ಬಾಸ್‌ ಸೀಸನ್ 5ನ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

 


ತಮ್ಮ ಮ್ಯೂಸಿಕ್ಸ್ ನಿಂದ ದೊಡ್ಡ ಮಟ್ಟದ ವೀಕ್ಷಕರ ಬಳಗವನ್ನು ಸೃಷ್ಟಿಸಿಕೊಂಡಿದ್ದ ಚಂದನ್ ವೀಕ್ಷಕರ ನಿರೀಕ್ಷೆಯಂತೆ ಬಿಗ್ ಬಾಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಚಂದನ್ ಅವರಿಗೆ ಟ್ರೋಫಿಯ ಜೊತೆ 50 ಲಕ್ಷ ರೂಪಾಯಿ ನಗದು ಬಹುಮಾನ ದಕ್ಕಿದೆ.. ಈ ನಡುವೆ ಸೂಪರ್ ಸ್ಟಾರ್ ಜೇಕೆಯವರೇ ಈ ಬಾರಿ ಬಿಗ್ ಬಾಸ್ ಗೆಲ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು ಆದರೆ ಕೊನೆಯದಾಗಿ ಚಂದನ್ ಟ್ರೋಫಿಗೆ ಮುಟ್ಟಿದ್ದಾರೆ. ಚಂದನ್ ಬಿಗ್’ಬಾಸ್ ಗೆದ್ದ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜೇಕೆ ಈ ರೀತಿಯಾಗಿ ಹೇಳಿದ್ದಾರೆ.

“ಅದು ವೀಕ್ಷಕರ ತೀರ್ಪು ಅದನ್ನು ಗೌರವಿಸುತ್ತೇನೆ, ಕೇವಲ ಬಿಗ್’ಬಾಸ್ ಮಾತ್ರವಲ್ಲ ಯಾವುದೇ ರಿಯಾಲಿಟಿ ಶೋ ಆಗಲಿ ಸ್ಪೋರ್ಟ್ಸ್ ಆಗಲಿ ಅಲ್ಲಿ ಸೋಲು ಗೆಲುವು ಇದ್ದೆ ಇರುತ್ತದೆ. ಕೊನೆ ತನಕ ಗೆಲ್ಲುವ ವಿಶ್ವಾಸ ಹೊಂದಿದ್ದೆ. ಕೊನೆಯ ನಾಲ್ಕೈದು ದಿನಗಳಲ್ಲಿ ಗೆಲವು ನನಗೆ ಅಷ್ಟೊಂದು ಸುಲಭವಾಗಿ ಸಿಗೋದಿಲ್ಲ ಅಂತ ಗೊತ್ತಾಯಿತು.ವಿನ್ನರ್ ಆಗದೇ ಇದ್ರೂ ಅಲ್ಲಿ ನಾನು ನಾನಾಗಿ ಇದ್ದೆ. ಆ ಸಮಾಧಾನ ನನಗೆ ಇದೆ, ಗೆಲ್ಲಲಿಲ್ಲ ಎಂದು ಬೇಸರವಿಲ್ಲ.” ಎಂದು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top