fbpx
ಸಮಾಚಾರ

ದೇಶದ ಹಿಂದಿ ಭಾಷಿಗರಿಗೆ ಮಾತ್ರ ಬಜೆಟ್ ಮಂಡಿಸಿದ ಅರುಣ್ ಜೇಟ್ಲಿ. #HindiBudget

ದೇಶದ ಹಿಂದಿ ಭಾಷಿಗರಿಗೆ ಮಾತ್ರ ಬಜೆಟ್ ಮಂಡಿಸಿದ ಅರುಣ್ ಜೇಟ್ಲಿ. #HindiBudget

 

 

ಹಿಂದಿನಿಂದಲೂ ಕೇಂದ್ರ ಸರ್ಕಾರವು ಪ್ರಾದೇಶಿಕ ಭಾಷೆಗಳ ರಾಜ್ಯಗಳಲ್ಲಿ ಹಿಂದಿಯನ್ನು ಒತ್ತಾಯಪೂರ್ವಕವಾಗಿ ಹೇರುತ್ತಲೇ. ಆಯಾ ರಾಜ್ಯಗಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಹೋರಾಟಗಳನ್ನು ಮಾಡುತ್ತಿದ್ದಾರೆ. ಆದರೂ ಕ್ಯಾರೇ ಅನ್ನದ ಕೇಂದ್ರ ಸರ್ಕಾರ ತನ್ನ ಹಿಂದಿ ಹೇರಿಕೆಯ ಬಾಣವನ್ನ ಪ್ರಾದೇಶಿಕ ಭಾಷೆ ಮಾತನಾಡುವ ಜನರ ಮೇಲೆ ಬಿಡುತ್ತಲೇ ಬಂದಿದೆ. ಇಂದಿನ ಕೇಂದ್ರ ಬಜೆಟ್ ಮಂಡನೆ ಕೂಡ ಕೇಂದ್ರ ಸರ್ಕರದ ಹಿಂದಿ ಭಾಷೆ ಮೇಲಿನ ವ್ಯಾಮೋಹವನ್ನ ಎತ್ತಿಯಿಡಿದಿದೆ.

ಸಾಮಾನ್ಯವಾಗಿ ಬಜೆಟ್ ಮಂಡನೆ ಮುನ್ನ ಹಣಕಾಸು ಸಚಿವರು ಮಾಡುವ ಭಾಷಣ ಇಂಗ್ಲಿಷ್‍ನಲ್ಲಿರುತ್ತದೆ. ಆದರೆ ತಮಗೆ ಹಿಂದಿ ಮೇಲಿರುವ ವ್ಯಾಮೋಹವನ್ನು ಪ್ರದರ್ಶಿಸಿಕೊಳ್ಳಲೋ ಏನೋ ಗೊತ್ತಿಲ್ಲ ಬಜೆಟ್ ಭಾಷಣವನ್ನು ಈ ಬಾರಿ ಇಂಗ್ಲೀಷ್ ಜೊತೆ ಹಿಂದಿಯಲ್ಲೂ ಮಾಡಿ ಮುಗಿಸಿದ್ದಾರೆ ಅರುಣ್ ಜೇಟ್ಲಿ. ಈ ಮೂಲಕ ಅರುಣ್ ಜೇಟ್ಲಿ ಅವರು ಸ್ವಾತಂತ್ರ್ಯ ನಂತರ ವಿತ್ತ ಸಚಿವರೊಬ್ಬರು ಮೊಟ್ಟ ಮೊದಲ ಬಾರಿಗೆ ಹಿಂದಿಯಲ್ಲಿ ಬಜೆಟ್ ಮಂಡನೆ ಮಾಡಿದ್ದಂತಾಗಿದೆ .

 

 

ದೇಶಕ್ಕೆ ಶೇಕಡಾ 70ರಷ್ಟು ಆದಾಯ ಬರುತ್ತಿರುವುದು ದಕ್ಷಿಣ ಭಾರತ ಸೇರಿದಂತೆ ಪ್ರಾದೇಶಿಕ ಭಾಷೆಗಳ ರಾಜ್ಯಗಳಿಂದಲೇ, ಇನ್ನು ದೇಶದ ಜನಸಂಖ್ಯೆಯಲ್ಲಿ ಶೇಕಡಾ 60% ಜನ ಹಿಂದಿ ಬಾರದವರೇ ಇದ್ದಾರೆ. ಹೀಗಿರುವಾಗ ಇಂಗ್ಲಿಷ್ ಜೊತೆ ಕೇವಲ ಹಿಂದಿಗೆ ಮಾತ್ರ ವಿಶೇಷ ಸ್ಥಾನಮಾನ ನೀಡಿರುವುದು ಏಕೆ? ಸರ್ಕಾರದ ಬಜೆಟ್ ನಲ್ಲಿ ಅರ್ಥವಾಗದ ಭಾಷೆಯಲ್ಲಿ ಭಾಷಣ ಮಾಡುವ ಮೂಲಕ ಮಾನ್ಯ ವಿತ್ತ ಸಚಿವರು ದೇಶದ ಜನತೆಗೆ ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ತಿಳಿಯುತ್ತಿಲ್ಲ.

