fbpx
ಸಿನಿಮಾ

ರಾಜರಥ ಸಿನಿಮಾದ ಎರಡನೇ ಗೀತೆ ಲೋಕಾರ್ಪಣೆ ಮಾಡಿದ ರಕ್ಷಿತ್ ಶೆಟ್ಟಿ

ರಾಜರಥ ಸಿನಿಮಾದ ಎರಡನೇ ಗೀತೆ ಲೋಕಾರ್ಪಣೆ ಮಾಡಿದ ರಕ್ಷಿತ್ ಶೆಟ್ಟಿ

 

ರಂಗಿತರಂಗ ತಂಡದಿಂದ ಈಗ ಮತ್ತೊಂದು ಚಿತ್ರ “ರಾಜರಾಥ” ಬರುತ್ತಿದ್ದು ಈ ಸಿನಿಮಾದಲ್ಲಿ ಅನೂಪ್ ಭಂಡಾರಿ ಅವರ ತಮ್ಮನಾಗಿರುವ ನಿರೂಪ್ ಭಂಡಾರಿ ನಾಯಕನಾಗಿದ್ದು, ತಮಿಳು ನಟನಾಗಿರುವ ಆರ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರೂಪ್ ಭಂಡಾರಿಗೆ ನಾಯಕಿಯಾಗಿ ಅವಂತಿಕಾ ಶೆಟ್ಟಿ ಅಭಿನಯಿಸಿದ್ದಾರೆ. ರವಿಶಂಕರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದು, ಹಾಸ್ಯನಟನಾಗಿ ಕಾಣಿಸಿಕೊಂಡಿದ್ದಾರೆ.

 

 

ಈ ಮೊದಲು ಚಿತ್ರದ ಟ್ರೇಲರ್ ಅನ್ನು ನಟ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದರು. ತದನಂತರ ಮೊದಲ ಹಾಡನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದರು. ಈಗ ನಟ ರಕ್ಷಿತ್ ಶೆಟ್ಟಿ ಚಿತ್ರದ ಎರಡನೇ ಹಾಡನ್ನು ರಿಲೀಸ್ ಮಾಡಿದ್ದಾರೆ. ಈ ಚಿತ್ರದ ಟ್ರೈಲರ್ ಕಳೆದ ತಿಂಗಳು ಬಿಡುಗಡೆಯಾಗಿತ್ತು ಸಕತ್ ಸಡ್ಡು ಮಾಡಿದೆ ಈಗಾಗಲೇ ಯೌಟ್ಯೂಬ್ ನಲ್ಲಿ ಮೂವತ್ತು ಲಕ್ಷಕ್ಕೂ ಅಧಿಕ ಜನ ನೋಡಿದ್ದಾರೆ. ಈಗ ಚಿತ್ರದ ಎರಡನೇ ಗೀತೆ ‘ಹೇಳೆ ಮೇಘವೆ’ ಕೂಡ ಯೂಟ್ಯೂಬ್ ನಲ್ಲಿ ಬಿಡುಗಡೆ ಯಾಗಿದೆ ಇದು ಕೂಡ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

 

 

ನಿರ್ದೇಶಕ ಅನೂಪ್ ಭಂಡಾರಿ ಈ ಗೀತೆಗೆ ಲಿರಿಕ್ಸ್‌ ಬರೆದು ಕಂಪೋಸ್ ಮಾಡಿದ್ದಾರೆ, ಅಭಯ್‌ ಜೋಧ್‌ಪುರಕರ್‌ ಅವರು ಈ ಹಾಡನ್ನು ಹಾಡಿದ್ದಾರೆ. ಕೇವಲ ಒಂದು ದಿನದಲ್ಲಿ ಲಕ್ಷ ಗಡಿ ದಾಟಿದೆ ಈ ಗೀತೆ. ಇನ್ನು ಕೆಲವೇ ದಿನದಲ್ಲಿ ಚಿತ್ರದ ರಿಲೀಸ್ ಡೇಟ್ ಘೋಷಣೆಯಾಗಲಿದೆ. ರಾಜ್ಯಾದ್ಯಂತ ಅಭಿಮಾನಿಗಳು ಚಿತ್ರಕ್ಕಾಗಿ ಬಹು ನಿರೀಕ್ಷಣೆಯಿಂದ ಕಾಯುತ್ತಿದ್ದಾರೆ.

ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಶೂಟಿಂಗ್ ಮಾಡಿರುವ ರಾಜರಥಕ್ಕೆ ತುಳುಗು ಭಾಷೆಯಲ್ಲಿ ರಾಣಾ ದಗ್ಗುಬಾಟಿ ಹಿನ್ನಲೆ ಧ್ವನಿ ನೀಡಿದ್ದಾರೆ. ಈ ಚಿತ್ರದ ಟ್ರೇಲರ್ ನಲ್ಲಿ ಪುನೀತ್ ರಾಜ್‍ಕುಮಾರ್ ಅವರ ಧ್ವನಿ ಆಕರ್ಷಣೀಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top