fbpx
ದೇವರು

ಮತ್ಸ್ಯ ಪುರಾಣದ ಪ್ರಕಾರ ನೀವು ಯಾವ ತಿಂಗಳಿನಲ್ಲಿ ಮನೆಯನ್ನು ಕಟ್ಟಿದರೆ ಅಥವಾ ಕಟ್ಟಲು ಪ್ರಾರಂಭಿಸಿದರೆ ಏನು ಫಲ ? ಏನು ಲಾಭ ? ಏನು ನಷ್ಟ ? ಎಂದು ತಿಳಿದುಕೊಳ್ಳಿ .

ಮತ್ಸ್ಯ ಪುರಾಣದ ಪ್ರಕಾರ ನೀವು ಯಾವ ತಿಂಗಳಿನಲ್ಲಿ ಮನೆಯನ್ನು ಕಟ್ಟಿದರೆ ಅಥವಾ ಕಟ್ಟಲು ಪ್ರಾರಂಭಿಸಿದರೆ ಏನು ಫಲ ? ಏನು ಲಾಭ ? ಏನು ನಷ್ಟ ? ಎಂದು ತಿಳಿದುಕೊಳ್ಳಿ .

 

ಒಂದು ಮನೆಯನ್ನು ಕಟ್ಟಲು ಪ್ರಾರಂಭಿಸಬೇಕೆಂದರೆ ಸಮಯ, ನಕ್ಷತ್ರ, ದಿನ, ಮಾಸ ಎಲ್ಲವನ್ನೂ ನೋಡುತ್ತೇವೆ. ಅದೇ ರೀತಿಯಲ್ಲಿ ನಾವು ಯಾವ ಮಾಸದಲ್ಲಿ ಮನೆಯನ್ನು ಕಟ್ಟಲು ಪ್ರಾರಂಭಿಸಿದರೆ ಏನು ಫಲ ? ಯಾವ ರೀತಿಯಲ್ಲಿ ಲಾಭವಾಗುವುದು, ಎನೆಲ್ಲಾ ಲಾಭವಾಗುವುದು, ಎಂಬುದನ್ನು ತಿಳಿದುಕೊಂಡು ಪ್ರಾರಂಭಿಸಿದರೆ ಉತ್ತಮ ಎಂದು ಮತ್ಸ್ಯ ಪುರಾಣದಲ್ಲಿ ಈ ರೀತಿ ಹೇಳಲಾಗಿದೆ .

 

 

ವಿಜ್ಞಾನವು ವಾಸ್ತು ಶೈಲಿಯ ಮೂಲವನ್ನು ಹೊಂದಿದೆ. ಹದಿನೆಂಟು ಮಹಾ ಋುಷಿಗಳು ವಾಸ್ತು ಶೈಲಿಯನ್ನು ಮತ್ತು ವಿಜ್ಞಾನವನ್ನು ಈ ಜಗತ್ತಿಗೆ ಪರಿಚಯಿಸಿದ್ದಾರೆ. ಅವರ ಹೆಸರುಗಳು ಹೀಗಿವೆ.ಮಹರ್ಷಿಗಳಾದ ಬೃಗು, ಅತ್ರಿ, ವಸಿಷ್ಠ, ವಿಶ್ವಕರ್ಮ, ಮಯ, ನಾರದ, ನಗ್ನಚಿತ, ವಿಶಾಲಾಕ್ಷ ,ಪುರಂದರ, ಬ್ರಹ್ಮ, ಕಾರ್ತಿಕೇಯ, ನಂದೀಶ್ವರ ,ಶೌನಕ , ಗರ್ಗ, ವಾಸುದೇವ, ಅನಿರುದ್ಧ, ಶುಕ್ರ ಮತ್ತು ಬೃಹಸ್ಪತಿ. ಇವರೆಲ್ಲರನ್ನೂ ಕೂಡ ಋಷಿಗಳು, ಮಹರ್ಷಿಗಳು ಎಂದು ಕರೆಯಲಾಗುತ್ತದೆ.

 

 

• ಮನೆಯನ್ನು ಕಟ್ಟುವುದಕ್ಕೆ ಎಂದಿಗೂ ಕೂಡ ಚೈತ್ರ ಮಾಸದಲ್ಲಿ ಪ್ರಾರಂಭಿಸಬಾರದು. ಯಾರು ಈ ಮಾಸದಲ್ಲಿ ಪ್ರಾರಂಭಿಸುತ್ತಾರೋ, ಅವರು ಖಂಡಿತವಾಗಿಯೂ ಅನೇಕ ರೀತಿಯ ಕಾಯಿಲೆಗಳಿಂದ ಬಳಲುತ್ತಾರೆ. ಚೈತ್ರಮಾಸ ಎಂದರೆ ಮಾರ್ಚ್ ತಿಂಗಳಿನಿಂದ ಏಪ್ರಿಲ್ ತಿಂಗಳಿನವರೆಗೆ.