ದೇಶದ ಗ್ರಾಮೀಣ ಜನರಿಗೆ ಹಿಂದಿ ಬರುವುದಿಲ್ಲ ಹಾಗಾಗಿ ನಮ್ಮ ಭಾಷಣದ ಸಾರಾಂಶವನ್ನು ಜನರು ಓಲೈಸಿಕೊಳ್ಳಲಿ ಎಂದು ಭಾಷಣವನ್ನು ಹಿಂದಿಯಲ್ಲಿ ಮಾಡಿರುವುದಾಗಿ ಸಚಿವರು ಹೇಳಿದ್ದಾರೆ. ಆದರೆ ಭಾರತದಲ್ಲಿರುವ ಹಿಂದಿಯೇತರ ರಾಜ್ಯಗಳಲ್ಲಿ ಗ್ರಾಮೀಣ ಜನರೇ ಇಲ್ಲವೇ? ಅಲ್ಲಿನ ಗ್ರಾಮೀಣ ಜನರಿಗೆ ಯಾವ ಭಾಷೆಯಲ್ಲಿ ಓಲೈಸುತ್ತಾರೋ ಅವರೇ ಹೇಳಬೇಕು. ಜೇಟ್ಲಿ ಬಜೆಟ್ ಮಂಡಿಸುತ್ತಿರುವುದು ಕೇವಲ ಹಿಂದಿ ಮಾತನಾಡುವ ಜನರಿಗಾಗಿಯೇ? . ಅಥವಾ ಹಿಂದಿ ಬಾರದವರ್ಯಾರು ಭಾರತೀಯರೇ ಅಲ್ಲವೇ? ಯಾವ ಭಾಷೆಗೂ ಕೊಡದಿರುವ ಪ್ರಾಧ್ಯಾನ್ಯತೆ ಕೇವಲ ಹಿಂದೆಗೆ ಏಕೆ ಕೊಡಬೇಕು? ಎನ್ನುವುದು ತಮ್ಮ ಮಾತೃ ಭಾಷೆಗಳ ಮೇಲೆ ಗೌರವ ಇಟ್ಟುಕೊಂಡಿರುವ ಪ್ರಜೆಗಳ ಪ್ರಶ್ನೆ!

ಸರ್ಕಾರದ ಈ ಎಲ್ಲ ಪಿತೂರಿಗಳು ಹಿಂದಿ ಭಾಷೆಯ ಅಭಿವೃದ್ಧಿಯ ಉದ್ದೇಶದಿಂದ ತೆಗೆದುಕೊಂಡಿರುವುದು ಎನ್ನುವುದು ನೂರಕ್ಕೆ ನೂರರಷ್ಟು ನಿಜ. ಆದರೆ ಹಿಂದಿಯನ್ನು ಇಲ್ಲಿ ಭಾರತದ 22 ಅಧಿಕೃತ ಭಾಷೆಗಳಲ್ಲೊಂದು ಎನ್ನುವ ನೆಲೆಗಿಂತಲೂ ಇಂಗ್ಲಿಷ್‌ನೊಡನೆ ಅಧಿಕೃತ ಆಡಳಿತದ ಭಾಷೆ ಎನ್ನುವುದೇ ಇದರ ಹಿಂದಿರುವ ಹಿಡನ್ ಅಜೆಂಡಾ, ಈ ನಿಟ್ಟಿನಲ್ಲಿ ಹಿಂದಿಯ ಅಭಿವೃದ್ಧಿ ಪ್ರಯತ್ನ ಕೂಡ ಜೋರಾಗಿ ನಡೆಯುತ್ತಿದೆ… ಆದರೆ ಹಿಂದಿಯ ಅಗತ್ಯವಿಲ್ಲದಿರುವ ಭಾಗಗಳಲ್ಲಿಯೂ ಹಿಂದಿ ಬಳಕೆಯಾಗುತ್ತಿರುವುದನ್ನು ಹೇರಿಕೆ ಎನ್ನದೆ ಮತ್ತಿನ್ನೇನು ಕರಿಯಬೇಕು?

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top