fbpx
ರಾಜಕೀಯ

ಭಾರತದ ಬಡ ಮುಖ್ಯಮಂತ್ರಿ. .. ಇವರ ಬ್ಯಾಂಕ್ ಖಾತೆಯಲ್ಲಿ ಇರೋದು ಬರೀ ₹ 2410

ಭಾರತದ ಬಡ ಮುಖ್ಯಮಂತ್ರಿ. .. ಇವರ ಬ್ಯಾಂಕ್ ಖಾತೆಯಲ್ಲಿ ಇರೋದು ಬರೀ ₹ 2410 ರೂಪಾಯಿ

ಮಾಣಿಕ್ ಸರ್ಕಾರ್ ಅವರು ತ್ರಿಪುರ ರಾಜ್ಯದ ಮುಖ್ಯಮಂತ್ರಿ ಆಗಿದ್ದರೆ, CPI ( M ) ಪಕ್ಷದ ತ್ರಿಪುರ ರಾಜ್ಯದ ಮುಖ್ಯಮಂತ್ರಿಯಾಗಿರುವ ಮಾಣಿಕ್ ಸರ್ಕಾರ್ 20 ವರ್ಷಗಳಿಂದ ತ್ರಿಪುರ ರಾಜ್ಯದ ಮುಖ್ಯಮಂತ್ರಿಯಾಗಿರುವ ಇವರ ಬಳಿ ಸ್ವಂತ ಮನೆ, ಸೈಟು, ಕಾರು ಇಲ್ಲ ಯಾವುದು ಇಲ್ಲ. ಇವರಿಗೆ ಸರ್ಕಾರ ಕೊಟ್ಟಿರುವ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

 

 

ಭಾರತದ ಬಡ ಮುಖ್ಯಮಂತ್ರಿ ಎಂಬ ಖ್ಯಾತಿಯನ್ನು ಮಾಣಿಕ್ ಸರ್ಕಾರ್ ಪಡೆದಿದ್ದಾರೆ. ತ್ರಿಪುರ ರಾಜ್ಯವನ್ನು ಶಿಕ್ಷಣ, ಉದ್ಯೋಗ, ಆರೋಗ್ಯ, ಮಾನವ ಅಭಿವೃದ್ಧಿ ಯಲ್ಲಿ ಉನ್ನತ ಸ್ಥಾನಕ್ಕೆ ಏರಿಸಲು ಪರಿಶ್ರಮ ಪಟ್ಟಿದ್ದಾರೆ. ಇಂದಿನ ದಿನಮಾನಗಳಲ್ಲಿ ಒಬ್ಬ ಸಾಧಾರಣ ಗ್ರಾಮ ಪಂಚಾಯಿತಿ ಸದಸ್ಯನು ಕೂಡ ಲಕ್ಷ ಲಕ್ಷ ರೂಪಾಯಿಗಳನ್ನೂ ಅಡ್ಡದಾರಿ ಹಿಡಿದು ಭ್ರಷ್ಟಾಚಾರ ಮಾಡಿ. . ದುಡ್ಡು.. ಮಾಡಿ.. ಜೀವನವನ್ನು ನಡೆಸುತ್ತಿದ್ದಾರೆ. ಇಂತಹ ದಿನಮಾನದಲ್ಲಿ ಯಾವ ಪ್ರಚಾರ ಭರಾಟೆ ಅಲ್ಲದೆಯೂ ತ್ರಿಪುರ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ಯಶಸ್ವಿ ಆಗಿದ್ದಾರೆ.

 

 

ತ್ರಿಪುರದಲ್ಲಿ ಈಗ ಚುನಾವಣೆ ನಡೆಯುತ್ತಿದ್ದು ಧನಪುರ ಕ್ಷೇತ್ರದಲ್ಲಿ ನಾಮ ಪತ್ರ ಸಲ್ಲಿಸಿದ ಮಾಣಿಕ್ ಸರ್ಕಾರ. ನಾಮಪತ್ರದಲ್ಲಿ ಅವರ ಆಸ್ತಿವಿವರ ಗೊತ್ತಾಗಿದೆ ಇವರ ಬ್ಯಾಂಕ್ ಖಾತೆಯಲ್ಲಿ ಕೇವಲ 2410.16 ರೂಪಾಯಿ ಇದೆ. ಕಳೆದ ಬಾರಿ ಚುನಾವಣೆಯಲ್ಲಿ ಇವರ ಬ್ಯಾಂಕ್ ಬ್ಯಾಲೆನ್ಸ್ 9720.38 ರೂಪಾಯಿ ಇತ್ತು. ಇವರಿಗೆ ಸರ್ಕಾರ ಪ್ರತಿ ತಿಂಗಳು 26,315 ರೂಪಾಯಿ ವೇತನ ನೀಡುತ್ತದೆ ಅದನ್ನು ಇವರು ಪಾರ್ಟಿ ಫಂಡ್ ಗಾಗಿ ನೀಡುತ್ತಾರೆ. ಪಾರ್ಟಿಯಿಂದ 9,700 ರೂಪಾಯಿ ಪಡೆಯುತ್ತಾರೆ ಎಂದು ತಿಳಿದು ಬಂದಿದೆ. ಇವರ ಬಳಿ ಸ್ವಂತ ಮೊಬೈಲ್ ಕೂಡ ಇಲ್ಲ

 

 

ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದೆ. ಇಮೇಲ್ ಅಕೌಂಟ್ ಕೂಡ ಇಲ್ಲದ ಮಾಣಿಕ್ ಸರ್ಕಾರ ಅವರು ಸಾಮಾಜಿಕ ಜಾಣತನಲ್ಲೂ ಅಕೌಂಟ್ ಹೊಂದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top