fbpx
ದೇವರು

ರಾಜಸ್ಥಾನದಲ್ಲಿರುವ ಈ ಚತುರ್ ದಾಸ್ ಜೀ ಮಂದಿರಕ್ಕೆ ಹೋದರೆ ಗುಣಪಡಿಸಲಾಗದಂತಹ ಕಾಯಿಲೆಗಳು ಸಹ ಗುಣವಾಗುತ್ತವೆಯಂತೆ , ದೇಶ-ವಿದೇಶಗಳಿಂದ ಭಕ್ತರು ಇಲ್ಲಿಗೆ ಬರ್ತಾರೆ

ರಾಜಸ್ಥಾನದಲ್ಲಿರುವ ಈ ಚತುರ್ ದಾಸ್ ಜೀ ಮಂದಿರಕ್ಕೆ ಹೋದರೆ ಗುಣಪಡಿಸಲಾಗದಂತಹ ಕಾಯಿಲೆಗಳು ಸಹ ಗುಣವಾಗುತ್ತವೆಯಂತೆ , ದೇಶ-ವಿದೇಶಗಳಿಂದ ಭಕ್ತರು ಇಲ್ಲಿಗೆ ಬರ್ತಾರೆ

ಕೇವಲ ಏಳು ದಿನ ದೇವಾಲಯದಲ್ಲಿ ಪ್ರದಕ್ಷಿಣೆ ಮಾಡಿ, ಮಂಗಳಾರತಿ ಸ್ವೀಕರಿಸಿದರೆ ಸಾಕು ಪಾಶ್ವವಾಯುವಿನಂತಹ ಕಾಯಿಲೆಗಳು ವಾಸಿಯಾಗುತ್ತವೆ.ದೇಹಕ್ಕೆ ಹುಷಾರಿಲ್ಲ, ತೊಂದರೆಯಾಗಿದೆ, ಸಮಸ್ಯೆ ಉಂಟಾಗಿದೆ ಎಂದರೆ ಭಯಂಕರವಾದ ರೋಗಗಳು ಕಾಡುತ್ತಿದ್ದರೆ ನಾವು ಸಾಮಾನ್ಯವಾಗಿ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗುತ್ತೇವೆ. ಆದರೂ ಎಷ್ಟು ಹಣ ಖರ್ಚು ಮಾಡಿದರೂ ಕಾಯಿಲೆ ವಾಸಿಯಾಗುವುದಿಲ್ಲ. ಆದರೆ ಈ ದೇವಸ್ಥಾನಕ್ಕೆ ನೀವು ಬರೀ ಏಳು ದಿನ ಹೋದರೆ ಸಾಕು ಕಾಯಿಲೆಗಳು ಗುಣವಾಗುತ್ತವೆ. ವೈದ್ಯರು ಗುಣಪಡಿಸಲಾಗದಂತಹ ಕಾಯಿಲೆಗಳು ಸಹ ಇಲ್ಲಿ ಗುಣವಾಗುತ್ತವೆ. ವೈದ್ಯರು ಆಗುವುದಿಲ್ಲ ಎಂದು ಕೈ ಚೆಲ್ಲಿದ್ದರೆ, ವಾಸಿಯಾಗಲು ಗುಣಪಡಿಸಲು ಆಗುವುದಿಲ್ಲ ಎನ್ನುವ ಕಾಯಿಲೆಗಳು ಸಹ ಈ ದೇವಸ್ಥಾನದಲ್ಲಿ ವಾಸಿಯಾದಂತಹ ಉದಾಹರಣೆಗಳು ಇಲ್ಲಿವೆ .ಈಗ ಇಲ್ಲಿ ಹೇಳಿರುವ ದೇವಸ್ಥಾನವೂ ಕೂಡ ಅಂತಹದ್ದೇ ದೇವಸ್ಥಾನದ ಸಾಲಿಗೆ ಸೇರುತ್ತದೆ ಇದು ದೇವರ ಒಂದು ಪವಾಡವೇ ಆಗಿದೆ. ಇಂತಹ ಕಾಯಿಲೆಗಳನ್ನು ಗುಣಪಡಿಸುವ ದೇವಸ್ಥಾನ ಇದು .

