fbpx
ತಿಂಡಿ ತೀರ್ಥ

ರುಚಿರುಚಿಯಾದ ಜ್ಯೂಸಿ ಚಿಕನ್ ಬ್ರೆಸ್ಟ್ ಈಗ ತುಂಬಾ ಸುಲಭವಾಗಿ ಮನೇಲಿ ಮಾಡ್ಕೋಬಹುದು

ಚಿಕನ್ ಬ್ರೆಸ್ಟ್:

 

ಬೇಕಾಗುವ ಸಾಮಗ್ರಿಗಳು :

 

ಚಿಕನ್ ಅರ್ಧ ಕೆಜಿ
ಉಪ್ಪು
ಕಾಳು ಮೆಣಸಿನ ಪುಡಿ ಒಂದು ಚಮಚ
ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಅಚ್ಚ ಖಾರದ ಪುಡಿ1 ಚಮಚ

ಮೊಟ್ಟೆ 3
ಮೈದಾ 1 ಕಪ್
ಎಣ್ಣೆ
ಟೊಮೇಟೊ ಸಾಸ್

 

ಮಾಡುವ ವಿಧಾನ :

 

ಮೊದಲಿಗೆ ಚಿಕನ್ ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ ನಂತರ ಅದಕ್ಕೆ ಉಪ್ಪು ,ಕಾಳು ಮೆಣಸಿನ ಪುಡಿ ,ಬೆಳ್ಳುಳ್ಳಿ ಪೇಸ್ಟ್ ಮತ್ತು ಅಚ್ಚ ಖಾರದ ಪುಡಿ ಹಾಕಿ ಚೆನ್ನಾಗಿ ಕಲಸಿ ಪಕ್ಕದಲ್ಲಿ ಇಟ್ಟುಕೊಳ್ಳಿ .

ಆ ಸಮಯದಲ್ಲಿ ಒಡೆದ ಮೊಟ್ಟೆಗಳನ್ನು ಮತ್ತು ಮೈದಾ ಹಿಟ್ಟನ್ನು ಒಂದೊಂದು ಪಾತ್ರೆಯಲ್ಲಿ ಇಟ್ಟುಕೊಳ್ಳಿ .

ನಂತರ ಎಣ್ಣೆಯನ್ನು ಬಿಸಿಮಾಡಿ ,ಎಣ್ಣೆ ಬಿಸಿಯಾದ ಮೇಲೆ ಕಲಸಿಟ್ಟುಕೊಂಡಿದ ಚಿಕನ್ ನನ್ನು ಮೈದಾ ಹಿಟ್ಟಿನಲ್ಲಿ ಒಂದು ಸಲ ಮತ್ತು ಮೊಟ್ಟೆಯಲ್ಲಿ ಒಂದು ಸಲ ಮತ್ತೆ ಮೈದಾ ಹಿಟ್ಟಿನಲ್ಲಿ ಇನ್ನೊಂದು ಸಲ ಮುಳುಗಿಸಿ ನಂತರ ಅದನ್ನು ಎಣ್ಣೆಯಲ್ಲಿ ಕರಿದುಕೊಳ್ಳಬೇಕು .

ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಟೊಮೇಟೊ ಸಾಸ್ ಹಾಕಿ ಈ ಕರಿದ ಚಿಕನ್ ತುಂಡುಗಳನ್ನು ಚೆನ್ನಾಗಿ ಮಿಶ್ರಣ ಮಾಡಬೇಕು .
ಬಹಳ ಸುಲಭವಾಗಿ ಚಿಕನ್ ಬ್ರೆಸ್ಟ್ ಮಾಡಿ ತಿನ್ನಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top