fbpx
ಮನೋರಂಜನೆ

ಬಿಗ್ ಬಾಸ್’ ಮುಗಿದ ಬಳಿಕ ದೊಡ್ಡ ರಿಯಾಲಿಟಿ ಶೋಗೆ ಜಡ್ಜ್ ಆದ ಚಂದನ್ ಶೆಟ್ಟಿ.

ಬಿಗ್ ಬಾಸ್’ ಮುಗಿದ ಬಳಿಕ ದೊಡ್ಡ ರಿಯಾಲಿಟಿ ಶೋಗೆ ಜಡ್ಜ್ ಆದ ಚಂದನ್ ಶೆಟ್ಟಿ.

 

 

ಸದ್ಯ ಬಿಗ್ ಬಾಸ್ ವಿಜೇತ ಶೆಟ್ಟಿ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ, ಒಂದು ಕಡೆ ಬಿಗ್ ಬಾಸ್ ಷೋ ಗೆದ್ದಿರುವ ಖುಷಿಯಲ್ಲಿದ್ದಾರೆ ಮತ್ತೊಂದು ತಮ್ಮ ಟಕೀಲ ಹಾಡು ಮಾಡಿರುವ ಸಾಧನೆ ಕಂಡು ಸಂತಸವಾಗಿದ್ದಾರೆ. ಒಂದು ಕಾಲದಲ್ಲಿ ಅವಕಾಶಗಳಿಗಾಗಿ ಆತೊರೆಯುತ್ತಿದ್ದ ಹುಡುಗನ ಕಾಲ ಬಳಿಗೆ ಇಂದು ಆಫರ್ ಗಳು ಬಂದು ಬೀಳುತ್ತಿವೆ. ಎಷ್ಟರ ಮಟ್ಟಿಗೆ ಎಂದರೆ ಎರಡು ಮೂರು ದಿನಗಳಲ್ಲೇ ಸುಮಾರು ಹತ್ತು ಕೋಟಿ ಆಫರ್ ಬರುವಷ್ಟು. ಇದನ್ನ ನಾವ್ ಹೇಳ್ತಿಲ್ಲ ಸ್ವತಃ ಚಂದನ್ ಶೆಟ್ಟಿಯವರೇ ಖಾಸಗಿ ಚಾನೆಲ್ ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

 

 

ಉಳಿದಂತೆ ಬಿಗ್ ಬಾಸ್ ಮುಗಿದ ನಂತರ ಚಂದನ್ ಶೆಟ್ಟಿಯವರು ಕಲರ್ಸ್ ಕನ್ನಡ ಚಾನೆಲ್ ನ ಮತ್ತೊಂದು ರಿಯಾಲಿಟಿ ಶೋವೊಂದರಲ್ಲಿ ಪಾಲ್ಗೊಳ್ಳಿದ್ದಾರಂತೆ. ಆದರೆ ಈ ಭಾರಿ ಸ್ಪರ್ಧಿಯಾಗಿ ಅಲ್ಲ ಬದಲಾಗಿ ತೀರ್ಪುಗಾರರಾಗಿ. ಕಲರ್ಸ್ ವಾಹಿನಿಯಲ್ಲಿ ಶುರು ಆಗಲಿರುವ ‘ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ಚಂದನ್ ಶೆಟ್ಟಿ ತೀರ್ಪುಗಾರರಾಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

 

 

ವಿಶೇಷವೆಂದರೆ ಮಾಸ್ಟರ್ ಡ್ಯಾನ್ಸರ್ ಕಾರ್ಯಕ್ರಮವನ್ನು ಅಕುಲ್ ಬಾಲಾಜಿ ನಡೆಸಿಕೊಡಲಿದ್ದು ಅವರು ಕೂಡ ಎರಡನೇ ಆವೃತ್ತಿಯ ಬಿಗ್ ಬಾಸ್ ಟ್ರೋಫಿಯನ್ನು ಗೆದ್ದುಕೊಂಡಿದ್ದರು. ಅಲ್ಲಿಗೆ ಚಂದನ್ ಅವ್ರು ಜಡ್ಜ್ ಆದರೆ ಇಬ್ಬರು ಬಿಗ್ ಬಾಸ್ ವಿಜೇತ ಅಭ್ಯರ್ಥಿಗಳನ್ನು ಒಂದೇ ಕಾರ್ಯಕ್ರಮದಲ್ಲಿ ನೋಡಬಹುದು. ‘ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ‘ನಾಟ್ಯ’ ಮಯೂರಿ ಹಾಗೂ ನಟಿ ಶ್ರುತಿ ಹರಿಹರನ್ ತೀರ್ಪುಗಾರರಾಗಿ ಆಯ್ಕೆಯಾಗಿದ್ದು ಇವರಿಬ್ಬರ ಮದ್ಯೆ ಚಂದನ್ ಕುಳಿತುಕೊಂಡರೆ ಅಚ್ಚರಿ ಪಡಬೇಕಾಗಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top