fbpx
ರಾಜಕೀಯ

BPL ಕಾರ್ಡ್ ಹೊಂದಿರುವ ಕುಟುಂಬಗಳಿಗೆ “ಕಂಬಳಿ ಭಾಗ್ಯ” ಕರುಣಿಸಿದ ಸಿಎಂ ಸಿದ್ದರಾಮಯ್ಯ

BPL ಕಾರ್ಡ್ ಹೊಂದಿರುವ ಕುಟುಂಬಗಳಿಗೆ “ಕಂಬಳಿ ಭಾಗ್ಯ” ಕರುಣಿಸಿದ ಸಿಎಂ ಸಿದ್ದರಾಮಯ್ಯ

 

ಹಲವಾರು ಭಾಗ್ಯಗಳನ್ನು ರಾಜ್ಯದ ಜನತೆಗೆ ಕರುಣಿಸಿರುವ ಸಿದ್ದರಾಮಯ್ಯ ಸರ್ಕಾರ ಈಗ ರಾಜ್ಯದ ಜನತೆಗೆ ಕಂಬಳಿ ಭಾಗ್ಯ ಒದಗಿಸಲು ಸಿದ್ದರಾಗಿದ್ದಾರೆ ಎಂದು ತಿಳಿದು ಬಂದಿದೆ.

 

 

ಬಳ್ಳಾರಿ ಜಿಲ್ಲೆಯ ಹಂಪಿ ವಿಶ್ವ ವಿದ್ಯಾಲಯದಲ್ಲಿ ಜರುಗಿದ ಹಾಲುಮತ ಅಧ್ಯಯನ ಪೀಠದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಾರಿಗೆ ಸಚಿವರಾಗಿರುವ ಹೆಚ್.ಎಂ.ರೇವಣ್ಣ ಅವರು ಕಂಬಳಿ ಭಾಗ್ಯದ ವಿಷಯವನ್ನು ತಿಳಿಸಿದ್ದಾರೆ. ರಾಜ್ಯದಲ್ಲಿ ಕಂಬಳಿ ತಯಾರಿಕೆ ಮಾಡುವ ಜನರು ಸಂಕಷ್ಟದಲ್ಲಿದ್ದಾರೆ ಅವರ ಹಿತದೃಷ್ಟಿಯಿಂದ ಈ ಯೋಜನೆ ಜಾರಿಗೆ ತಲಾರು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಲಾಗುತ್ತಿದೆ. ಕಂಬಳಿಯಿಂದ ಜನರಿಗೆ ಚಳಿ ಮಳೆ ಗಾಳಿಯಿಂದ ರಕ್ಷಣೆ ಒದಗಲಿದೆ ಎಂದು ಅವರು ತಿಳಿಸಿದರು.

 

 

ರಾಜ್ಯ ಸರ್ಕಾರದಿಂದ BPL ಕಾರ್ಡ್ ಹೊಂದಿರುವ ಕುಟುಂಬಗಳಿಗೆ “ಕಂಬಳಿ ಭಾಗ್ಯ” ಒದಗಿಸುವ ಸಂಬಂಧ ಫೆಬ್ರುವರಿಯಲ್ಲಿ ಮಂಡನೆಯಾಗಲಿರುವ ಬಜೆಟ್ ನಲ್ಲಿ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

 

 

ಈ ಬಾರಿಯ ಬಜೆಟ್ ನಲ್ಲಿ ಮತ್ತೊಮ್ಮೆ ಸಾಲ ಮನ್ನಾ ಮಾಡುತ್ತಾರೆಂಬ ಮಾತುಗಳು ಕೆಲವೆಡೆ ಕೇಳಿ ಬರುತ್ತಿವೆ. ಆದರೆ ಈ ಮಾಹಿತಿ ಇನ್ನು ಅಧಿಕೃತವಾಗಿಲ್ಲ ಎಂದು ತಿಳಿದುಬಂದಿದೆ. ಮುಂಬರುವ ವಿಧಾನಸಭಾ ಚುನಾವಣೆಯ ಹಿತದೃಷ್ಟಿ ಇಟ್ಟುಕೊಂಡು ಈ ಬಾರಿಯ ಬಜೆಟ್ ಮಂಡನೆಯಾಗಲಿದೆ. ಬಜೆಟ್ ನಲ್ಲಿ ಏನೇನು ವಿಶೇಷತೆ ಇರಲಿಗೆ ಎಂದು ರಾಜ್ಯದ ಜನತೆ ಕಾತುರತೆಯಿಂದ ಕಾಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top