fbpx
ಮನೋರಂಜನೆ

ದರ್ಶನ್ ಹುಟ್ಟುಹಬ್ಬದಂದು ಕಾದಿದೆ ಥರ ಥರದ ಸರ್‌ಪ್ರೈಸ್!

ದರ್ಶನ್ ಹುಟ್ಟುಹಬ್ಬದಂದು ಕಾದಿದೆ ಥರ ಥರದ ಸರ್‌ಪ್ರೈಸ್!

 


ತಮ್ಮ ನೆಚ್ಚಿನ ನಟರು ಹುಟ್ಟಿದ ದಿನವೆಂಬುದು ಅಭಿಮಾನಿಗಳ ಪಾಲಿಗೆ ಅಕ್ಷರಶಃ ಹಬ್ಬ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಮಾತ್ರ ಈ ಹಬ್ಬವನ್ನು ಕೆಲ ವರ್ಷಗಳಿಂದ ಕೇಕೆ ಹಾಕಲು ಮಾತ್ರ ಸೀಮಿತವಾಗಿಸದೆ ನೊಂದವರ ನೆರವಿಗೆ ನಿಲ್ಲುವಂಥಾ ಸಮಾಜಮುಖಿ ಸೇವಾ ಕಾರ್ಯಗಳಿಗೂ ಶ್ರೀಕಾರ ಹಾಕಿ ಮಾದರಿಯಾಗಿದ್ದರು. ಈ ಬಾರಿಯೂ ಇನ್ನೇನು ದರ್ಶನ್ ಹುಟ್ಟಿದ ಹಬ್ಬದ ಸಂಭ್ರಮ ಎದುರಾಗಲಿದೆ. ಅದಾಗಲೇ ಅಭಿಮಾನಿಗಳೆಲ್ಲ ವಿಭಿನ್ನವಾದ ರೀತಿಯಲ್ಲಿ ಅದನ್ನಾಚರಿಸಲು ತಯಾರಿ ಮಾಡಿಕೊಂಡಿದ್ದಾರೆ!

 

 

ಈ ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹುಟ್ಟುಹಬ್ಬವನ್ನು ಅಭಿಮಾನಿಗಳು ಉತ್ಸವದಂತೆ ಸಾರ್ಥಕವಾಗಿ ಆಚರಿಸಲು ಮುಂದಾಗಿದ್ದಾರೆ. ಅದಕ್ಕೆ ಅಭಿಮಾನಿಗಳೇ ಸೇರಿಕೊಂಡು ‘ಡಿ ಉತ್ಸವ’ ಎಂಬ ಹೆಸರನ್ನೂ ಫೈನಲ್ ಮಾಡಿಕೊಂಡು ಅದರ ಚೆಂದದ ಲೋಗೋವನ್ನೂ ಮಾಡಿಕೊಂಡಿದ್ದಾರೆ. ಜೊತೆಗೆ ಡಿ ಉತ್ಸವದ ಸಂಪೂರ್ಣವಾದ, ಅಚ್ಚುಕಟ್ಟಾದ ರೂಪುರೇಷೆಗಳನ್ನೂ ಸಿದ್ಧಪಡಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಇಂಥಾ ಹುಟ್ಟುಹಬ್ಬವನ್ನು ಅಭಿಮಾನಿಗಳೆಲ್ಲ ಒಂದೆಡೆ ಸೇರಿ ಸಂಭ್ರಮಿಸುತ್ತಾರೆ. ಇದು ಮಾಮೂಲು. ಆದರೆ ಇದುವರೆಗೂ ಭಿನ್ನವಾಗಿಯೇ ನಡೆದುಕೊಳ್ಳುತ್ತಾ ಬಂದಿರುವ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಇದೇ ಮೊದಲ ಬಾರಿಗೆ ಒಂದೇ ಹೆಸರಿಟ್ಟುಕೊಂಡು ಬೇರೆ ಬೇರೆಡೆಗಳಲ್ಲಿ ನವೀನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದರ್ಶನ್ ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದಾರೆ.

 


ಸದ್ಯ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತವಾಗಿ ಹಿರೆಕೆರೂರಿನಲ್ಲಿ ಕಬಡ್ಡಿ ಪಂದ್ಯಾವಳಿ ಗೊತ್ತುಪಡಿಸಲಾಗಿದೆ. ಆದರೆ ಇದು ಇಲ್ಲಿಗೆ ಮಾತ್ರವೇ ಸೀಮಿತವಲ್ಲ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಕೂಡಾ ದರ್ಶನ್ ಅಭಿಮಾನಿಗಳು ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ಮೂಲಕವೇ ತಮ್ಮ ಇಷ್ಟದ ನಟನ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. ಇನ್ನುಳಿದಂತೆ ಎಂದಿನಂತೆ ಅನಾಥಾಶ್ರಮಗಳಿಗೆ ತೆರಳಿ ನಡೆಸುವ ಸೇವೆ, ಅನ್ನದಾನಗಳೂ ಯಥಾಪ್ರಕಾರವಾಗಿಯೇ ನಡೆಯಲಿವೆ.

 

 

ಇನ್ನುಳಿದಂತೆ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರವಾದ ಕುರುಕ್ಷೇತ್ರದ ಕಡೆಯಿಂದಲೂ ಬರ್ತಡೇ ಗಿಫ್ಟೊಂದು ಜಾಹೀರಾಗೋ ಸಂಭವವಿದೆ. ಒಂದು ಅದ್ದೂರಿಯಾದ ಟ್ರೈಲರ್ ಅನ್ನು ದರ್ಶನ್ ಹುಟ್ಟುಹಬ್ಬದಂದೇ ಬಿಡುಗಡೆ ಮಾಡಲು ಕುರುಕ್ಷೇತ್ರ ಚಿತ್ರ ತಂಡ ನಿರ್ಧರಿಸಿದಂತಿದೆ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ಅವರ ದುರ್ಯೋಧನನ ಲುಕ್ಕು ಹೊಂದಿರೋ ಮರಳು ಶಿಲ್ಪವೊಂದೂ ತಯಾರಾಗಿದೆ. ಇದರ ಬಗೆಗಿನ ವೀಡಿಯೋ ಕೂಡಾ ಎಲ್ಲೆಡೆ ಹರಿದಾಡುತ್ತಿದೆ.

ಒಟ್ಟಾರೆಯಾಗಿ ದರ್ಶನ್ ಅವರ ಹುಟ್ಟುಹಬ್ಬವನ್ನು ಈ ಹಿಂದಿಗಿಂತಲೂ ಭಿನ್ನವಾಗಿ ಆಚರಿಸಲು ಅಭಿಮಾನಿಗಳು ಮತ್ತು ಡಿ ಕಂಪೆನಿಯ ಮುಖ್ಯಸ್ಥರು ಮುಂದಾಗಿದ್ದಾರೆ. ಅದಕ್ಕಾಗಿನ ತಯಾರಿಗಳು ರಾತ್ರಿ ಹಗಲಿನ ಬೇಧವಿಲ್ಲದೆ ನಡೆಯುತ್ತಿವೆ!

 


 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top