• ಮಂಗಳಕರ ಮಾಸಗಳು.

• ವೈಶಾಖ ಮಾಸವು ಮನೆಯನ್ನು ಕಟ್ಟಲು ಪ್ರಾರಂಭಿಸುವುದಕ್ಕೆ ತುಂಬಾ ಒಳ್ಳೆಯ ಸಮಯವಾಗಿದೆ. ಈ ರೀತಿ ವೈಶಾಖ ಮಾಸದಲ್ಲಿ ಮನೆಯನ್ನು ಕಟ್ಟಲು ಪ್ರಾರಂಭಿಸಿದರೆ, ಅವರು ಅನೇಕ ಹಸುಗಳನ್ನು, ಗೋವುಗಳನ್ನು ಸಾಕುವ ಒಡೆಯರಾಗುತ್ತಾರೆ. ವೈಶಾಖ ಮಾಸ ಎಂದರೆ ಏಪ್ರಿಲ್ ನಿ0ದ ಮೇ ತಿಂಗಳವರೆಗೆ.

 

 

• ಯಾರು ಅಗ್ರಹಾಯಣ ಮಾಸದಲ್ಲಿ ಮನೆ ಕಟ್ಟಲು ಪ್ರಾರಂಭಿಸುತ್ತಾರೋ, ಅವರಿಗೆ ಯಥೇಚ್ಛವಾಗಿ, ಸಮೃದ್ಧಿಯಾಗಿ ಧನ, ಧಾನ್ಯಗಳು ಹೆಚ್ಚಿನ ರೀತಿಯಲ್ಲಿ ಲಭಿಸುತ್ತವೆ. ಅಗ್ರಹಾಯಣ ಮಾಸ (ಎಂದರೆ ಮಾರ್ಗಶಿರ ಅಥವಾ ಪಂಗುಣಿ) ನವೆಂಬರ್ ನಿ೦ದ ಡಿಸೆಂಬರ್ ವರೆಗೆ.

• ಮಾಘ ಮಾಸದಲ್ಲಿ ಯಾರು ಮನೆಯನ್ನು ಕಟ್ಟಲು ಪ್ರಾರಂಭಿಸುತ್ತಾರೋ, ಅವರು ಎಲ್ಲಾ ರೀತಿಯ ಸಿರಿವಂತಿಕೆಯನ್ನು ಗಳಿಸುತ್ತಾರೆ. ಮಾಘ ಜನವರಿಯಿಂದ ಫೆಬ್ರವರಿ ತಿಂಗಳವರೆಗೆ.
• ಫಾಲ್ಗುಣಿ ಮಾಸದಲ್ಲಿ ಯಾರು ಮನೆ ಕಟ್ಟಲು ಪ್ರಾರಂಭಿಸುತ್ತಾರೋ, ಅವರು ಯಥೇಚ್ಛವಾಗಿ ಬಂಗಾರವನ್ನು ಗಳಿಸುತ್ತಾರೆ ಮತ್ತು ಪುತ್ರ ಸಂತಾನವನ್ನು ಹೊಂದುತ್ತಾರೆ.ಫಾಲ್ಗುಣ ಫೆಬ್ರವರಿಯಿಂದ ಮಾರ್ಚ್ ತಿಂಗಳವರೆಗೆ.
• ಮನೆಯನ್ನು ಕಟ್ಟಲು ಪ್ರಾರಂಭಿಸುವುದಕ್ಕೆ ಆಷಾಢ ಕೂಡ ಒಳ್ಳೆಯ ಮಾಸವಾಗಿದೆ. ಆಷಾಢ ಮಾಸದಲ್ಲಿ ಮನೆ ಕಟ್ಟುವವರಿಗೆ ಕೆಲಸದ ಆಳುಗಳು ಮತ್ತು ಅನೇಕ ಪ್ರಾಣಿಗಳನ್ನು ಸಾಕಿ ಅವರ ಒಡೆಯರಾಗುತ್ತಾರೆ. ಆಷಾಢ ತುಂಬಾ ಒಳ್ಳೆಯ ಮಾಸವಾಗಿದ್ದು ಜೂನ್ ತಿಂಗಳಿನಿಂದ ಜುಲೈ ತಿಂಗಳಿನವರೆಗೆ ಆಷಾಢ ಮಾಸವಾಗಿದೆ.

 

 

• ಅಮಂಗಳಕರ ಮಾಸಗಳು.