 

ಆದರೆ ಇದಕ್ಕೆಲ್ಲ ದೇವರ ಮೇಲಿನ ನಂಬಿಕೆ ಮುಖ್ಯ. ದೇವರ ಮೇಲೆ ಭಕ್ತಿ, ಶ್ರದ್ಧೆ, ನಂಬಿಕೆ ಇದ್ದರೆ ಮಾತ್ರ ಇದೆಲ್ಲ ಸಾಧ್ಯ.ಈ ದೇವಾಲಯದಲ್ಲಿ ಪಾರ್ಶ್ವವಾಯು ಸೇರಿದಂತೆ ಹಲವಾರು ವಿಧವಾದ ಕಾಯಿಲೆಗಳು ಜೊತೆಗೆ ಇಲ್ಲಿ ಭಯಂಕರ ಕಾಯಿಲೆಗಳು ಸಹ ಗುಣವಾಗಿವೆ. ಈ ದೇವಾಲಯವಿರುವುದು ಎಲ್ಲಿ ಎಂದರೆ, ಈ ದೇವಾಲಯಕ್ಕೆ ಬರುವ ರೋಗಿಗಳಿಗೆ ನಿಜವಾಗಿಯೂ ಪಾರ್ಶ್ವವಾಯುವಿನಂತಹ ಕಾಯಿಲೆ ಗುಣವಾಗುತ್ತದೆಯೇ ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

 

 

ಈ ದೇವಾಲಯಕ್ಕೆ ಹೆಚ್ಚಾಗಿ ಪಾರ್ಶ್ವವಾಯು ಪೀಡಿತ ರೋಗಿಗಳೇ ಬರುತ್ತಾರೆ. ಅಂತಹ ರೋಗಿಗಳು ಇಲ್ಲಿ ಬಂದು ಏಳು ದಿನಗಳ ಕಾಲ,ಈ ದೇವಸ್ಥಾನದಲ್ಲಿಯೇ ಉಳಿದುಕೊಳ್ಳಬೇಕು, ಇಲ್ಲಿ ಭಕ್ತಾದಿಗಳು ಉಳಿದುಕೊಳ್ಳಲು , ವಸತಿ ಸೌಲಭ್ಯದ ವ್ಯವಸ್ಥೆ ಇದೆ .

ಉಚಿತ ಭೋಜನ ,ವಸತಿ ಸೌಲಭ್ಯಗಳು ಕೂಡ ಇದೆ. ಸಾವಿರಾರು ಭಕ್ತಾದಿಗಳು ಇಲ್ಲಿಗೆ ಬಂದು, ತಮ್ಮ ಕಾಯಿಲೆಯನ್ನು ಗುಣ ಪಡಿಸಿಕೊಳ್ಳುತ್ತಾರೆ. ಕೇವಲ ಪಾರ್ಶ್ವವಾಯು ಅಷ್ಟೇ ಅಲ್ಲ, ಇನ್ನೂ ಅನೇಕ ರೋಗಗಳು ಕೂಡ ವಾಸಿಯಾದಂತಹ ಉದಾಹರಣೆಗಳು ಇಲ್ಲಿ ಸಿಗುತ್ತವೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

 

 

ಇದು ಒಂದು ಮೂಢ ನಂಬಿಕೆ ಎಂದು ನೀವು ಬಾವಿಸಬಹುದು. ಆದರೆ ಏನೇ ಚಿಕಿತ್ಸೆ ನೀಡಿದರೂ ವಾಸಿಯಾಗದ ಕಾಯಿಲೆಗಳು ಈ ದೇವಾಲಯದಲ್ಲಿ ವಾಸಿಯಾಗಿ, ಗುಣವಾದಂತಹ ಅನೇಕ ಉದಾಹರಣೆಗಳು ಇಲ್ಲಿ ಸಿಗುತ್ತವೆ. ಸುಮಾರು ಇನ್ನೂರು ವರ್ಷಗಳ ಹಿಂದೆ ಈ ದೇವಸ್ಥಾನದಲ್ಲಿ ಸನ್ಯಾಸಿಯೊಬ್ಬರು, ಈ ಪ್ರದೇಶಕ್ಕೆ ಬಂದು ತಮ್ಮ ತಪಸ್ಸಿನ ಶಕ್ತಿಯಿಂದ ಮತ್ತು ಜ್ಞಾನದಿಂದ ಅಲ್ಲಿಗೆ ಬರುವ ಭಕ್ತರನ್ನು ಮತ್ತು ಅವರಿಗಿರುವ ಕಾಯಿಲೆಗಳನ್ನು ಗುಣ ಪಡಿಸುತ್ತದೆರಂತೆ. ಆ ಸನ್ಯಾಸಿಯ ಸಮಾಧಿಯನ್ನು ಈಗಲೂ ಸಹ ದೇವಾಲಯದಲ್ಲಿ ಕಾಣಬಹುದಾಗಿದೆ. ಇಲ್ಲಿ ಆ ಸನ್ಯಾಸಿಯ ಮತ್ತು ಆ ದೇವ ಮಾನವನ ಹೆಸರನ್ನು ಜಪಿಸುತ್ತ, ಏಳು ದಿನಗಳ ಕಾಲ ಈ ದೇವಾಲಯದಲ್ಲಿ ಕಾಲ ಕಳೆದರೆ ಕಾಯಿಲೆಗಳು ಗುಣವಾಗುತ್ತವೆ ಎಂಬ ಪ್ರಬಲ ನಂಬಿಕೆ ಇಲ್ಲಿನ ಭಕ್ತಾದಿಗಳಲ್ಲಿ ಇದೆ.

