fbpx
ಹೆಚ್ಚಿನ

ಗೂಬೆ ಕಾಗೆಯ ಮರಿಗಳನ್ನು ಕೊಲ್ಲುವುದನ್ನು ನೋಡಿ ಪಾಂಡವರ ವಂಶವನ್ನೇ ಸರ್ವನಾಶ ಮಾಡ್ತೀನಿ ಅಂತ ವೀರಾವೇಶದಿಂದ ಹೊರಟ ಅಶ್ವತ್ಥಾಮ ಮುಂದೇನಾಯ್ತು ?

ಗೂಬೆ ಕಾಗೆಯ ಮರಿಗಳನ್ನು ಕೊಲ್ಲುವುದನ್ನು ನೋಡಿ ಪಾಂಡವರ ವಂಶವನ್ನೇ ಸರ್ವನಾಶ ಮಾಡ್ತೀನಿ ಅಂತ ವೀರಾವೇಶದಿಂದ ಹೊರಟ ಅಶ್ವತ್ಥಾಮ ಮುಂದೇನಾಯ್ತು ?

 

ಅಶ್ವತ್ಥಾಮನು ರಾತ್ರಿಯಲ್ಲಿ ಏನು ಮಾಡಬೇಕೆಂದು ವಿಚಾರ ಮಾಡಿ ಗೂಬೆ ಕಾಗೆಯ ಮರಿಗಳನ್ನು ಕೊಲ್ಲುವುದನ್ನು ನೋಡಿ ನಾನೂ ಸಹ ಇದೇ ರೀತಿ ಮಾಡಬೇಕೆಂದು ಪಾಂಡವರ ಪಾಳಯವನ್ನು ಪ್ರವೇಶ ಮಾಡಿದನು. ದುರ್ಯೋಧನನಿಗೆ ಪಾಂಡವರ ತಲೆಗಳನ್ನು ಕತ್ತರಿಸಿ ತರುತ್ತೇನೆಂದು ಹೇಳಿ ಬಂದವನು ಅಲ್ಲೇ ಮಲಗಿರುವವರು ತಲೆ ಕತ್ತರಿಸಿ ಹೊರಟನು.ಅವು ಉಪ ಪಾಂಡವರ ತಲೆಗಳಾಗಿದ್ದವು. ಅಶ್ವತ್ಥಾಮನಿಗೆ ಮತ್ತೆ ಮೋಸವಾಯಿತು.

 

ಅಶ್ವತ್ಥಾಮನು ರಾತ್ರಿ ಯುದ್ಧದಲ್ಲಿ ದೃಷ್ಟದ್ಯುಮ್ನನೇ ಮೊದಲಾದವರನ್ನು ಎಬ್ಬಿಸಿ ಸಾಯಿಸಿದನು. ಕತ್ತಿಯಿಂದ ಪಾಂಚಾಲರನ್ನು ಸವರಿಸಿದನು. ಪಾಂಡವರು ಸಾತ್ಯಕಿ ಕೃಷ್ಣರು ಶಿಬಿರದಲ್ಲಿಯೇ ಇರಲಿಲ್ಲ. ಕೃಪರು ಪಾಂಡವ ಪಾಳಯಕ್ಕೆ ಬೆಂಕಿ ಹಚ್ಚಿದರು. ಪಾಂಡವ ಸೇನೆಯಲ್ಲಿ ಸಹ ಸಾತ್ಯಕಿ ಕೃಷ್ಣ ಮತ್ತು ಐವರು ಪಾಂಡವರು ಉಳಿದಿದ್ದರು.

ದುರ್ಯೋಧನನು ಉಪಪಾಂಡವರ ತಲೆಗಳನ್ನು ನೋಡಿ ಬಾಲ ಹತ್ಯೆ ಮಾಡಿದೆ ಎಂದು ಅಶ್ವತ್ಥಾಮನಿಗೆ ಹೇಳಿದಾಗ ಅಶ್ವತ್ಥಾಮನು ದುಃಖದಿಂದ ತಪಸ್ಸಿಗಾಗಿ ತೆರಳಿದನು. ಕೃಪ ಹಸ್ತಿನಾವತಿಗೆ ಕೃತವರ್ಮ ದ್ವಾರಕೆಗೆ ನಡೆದರು, ದುರ್ಯೋಧನನು ಏಕಾಂತದಲ್ಲಿದ್ದು ಒಂಟಿಯಾಗಿ ನರಳುತ್ತ ಕೊನೆಯುಸಿರೆಳೆದನು.