• ಜ್ಯೇಷ್ಠ, ಶ್ರಾವಣ, ಭಾದ್ರಪದ, ಆಶ್ವೀಜ, ಮತ್ತು ಪೌಶ ಮಾಸಗಳು ಆಮಂಗಳಕರವೆಂದು ಭಾವಿಸಲಾಗಿದೆ.

• ನೀವು ಜೇಷ್ಠ ಮಾಸದಲ್ಲಿ ಪ್ರಾರಂಭಿಸಿದರೆ ಬೇಗನೆ ಮರಣ ಹೊಂದುವಿರಿ .ಜ್ಯೇಷ್ಠ ಮಾಸ ಮೇ ತಿಂಗಳಿನಿಂದ ಜೂನ್ ತಿಂಗಳಿನವರೆಗೆ .
• ನೀವು ಶ್ರಾವಣ ಮಾಸದಲ್ಲಿ ಮನೆಯನ್ನು ಕಟ್ಟಲು ಪ್ರಾರಂಭಿಸಿದರೆ ಬೇಗನೆ ಮರಣ ಹೊಂದುತ್ತೀರಿ. ಶ್ರಾವಣ ಮಾಸ ಜುಲೈ ತಿಂಗಳಿನಿಂದ ಆಗಸ್ಟ್ ತಿಂಗಳಿನವರೆಗೆ.
• ಭಾದ್ರಪದ ಮಾಸದಲ್ಲಿ ಕಟ್ಟಲು ಪ್ರಾರಂಭಿಸಿದರೆ ನೀವು ಎಲ್ಲ ರೀತಿಯಲ್ಲೂ ನಷ್ಟಗಳನ್ನು ಅನುಭವಿಸುತ್ತೀರ. ಭಾದ್ರಪದ ಮಾಸ ಆಗಸ್ಟ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಿನವರೆಗೆ.

• ನೀವು ಆಶ್ವೀಜ ಮಾಸದಲ್ಲಿ ಪ್ರಾರಂಭಿಸಿದರೆ ನಿಮ್ಮ ಪತ್ನಿ ಅಥವಾ ಹೆಂಡತಿಯಾಗುವವಳು ಮರಣ ಹೊಂದುವರು, ಅಶ್ವೀಜ ಮಾಸವೂ ಸೆಪ್ಟೆಂಬರ್ ನಿಂದ ಅಕ್ಟೋಬರ್ ತಿಂಗಳಿನವರೆಗೆ.
• ನೀವು ಪೌಷ ಮಾಸದಲ್ಲಿ ಪ್ರಾರಂಭಿಸಿದರೆ ನಿಮ್ಮ ಮನೆಯಲ್ಲಿರುವ ಎಲ್ಲ ಧನ ಧಾನ್ಯ ಸರಕುಗಳ ಕಳ್ಳತನವಾಗುತ್ತದೆ. ಪೌಶ ಮಾಸವು ಡಿಸೆಂಬರ್ ನಿಂದ ಜನವರಿ ತಿಂಗಳಿನವರೆಗೆ.

 

 

• ಶುಭ ನಕ್ಷತ್ರಗಳು.

• ನೀವು ಮನೆಯನ್ನು ಕಟ್ಟಲು ಪ್ರಾರಂಭಿಸುವುದಕ್ಕೆ ಉತ್ತಮವಾದ ಶುಭ ನಕ್ಷತ್ರಗಳೆಂದರೆ ಅಶ್ವಿನಿ, ರೋಹಿಣಿ, ಮೂಲ, ಉತ್ತರ ಭಾದ್ರಪದ, ಉತ್ತರಾಷಾಢ, ಉತ್ತರ ಫಾಲ್ಗುಣಿ ಅಥವಾ ಮಾರ್ಗಶಿರ ನಕ್ಷತ್ರ ಇರುವ ದಿನ ಪ್ರಾರಂಭಿಸಬೇಕು. ಈ ದಿನದಂದು ಪ್ರಾರಂಭಿಸಿದರೆ ಅತ್ಯಂತ ಶುಭ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಪರಿಗಣಿಸಲಾಗಿದೆ.

• ಶುಭ ವಾರಗಳು.
ನೀವು ಮಂಗಳವಾರ ಮತ್ತು ಭಾನುವಾರ ಬಿಟ್ಟು ಬೇರೆ ಯಾವ ದಿನ ಬೇಕಾದರೂ ಪ್ರಾರಂಭಿಸಬಹುದು.ಆ ಎರಡು ದಿನಗಳನ್ನು ಬಿಟ್ಟು ಮಿಕ್ಕೆಲ್ಲಾ ದಿನಗಳು ಶುಭ ಎಂದು ಪರಿಗಣಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top