fbpx
ಮನೋರಂಜನೆ

“ತಲೆ ಹಿಡಿಯೋದು ತಲೆ ಹೊಡೆಯೋದು ಬಿಟ್ಟು ಏನ್ಬೇಕಾದ್ರೂ ಮಾಡಿ” ಅಡ್ಡದಾರಿ ಹಿಡಿಯೋರಿಗೆ ದರ್ಶನ್ ಬುದ್ದಿಮಾತು !

“ತಲೆ ಹಿಡಿಯೋದು ತಲೆ ಹೊಡೆಯೋದು ಬಿಟ್ಟು ಏನ್ಬೇಕಾದ್ರೂ ಮಾಡಿ” ಅಡ್ಡದಾರಿ ಹಿಡಿಯೋರಿಗೆ ದರ್ಶನ್ ಬುದ್ದಿಮಾತು !

 

 

ಬಾಗಲಕೋಟೆಯ ಇಳಕಲ್ ನಲ್ಲಿ ನಡೆದ ರಾಷ್ಟ್ರೀಯ ಯುವ ಉತ್ಸವದಲ್ಲಿ ಭಾಗಿಯಾಗಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಡ್ಡ ದಾರಿ ಹಿಡಿಯುವ ಯುವಕರಿಗೆ ಬುದ್ಧಿಮಾತನ್ನು ಹೇಳಿದ್ದಾರೆ. ಸಮಾರಂಭಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ದರ್ಶನ್, ಯುವ ಜನತೆ ಒಂದು ಕ್ಷಣವು ಸಮಯ ವ್ಯರ್ಥ ಮಾಡದೇ ಕೆಲಸದಲ್ಲಿ ನಿರತರಾಗಿ, ಕಷ್ಟ ಪಟ್ಟು ಮಾಡಬೇಕು ಅದು ಮುಂದಿನ ಸಾಧನೆಗೆ ದಾರಿಯಾಗುತ್ತದೆ ಎಂದು ಸಲಹೆ ನೀಡಿದರು .

 

 

 

ಕಾರ್ಯಕ್ರಮದಲ್ಲಿ ನೆರೆದಿದ್ದ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ದರ್ಶನ್ “ಸಮಯ ಅನ್ನೋದು ದುಡ್ಡು ಇದ್ದ ಹಾಗೆ,ಒಂದು ಸೆಕೆಂಡ್ ಟೈಮ್ ಕೂಡ ವೇಸ್ಟ್ ಮಾಡಬೇಡಬಾರದು. ತಲೆ ಹೊಡಿಬೇಡಿ. ಯಾರಿಗೂ ತಲೆ ಹಿಡಿಬೇಡಿ. ಜೀವನದಲ್ಲಿ ಈ ಎರಡು ಕೆಲಸ ಬಿಟ್ಟು ಬೇರೆ ಏನು ಬೇಕಾದರೂ ಮಾಡಿ ಉದ್ಧಾರ ಆಗ್ತೀರಾ.” ಅಂತ ಸಲಹೆ ನೀಡಿದ್ದಾರೆ.

ಮಾತು ಮುಂದುವರೆಸಿದ ದರ್ಶನ್ “ನಾನು ಇಲ್ಲಿಯವರೆಗೆ ಬೆಳೆದಿದ್ದೇನೆ ಅಂದರೆ ಅದು ನನ್ನ ಪರಿಶ್ರಮ, ನನ್ನನ್ನು ಯಾರು ಇಲ್ಲಿಯವರೆಗೆ ಕರೆದುಕೊಂಡು ಬಂದಿಲ್ಲ. ಹಾಗಂತ ಹೇಳುವ ಹಕ್ಕು ಯಾರಿಗೂ ಇಲ್ಲ. 150 ರೂಪಾಯಿಯಿಂದ ಹಿಡಿದು ಕೋತಿ ಕೋತಿ ರೂಪಾಯಿವರೆಗೆ ನೋಡಿದ್ದೇನೆ. ನೀವು ಕೂಡ ನಿಮ್ಮ ಪರಿಶ್ರಮದಿಂದಲೇ ಮೇಲೆ ಬರಬೇಕು, ಹತ್ತು ರೂಪಾಯಿ ಸಂಪಾದನೆ ಮಾಡಿದರೆ 2 ರೂಪಾಯಿಯನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಮುಂದೆ ಬರ್ತಿರ” ಎಂಬ ಮಾತುಗಳನ್ನು ದರ್ಶನ್ ಆಡಿದರು.

 

 

“ಹೆಚ್ಚು ಹೆಚ್ಚು ಕನ್ನಡ ಚಿತ್ರಗಳನ್ನು ನೋಡಿ ನಮ್ಮಂಥ ಕನ್ನಡ ಕಲಾವಿದರನ್ನು ಬೆಳೆಸಿ” ಎಂದು ಹೇಳಿ ದರ್ಶನ ಮಾತು ಮುಗಿಸಿದರು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top