 

 

ಹೀಗೆ ಏಳು ದಿನಗಳ ಕಾಲ ದೇವಸ್ಥಾನದ ಪ್ರದಕ್ಷಿಣೆಯನ್ನು ಮಾಡಿ ಆರತಿಯನ್ನು ತೆಗೆದುಕೊಳ್ಳಬೇಕು, ಇಲ್ಲಿಗೆ ಬರುವವರು ಮಂಗಳಾರತಿಯನ್ನು ತೆಗೆದುಕೊಳ್ಳಬೇಕು. ಬಿದ್ದು ಹೋದ ಕೈ ಕಾಲುಗಳು ಮತ್ತು ಪಾರ್ಶ್ವವಾಯುವಿನಿಂದ ಬಳಲುತ್ತಿರುವವರು ವೈದ್ಯರಿಂದ ಗುಣವಾಗದಿದ್ದರೆ ಪಾರ್ಶ್ವವಾಯುವಿನಿಂದ ಮಾತನಾಡಲು ಆಗದೇ ಹೋದವರು, ಕೂಡ ಸ್ವಲ್ಪ ಸ್ವಲ್ಪವೇ ಇಲ್ಲಿ ಮಾತನಾಡುತ್ತಾರೆ.
ಈ ದೇವಾಲಯದ ಮುಖ್ಯ ವಿಶೇಷತೆ ಏನೆಂದರೆ ಭಕ್ತರ ಬಳಿ ಯಾವುದೇ ಹಣ ಪಡೆಯುವುದಿಲ್ಲ . ಭಕ್ತರು ತಮ್ಮ ರೋಗವೂ ಗುಣವಾದ ಕಾರಣ ಇಲ್ಲಿ ದೇವಾಲಯದ ಅಭಿವೃದ್ಧಿಗೆ ಧನ ಸಹಾಯ ಮಾಡುತ್ತಿದ್ದಾರೆ. ಈ ರೀತಿಯ ಧನಸಹಾಯ ಮಾಡುತ್ತಿರುವುದರಿಂದ ದೇವಾಲಯ ನಡೆಯುತ್ತಿದೆ.

 

 

ಇಷ್ಟಕ್ಕೂ ಈ ದೇವಾಲಯ ನೆಲೆಸಿರುವುದು ರಾಜಸ್ಥಾನ ರಾಜ್ಯದ, ನಾಗೂರ್ ಜಿಲ್ಲೆಯಲ್ಲಿದೆ. ಈ ದೇವಾಲಯವನ್ನು ಚತುರ್ ದಾಸಜಿ ಮಂದಿರ್ ಎಂದು ಕರೆಯುತ್ತಾರೆ . ನಾಗೂರು ಜಿಲ್ಲೆಯ ದೇಡಾನ್ನ ಎಂಬ ಮಂಡಲದ ಬುಟಾಟಿ ಧಾಮ್ ಎಂಬ ಪ್ರದೇಶದಲ್ಲಿ ಈ ದೇವಾಲಯ ಇದೆ. ಈ ದೇವಾಲಯ ಸುಮಾರು ಇನ್ನೂರು ವರ್ಷಗಳಷ್ಟು ಹಳೆಯದು ಎಂದು ಹೇಳಬಹುದಾಗಿದೆ.
ವಿಶೇಷ ಏನೆಂದರೆ ಪ್ರತಿ ದಿನ ಈ ದೇವಾಲಯಕ್ಕೆ ಸುಮಾರು ಇನ್ನೂರರಿಂದ – ಇನ್ನೂರ ಐವತ್ತು ಮಂದಿ ಪಾರ್ಶ್ವವಾಯು ರೋಗಿಗಳು ಬರುತ್ತಿದ್ದಾರಂತೆ, ಈ ಸಮಯದಲ್ಲಿ ಪಾರ್ಶ್ವವಾಯು ರೋಗಿಗಳು ಕಡ್ಡಾಯವಾಗಿ ಇಲ್ಲಿಯೇ ಏಳು ದಿನಗಳ ಕಾಲ ಉಳಿದುಕೊಳ್ಳಬೇಕು ನಂತರ ಆರತಿಯನ್ನು ಸ್ವೀಕರಿಸಬೇಕು ಮಂದಿರದ ಪ್ರದಕ್ಷಿಣೆಯನ್ನು ಹಾಕಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top