fbpx
ಮನೋರಂಜನೆ

ಹೆಬ್ಬುಲಿ ನಾಯಕಿ ಅಮಲಾ ಪೌಲ್ ಮೇಲೆ ಲೈಂಗಿಕ ದೌರ್ಜನ್ಯ!

ಹೆಬ್ಬುಲಿ ನಾಯಕಿ ಅಮಲಾ ಪೌಲ್ ಮೇಲೆ ಲೈಂಗಿಕ ದೌರ್ಜನ್ಯ!

 

 

ಕಳೆದ ವರ್ಷ ತೆರೆಕಂಡು ಭರ್ಜರಿ ಯಶಸ್ಸು ಕಂಡಿದ್ದ ಹೆಬ್ಬುಲಿ ಚಿತ್ರದಲ್ಲಿ ಕಿಚ್ಚನಿಗೆ ನಾಯಕಿಯಾಗಿದ್ದ ಅಮಲ್ ಪೌಲ್ ಮೇಲೆ ಕಿಡಿಗೇಡಿಗಳಿಂದ ಲೈಂಗಿಕ ದೌರ್ಜನ್ಯ ವಾಗಿದೆಯಂತೆ.ಹಾಗಂತ ಸ್ವತಃ ಅಮಲಾ ಪೌಲ್ ಅವರೇ ಹೇಳಿಕೊಂಡಿದ್ದು ಚೆನ್ನೈನಲ್ಲಿರುವ ಟಿ.ನಗರ್ ಪೊಲೀಸ್ ಠಾಣೆಗೆ ಹೋಗಿ ದೂರನ್ನು ಕೂಡ ನೀಡಿದ್ದಾರೆ.

ಅಮಲಾ ಪೌಲ್ ಭಾಗವಹಿಸಬೇಕೆಂದಿದ್ದ ಮಲೇಷಿಯಾದಲ್ಲಿ ನಡೆಯಲಿರುವ ಕಾರ್ಯಕ್ರಮಯೊಂದಕ್ಕೆ ಅವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಒಬ್ಬ ವ್ಯಕ್ತಿ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಅಮಲಾ ಪೌಲ್ ಆರೋಪಿಸಿದ್ದಾರೆ. ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಆದರೆ ಈ ಘಟನೆಯಿಂದ ನನಗೆ ಸುರಕ್ಷಿತ ಇಲ್ಲ ಎಂದು ಭಾವನೆ ಉಂಟಾಯಿತು.ಯಾರೋ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಎಂದು ಅಮಲಾ ಪೌಲ್ ಹೇಳಿದ್ದಾರೆ.

 

 

ದೂರು ನೀಡಿದ ಬಾಳಿಕೆ ಮಾಧ್ಯಮದವರೊಂದಿಗೆ ಮಾತನಾಡಿದ ಅಮಲಾ ಪೌಲ್ “ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಮಲೇಷ್ಯಾಕ್ಕೆ ಹೋಗುತ್ತಿದ್ದೇನೆ, ಆ ಕಾರ್ಯಕ್ರಮಕ್ಕಾಗಿ ನಾನು ನೃತ್ಯ ಅಭ್ಯಾಸಕ್ಕೆ ಹೋಗಿದ್ದೆ.ನಾನು ಅಭ್ಯಾಸ ಮಾಡುತ್ತಿದ್ದಾಗ, ಆ ವ್ಯಕ್ತಿ ಒಳಗೆ ಬಂದರು. ಆ ವ್ಯಕ್ತಿಯೂ ಕೂಡ ನಾನು ಹೋಗಲಿರುವ ಕಾರ್ಯಕ್ರಮದ ಭಾಗವಾಗಿರುವಂತೆ ನನ್ನೊಂದಿಗೆ ಮಾತನಾಡಿದರು ಬಳಿಕ ನಾನು ಒಬ್ಬಂಟಿಯಾಗಿ ಇದ್ದಾಗ ನನ್ನೊಂದಿಗೆ ಕೆಟ್ಟದಾಗಿ ಮಾತನಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಕಾರಣದಿಂದಲೇ ನಾನು ಪೊಲೀಸರಿಗೆ ದೂರು ನೀಡಿದ್ದೇನೆ” ಎಂದು ಅಮಲಾ ಪೌಲ್ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top