fbpx
ಮನೋರಂಜನೆ

ಉಪ್ಪಿಯ ಪ್ರಜಾಕೀಯ ಸಿದ್ದಾಂತಕ್ಕೆ ಅಣ್ಣಾ ಹಜಾರೆ ಬೆಂಬಲ!

ಉಪ್ಪಿಯ ಪ್ರಜಾಕೀಯ ಸಿದ್ದಾಂತಕ್ಕೆ ಅಣ್ಣಾ ಹಜಾರೆ ಬೆಂಬಲ!

 

 

ಪ್ರಜಾಕೀಯ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ರಾಜಕೀಯವನ್ನು ಪ್ರವೇಶಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಭೇಟೆಯಾಗಿ ದೇಶದ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಭ್ರಷ್ಟಾಚಾರ ವಿರುದ್ದವಾಗಿ ಇಡೀ ದೇಶದ್ಯಾಂತ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ ಉಪ್ಪಿಯ ಪ್ರಜಾಕೀಯದ ಪರಿಕಲ್ಪನೆಗಳ ಬಗ್ಗೆ ಮೆಚ್ಚುಗೆ ಸೂಚಿಸಿದ್ದು ಅವರೊಂದಿಗೆ ಉತ್ತಮ ಹಲವು ಅಂಶಗಳನ್ನು ಹಂಚಿಕೊಂಡರು.

 

 

“ಇಡೀ ಪ್ರಪಂಚದಲ್ಲಿ ಎಲ್ಲೂ ಕೂಡ ಇಂತಹ ಪರಿಕಲ್ಪನೆ ಕೇಳಿರಲಿಲ್ಲ, ಪ್ರಜಾಕೀಯ ಅಂದರೆ ಪ್ರಜೆಗಳಿಗಾಗಿ ಮಾಡಿರುವ ಪಕ್ಷ. ಪ್ರಜಾಕೀಯ ಬಿಟ್ಟರೆ ಜನ ನೆಮ್ಮದಿಯಿಂದ ಬದುಕಲು ಯಾವ ಪಕ್ಷಾನೂ ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ. ವ್ಯಕ್ತಿ, ಭಾಷೆ, ಜಾತಿ, ಧರ್ಮಗಳ ಆಧಾರವಿಲ್ಲದೇ ಕೇವಲ ವಿಚಾರಗಳ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಉಪೇಂದ್ರರವರ ಪ್ರಯತ್ನವನ್ನು ಮೆಚ್ಚಲೇಬೇಕು” ಎಂದು ಅಣ್ಣ ಹಜಾರೆ ಹೇಳಿದ್ದಾರೆ.

 

 

 

ನಾನು ಎಂಭತ್ತರ ಇಲಿ ವಯಸ್ಸಿನಲ್ಲೂ ದೇಶದ ಪ್ರಗತಿಗಾಗಿ ಶ್ರಮಿಸುತ್ತಿದ್ದೇನೆ. ನನ್ನಂತೆಯೇ ದೇಶದ ಯುವಕರು ಕೂಡ ದೇಶದ ಉತ್ತಮ ಸಮಾಜದ ನಿರ್ಮಾಣಕ್ಕೆ ಮುಂದೆ ಬಂದರೆ ಮಾತ್ರ ಅದು ಸಾಧ್ಯವಾಗುತ್ತೆ. ಎಂದು ಹೇಳಿದ ಅಣ್ಣ ಹಜಾರೆ, ಪ್ರಜಾಕೀಯ ಕಾನ್ಸೆಪ್ಟ್ ಇಟ್ಕೊಂಡು ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಸ್ವಯಂಪ್ರೇರಿತವಾಗಿ ಅಣ್ಣಾ ಹಜಾರೆಯಾವರೇ ಖುದ್ದಾಗಿ ಮಾರ್ಗದರ್ಶನ ನೀಡುವುದಾಗಿ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top