fbpx
ಮನೋರಂಜನೆ

ಶಿವಣ್ಣನ ಕ್ಯಾಲೆಂಡರ್ ಯಶ್ ಕೈಯಿಂದ ಬಿಡುಗಡೆ!

ಶಿವಣ್ಣನ ಕ್ಯಾಲೆಂಡರ್ ಯಶ್ ಕೈಯಿಂದ ಬಿಡುಗಡೆ!

 


ಪ್ರತಿ ವರ್ಷ ಶಿವರಾಜ್‌ಕುಮಾರ್‌ ಅವರ ಅಭಿಮಾನಿಗಳು ಡಾ. ರಾಜ್‌ಕುಮಾರ್‌ ಅವರ ಕುಟುಂಬ ಕ್ಯಾಲೆಂಡರ್‌ ಹೊರತರುತ್ತಿದೆ. ಈ ಬಾರಿ ಸಹ ಅದು ಮುಂದುವರೆದಿದೆ. ಅಖೀಲ ಕರ್ನಾಟಕ ಶಿವರಾಜ್‌ಕುಮಾರ್‌ ಸೇನಾ ಸಮಿತಿಯವರು 2018ರ ಕ್ಯಾಲೆಂಡರ್‌ ಹೊರತಂದಿದ್ದು ಅದು ರಾಕಿಂಗ್ ಸ್ಟಾರ್ ಯಶ್ ಕೈನಿಂದ ಬಿಡುಗಡೆಗೊಂಡಿದೆ. ಪ್ರತಿ ವರ್ಷವೂ ಆಕರ್ಷಕ ಡಿಸೈನ್ ಕ್ಯಾಲೆಂಡರ್ ಅನ್ನು ಹೊರತರುತ್ತಿರುವ ಶಿವರಾಜ್ ಕುಮಾರ್ ಸೇನಾ ಸಮಿತಿ ಕಳೆದ ಬಾರಿಯ ಕ್ಯಾಲೆಂಡರ್ ಅನ್ನು ಕಿಚ್ಚ ಸುದೀಪ್ ಕೈನಿಂದ ಬಿಡುಗಡೆ ಮಾಡಿಸಿದ್ದರು.

 


ಡಾ.ರಾಜ್‌ಕುಮಾರ್‌ ಕುಟುಂಬದ ಕೆಲವು ಅಪರೂಪದ ಫೋಟೋಗಳನ್ನು ಬಳಸಿಕೊಂಡು ಈ ಕ್ಯಾಲೆಂಡರ್‌ ರೂಪಿಸಲಾಗಿದು ಡಾ. ರಾಜ್‌ಕುಮಾರ್‌, ರಾಘವೇಂದ್ರ ರಾಜಕುಮಾರ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ವಿನಯ್ ರಾಜಕುಮಾರ್ ಅವರ ಅಪರೂಪದ ಫೋಟೋಗಳನ್ನು ಒಳಗೊಂಡಿವೆ. ಕೇವಲ ಸಿನಿಮಾ ಫೋಟೋಗಳು ಮಾತ್ರವಲ್ಲದೆ ರಿಯಲ್‌ ಲೈಫ್ನ ಹಲವು ಅಪರೂಪದ ಫೋಟೋಗಳೂ ಈ ಕ್ಯಾಲೆಂಡರ್‌ನಲ್ಲಿ ನೋಡಬಹುದು.

ಇದು ಅಖೀಲ ಕರ್ನಾಟಕ ಡಾ ಶಿವರಾಜಕುಮಾರ್‌ ಸೇನಾ ಸಮಿತಿಯ ವತಿಯಿಂದ ಬಿಡುಗಡೆಗೊಂಡ ಒಂಭತ್ತನೇ ವರ್ಷದ ಕ್ಯಾಲೆಂಡರ್ ಆಗಿದ್ದು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕ್ಯಾಲೆಂಡರ್‌ಗಳನ್ನು ಮುದ್ರಿಸಲಾಗಿದೆ. ವಿಶೇಷವೆಂದರೆ ಈ ಕ್ಯಾಲೆಂಡರ್‌ಗಳು ಅಭಿಮಾನಿಗಳಿಗಾಗಿ ಮಾಡಿರೋದ್ರಿಂದ ಇವು ಮಾರಾಟಕ್ಕೆ ಇರುವುದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top