 

 

ಮರುದಿನ ಪಾಂಡವರಿಗೆ ಅಶ್ವತ್ಥಾಮನು ರಾತ್ರಿ ಯುದ್ಧದಲ್ಲಿ ಉಳಿದ ಬಂಧುಗಳನ್ನು ಕೊಂದಿದ್ದು ತಿಳಿಯಿತು. ನಮಗೆ ಸಹಾಯ ಮಾಡಿದವರೆಲ್ಲ ಸತ್ತಿದ್ದಾರೆ. ಮಕ್ಕಳು ಕೊಲೆಗೀಡಾಗಿದ್ದಾರೆ . ಅಯ್ಯೋ ನಮ್ಮ ದೌರ್ಭಾಗ್ಯವೇ ಎಂದು ಹೇಳುತ್ತ ಅಶ್ವತ್ಥಾಮನನ್ನು ಕೊಂದು ಹಾಕಿರಿ ಎಂದಳು ದ್ರೌಪದಿ.

ಕೃಷ್ಣನು ಅಶ್ವತ್ಥಾಮನು ಚಿರಂಜೀವಿ ಈಗಾಗಲೇ ಸತ್ತವರು ಮತ್ತೆ ಬರಲಾರರು ಅಶ್ವತ್ಥಾಮನ ಬಳಿಯಲ್ಲಿ ಒಂದು ರತ್ನವಿದೆ ಅದಿಲ್ಲದಿದ್ದರೆ ಅವನು ಸತ್ತಂತೆ ಎಂದಾಗ ಭೀಮಾರ್ಜುನರು ಅಶ್ವತ್ಥಾಮನನ್ನು ಹುಡುಕಲು ಹೊರಟರು.

ವ್ಯಾಸ ಮಹರ್ಷಿಗಳ ಆಶ್ರಮದ ಬಳಿಯಲ್ಲಿ ಅಶ್ವತ್ಥಾಮನು ಭೀಮಾರ್ಜುನರನ್ನು ಕಂಡು ಬ್ರಹ್ಮಾಸ್ತ್ರವನ್ನು ಬಿಟ್ಟಾಗ ಅರ್ಜುನನೂ ಬ್ರಹ್ಮಾಸ್ತ್ರವನ್ನೇ ಬಿಟ್ಟನು. ಅವೆರಡರ ಘರ್ಷಣೆಯಿಂದಾಗಬಹುದಾದ ತೊಂದರೆಯನ್ನು ತಿಳಿದ ವ್ಯಾಸ ಮಹರ್ಷಿಗಳು ಇಬ್ಬರೂ ಅಸ್ತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಕೇಳಿದರು.

 

 

ಅರ್ಜುನನು ಬಾಣವನ್ನು ತಟಸ್ಥಗೊಳಿಸಿದನು. ಆದರೆ ಅಶ್ವತ್ಥಾಮನು ಬ್ರಹ್ಮಾಸ್ತ್ರವು ಮುಂದೆ ಹೋಗಿ “ ಪಾಂಡವರ ಅಂಶವನ್ನೇ ನಾಶಗೊಳಿಸಲಿ” ಎಂದಾಗ ಅಭಿಮನ್ಯುವಿನ ಹೆಂಡತಿ ಉತ್ತರೆಯ ಗರ್ಭದಲ್ಲಿದ್ದ ಶಿಶುವಿಗೆ ಮಾರಕವಾಯಿತು.
ಎಲ್ಲರೂ ದುಃಖದಲ್ಲಿದ್ದಾಗ ಕೃಷ್ಣನು ಮಗುವನ್ನು ಬದುಕಿಸಿ ಎಲ್ಲರನ್ನೂ ಸಮಾಧಾನ ಪಡಿಸಿದನು.ಅಶ್ವತ್ಥಾಮನ ಬ್ರಹ್ಮಾ ಸ್ತ್ರವು ತಟಸ್ಥವಾಗದಿದ್ದಾಗ ತನ್ನ ತಲೆಯಲ್ಲಿದ್ದ ರತ್ನವನ್ನು ಅರ್ಜುನನಿಗೆ ಕೊಟ್ಟು ಅಶ್ವತ್ಥಾಮನು ತಪಸ್ಸಿಗಾಗಿ ತೆರಳಿದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top