fbpx
ಮನೋರಂಜನೆ

ಮಹಿಳೆಯ ಜೊತೆಯಿರುವ ನಾಯಿಯನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡ ವರ್ಮಾ!

 ಮಹಿಳೆಯ ಜೊತೆಯಿರುವ ನಾಯಿಯನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡ ವರ್ಮಾ!

 

 

ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ನಿಜಕ್ಕೂ ತಲೆ ಕೆಟ್ಟಿದ್ಯಾ? ಹೀಗೊಂದು ಅನುಮಾನ ಒಂದು ಕಾಲದಲ್ಲಿ ವರ್ಮಾರನ್ನು ಆರಾಧಿಸುತ್ತಿದ್ದವರಲ್ಲಿಯೂ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾಗಿರೋದು ಈತ ಇತ್ತೀಚಿಗೆ ಸರಣಿಯೋಪಾದಿಯಲ್ಲಿ ಮಾಡಿಕೊಳ್ಳುತ್ತಿರೋ ವಿವಾದಗಳು ಮತ್ತು ತನ್ನ ಟ್ವಿಟರ್ ಅಕೌಂಟ್ ನಲ್ಲಿ ಗೀಚಿಕೊಳ್ಳುತ್ತಿರುವ ಪೋಸ್ಟ್ ಗಳು. ಇಂತಹ ವಿವಾದಗಳನ್ನ ಮಾಡಲಿಲ್ಲ ಅಂದರೆ ರಾಮ್ ಗೋಪಾಲ್ ವರ್ಮಾಗೆ ಕಾಂಟ್ರವರ್ಸಿಗಳನ್ನ ಹುಟ್ಟುಹಾಕದೇ ಇದ್ರೆ ನಿದ್ದೇನೆ ಬರೋದಿಲ್ಲ ಅನ್ಸುತ್ತೆ.

 

 

ರೀಸೆಂಟಾಗಿ ಅಮೇರಿಕಾದ ಪೋರ್ನ್ ನಟಿ ಮಿಯಾ ಮಲ್ಕೊವಾರನ್ನು ಹಾಕಿಕೊಂಡು ಗಾಡ್ ಸೆಕ್ಸ್ ಟ್ರುಥ್ ಸಿನಿಮಾ ಮಾಡಿ ವಿವಾದ ಹುಟ್ಟುಹಾಕಿದ್ದ ವರ್ಮಾರ ಕಾಕದೃಷ್ಟಿ ಇದೀಗ ಮೂಕಪ್ರಾಣಿ ನಾಯಿಯ ಮೇಲೆ ಬಿದ್ದಿದೆ. ತಮ್ಮ ಹೊಸಾ ಚಿತ್ರ `ಗಾಡ್ ಸೆಕ್ಸ್ ಟ್ರುಥ್ ಚಿತ್ರದ ಪ್ರಚಾರದಲ್ಲಿ ಉತ್ಸಾಹ ತೋರುತ್ತಿರೋ ವರ್ಮಾ ಏಕಾಏಕಿ ಮಹಿಳೆಯೋರ್ವಳ ಎದೆಯ ಮೇಲೆ ಮುಖವಿಟ್ಟು ಮಲಗಿರುವ ನಾಯಿಯೊಂದರ ಚಿತ್ರವನ್ನು ಟ್ವಿಟರ್ ನಲ್ಲಿ ಹರಿದು ಬಿಟ್ಟಿದ್ದಾರೆ.

 

ಆ ಫೋಟೋ ಜೊತೆ “ನನಗೆ ಎಲ್ಲ ನಾಯಿಗಳ ಬಗ್ಗೆ ಗೊತ್ತಿಲ್ಲ. ಆದರೆ ಈ ಚಿತ್ರದಲ್ಲಿರುವ ನಾಯಿ ಮಾತ್ರ ಅದರ ದಿನವನ್ನು ಸುಂದರವಾಗಿ ಕಳೆದಿದೆ ಎನ್ನುವ ವಿಶ್ವಾಸವಿದೆ. ಆ ನಾಯಿಯ ಜಾಗದಲ್ಲಿ ನಾನಾದ್ರೂ ಇರಬಾರದಿತ್ತಾ? ಈ ನಾಯಿಯನ್ನು ನೋಡುತ್ತಿದ್ದರೆ ಹೊಟ್ಟೆಕಿಚ್ಚಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ. ವರ್ಮಾರ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಟ್ರೊಲ್ ಆಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top