fbpx
ಕಿರುತೆರೆ

ಕನ್ನಡ ಕಿರುತೆರೆಯ ದಿಕ್ಕನ್ನೇ ಬದಲಾಯಿಸಿದ್ದ ರಿಯಾಲಿಟಿ ಷೋ ಮತ್ತೆ ಬರ್ತಿದೆ.

ಕನ್ನಡ ಕಿರುತೆರೆಯ ದಿಕ್ಕನ್ನೇ ಬದಲಾಯಿಸಿದ್ದ ರಿಯಾಲಿಟಿ ಷೋ ಮತ್ತೆ ಬರ್ತಿದೆ.

 

 

ಕನ್ನಡ ಕಿರುತೆರೆಯ ರಿಯಾಲಿಟಿಶೋಗಳ ಅಬ್ಬರಕ್ಕೆ ನಾಂದಿ ಹಾಡಿದ್ದ ರಿಯಾಲಿಟಿ ಷೋ ಆದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮ ಮತ್ತೆ ಬರುತ್ತಿದೆ. ಅಭಿನಯ ಚಕ್ರವರ್ತಿ 2008ರಲ್ಲಿ ಕಿಚ್ಚ ಸುದೀಪ್ ನೇತೃತ್ವದಲ್ಲಿ ಮೂಡಿ ಬಂದಿದ್ದ ಈ ಕಾರ್ಯಕ್ರಮ ನಂತರದ ಸೀಸನ್ ಗಳನ್ನ ಅಕುಲ್ ಮತ್ತು ಸಂತೋಷ್ ನಡೆಸಿಕೊಟ್ಟಿದ್ದರು. ಮೂರು ಆವೃತ್ತಿಗಳ ಭಾರಿ ಯಶಸ್ಸಿನ ನಂತರ ಸುವರ್ಣ ವಾಹಿನಿಯು ಈಗ ಅದರ 4ನೇ ಆವೃತ್ತಿ ಪ್ರಾರಂಭಿಸುತ್ತಿದೆ.

 

 

ನಗರ ಪ್ರದೇಶದಲ್ಲಿ ಬೆಳೆದು ನಗರ ಜೀವನ ಶೈಲಿಗೆ ಒಗ್ಗಿಕೊಂಡಿರುವ ಮತ್ತು ಹಳ್ಳಿಯ ಸೊಗಡಿನ ಗಂಧವನ್ನು ತಿಳಿಯದ ಯುವತಿಯರು ಸುಮಾರು ಮೂರು ತಿಂಗಳ ಕಾಲ ಸಿಟಿ ಬಿಟ್ಟು ಹಳ್ಳಿಯಲ್ಲಿಯೇ ವಾಸ್ತವ್ಯ ಹೂಡುವುದು ಈ ಸ್ಪರ್ಧೆಯ ಮೂಲ ಗಮ್ಮತ್ತು. ಸ್ಪರ್ಧಿಗಳು ನಗರದ ಐಷಾರಾಮಿ ಜೀವನವನ್ನು ಸಂಪೂರ್ಣವಾಗಿ ತೊರೆದು ಮೂಲಭೂತ ಸೌಕರ್ಯಗಳನ್ನು ಪಡೆಯಲು ಹಳ್ಳಿಯಲ್ಲಿ ಪರದಾಡುವ ಪರಿಸ್ಥಿಯ ಹಂದರವೇ ಪ್ಯಾಟೆ ಹುಡ್ಗೀರ ಹಳ್ಳಿ ಲೈಫು ಕಾರ್ಯಕ್ರಮದ ಮೇಲುನೋಟ.

 

 

ಸ್ಪರ್ಧಿಗಳು ಮೊಬೈಲ್ ಫೋನ್‌ ಸೇರಿದಂತೆ ಎಲ್ಲ ಬಗೆಯ ಸಂಪರ್ಕಗಳಿಂದ ದೂರವಿರುತ್ತಾರೆ. ಪ್ರತಿದಿನ ನೀಡಲಾಗುವ ವಿವಿಧ ಬಗೆಯ ಸವಾಲುಗಳನ್ನು ಸ್ವೀಕರಿಸಿ ತಮ್ಮತಮ್ಮಲ್ಲಿಯೇ ಸೆಣಸಾಡಬೇಕಾಗುತ್ತದೆ. ಪ್ರತಿ ವಾರವೂ ಎಲಿಮಿನೇಷನ್ ಪ್ರಕ್ರೀಯೆ ನಡೆಯಲಿದ್ದು ಯಾರು ಕಾರ್ಯಕ್ರಮದ ಎಲ್ಲ ಸವಾಲುಗಳನ್ನು ಸಮರ್ಪಕವಾಗಿ ಎದುರಿಸತ್ತಾ ಮತ್ತು ವೀಕ್ಷಕರ ವಿಶ್ವಾಸವನ್ನು ಉಳಿಸಿಕೊಂಡು ಬರುತ್ತಾರೋ ಅವರು ವಿಜೇತರಾಗಿ ಆಯ್ಕೆಯಾಗುತ್ತಾರೆ.

 

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4 ಇನ್ನೂ ಆಡಿಷನ್ ಹಂತದಲ್ಲಿದ್ದು ಸ್ಪರ್ಧಿಗಳನ್ನು ಆಯ್ಕೆ ಮಾಡಿದ ನಂತರ ಕಾರ್ಯಕ್ರಮ ಯಾವಾಗ ಶುರುವಾಗುತ್ತದೆ ಮತ್ತು ಕಾರ್ಯಕ್ರಮವನ್ನು ಯಾರು ನಡೆಸಿಕೊಡುತ್ತಾರೆ ಎಂಬ ಮಾಹಿತಿಯನ್ನು ಶೋವನ್ನು ಆಯೋಜಿಸುವ ಸ್ಟಾರ್ ಸುವರ್ಣ ಚಾನೆಲ್ ಬಹಿರಂಗಗೊಳಿಸಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top