fbpx
ಸಮಾಚಾರ

ಸತ್ತ ಮೇಲೆ ಮನುಷ್ಯರನ್ನು ಹಿಂದೂ ಧರ್ಮದಲ್ಲಿ ದಹನ ಸಂಸ್ಕಾರ ಮಾಡುವುದು ಯಾಕೆ ? ಗೊತ್ತಾ ?

ಸತ್ತ ಮೇಲೆ ಮನುಷ್ಯರನ್ನು ಹಿಂದೂ ಧರ್ಮದಲ್ಲಿ ದಹನ ಸಂಸ್ಕಾರ ಮಾಡುವುದು ಯಾಕೆ ? ಗೊತ್ತಾ ?

ವಿವಿಧ ಧರ್ಮಗಳಲ್ಲಿ ಸತ್ತವರನ್ನು ವಿವಿಧ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ನಾವು ಯಾವುದೇ ಧರ್ಮದಲ್ಲಿ ನೋಡಿದರೂ ಸಹ ಮರಣ ಹೊಂದಿದವರನ್ನು ಹೂಳುವುದು ಅಥವಾ ಸುಡುವುದನ್ನು ಮಾಡುತ್ತಾರೆ. ಆದರೆ ವಿಶೇಷವಾಗಿ ಹಿಂದೂ ಧರ್ಮದಲ್ಲಿ ಸತ್ಯ ವ್ಯಕ್ತಿಗಳನ್ನು ದಹನ ಮಾಡುತ್ತಾರೆ. ಯಾಕೆ ? ದಹನ ಮಾಡುತ್ತಾರೆ ? ಎನ್ನುವುದೇ ಮುಖ್ಯ ಪ್ರಶ್ನೆಯಾಗಿದೆ.

 

 

ಬದುಕಿದ್ದಾಗ ಮನುಷ್ಯ ಗೊತ್ತಿದ್ದೋ ? ಗೊತ್ತಿಲ್ಲದೆಯೋ ? ಬಹಳಷ್ಟು ಅನೇಕ ರೀತಿಯ ಪಾಪ ಕರ್ಮಗಳನ್ನು ಮಾಡಿರುತ್ತಾನೆ. ಹಿಂದೂ ಧರ್ಮದಲ್ಲಿ ಮಾತ್ರ ಅವರನ್ನು ಸಂಪ್ರದಾಯ ಬದ್ಧವಾಗಿ ಅವರ ಆಚಾರ ವಿಚಾರಗಳ ಪ್ರಕಾರ ದಹನ ಮಾಡುತ್ತಾರೆ. ಯಾಕೆಂದರೆ ಅಗ್ನಿಗೆ ಹಾಕಿ ದಹನ ಮಾಡುವುದರಿಂದ ಮತ್ತೆ ಹುಟ್ಟುವ ಮುಂದಿನ ಜನ್ಮದಲ್ಲಾದರೂ ಅಥವಾ ಪುನರ್ ಜನ್ಮದಲ್ಲಾದರೂ ಪರಿಶುದ್ಧನಾಗಿ ಆತ ಯಾವುದೇ ರೀತಿಯ ಪಾಪ ಕರ್ಮಗಳನ್ನು ಮಾಡದಂತೆ ಬದುಕುತ್ತಾನಂತೆ.

 

 

ಆದ್ದರಿಂದ ಹಿಂದೂ ಧರ್ಮದಲ್ಲಿ ಸತ್ತವರನ್ನು ದಹನ ಮಾಡುತ್ತಾರೆ . ದಹನ ಮಾಡಿದರೆ ದೇಹವನ್ನು ಆತ್ಮ ಹಾಗೆಯೇ ಅಂಟಿಸಿಕೊಂಡು ಇರುತ್ತದೆ. ಆತ್ಮ ಆ ದೇಹವನ್ನು ಬಿಡಬೇಕೆಂದರೆ ಅದನ್ನು ದಹನ ಮಾಡಬೇಕು. ಆ ರೀತಿ ಬೆಂಕಿಯಲ್ಲಿ ಹಾಕಿ ಸುಟ್ಟರೆ ಅಥವಾ ದಹನ ಮಾಡಿದರೆ, ದೇಹ ಆತ್ಮ ಬಿಟ್ಟು ಬೇರೊಂದು ದೇಹವನ್ನು ಸೇರಿಕೊಳ್ಳುತ್ತದೆ. ದಹನ ಮಾಡಿದಷ್ಟು ಹೊತ್ತು ಆತ್ಮ ಅದೇ ರೀತಿ ಅಲೆದಾಡುತ್ತಾ ಇರುತ್ತದೆಯಂತೆ.
ಹೀಗಾಗಿ ದಹಿಸಲಾಗುತ್ತದೆಯಂತೆ. ಇನ್ನೂ ಯಾರನ್ನೂ ದಹನ ಮಾಡಿದರೂ ಕೂಡ ನೀರಿನ ಪ್ರವಾಹ ಇರುವ ನದಿ, ಕೆರೆಯ ದಡದ ಬಳಿ ಈ ಕೆಲಸವನ್ನು ಮಾಡುತ್ತಾರೆ. ಇದರಿಂದ ಆತ್ಮ ಪರಿಶುದ್ಧವಾಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

 

ಹೀಗೆ ಈ ರೀತಿಯಾಗಿ ದಹನ ಮಾಡಿದ ಬಳಿಕ ಆ ದೇಹದ ಸುಟ್ಟ ಬೂದಿಯನ್ನು ನೀರಿನಲ್ಲಿ ಬಿಡಲಾಗುತ್ತದೆ.ಹೀಗೆ ಮಾಡುವುದರಿಂದ ದೇಹವು ಪಂಚಭೂತಗಳಲ್ಲಿ ಲೀನವಾಗುತ್ತದೆ, ಅಂದರೆ ಬೆರೆಯುತ್ತದೆ. ಆ ಬಳಿಕ ಸತ್ತ ಹದಿಮೂರನೇ ದಿನ ಪಿಂಡ ಪ್ರದಾನವನ್ನು ಮಾಡಲಾಗುತ್ತದೆ. ಇದರಿಂದ ಆತ್ಮಕ್ಕೆ ವಿಮುಕ್ತಿ ದೊರೆತು ಇನ್ನೊಂದು ದೇಹದಲ್ಲಿ ಸೇರುತ್ತದೆ.

ಈ ಒಟ್ಟಾರೆ ಪ್ರಕ್ರಿಯೆಯನ್ನು ಹಿಂದೂಗಳು ಅಂತ್ಯ ಸಂಸ್ಕಾರ ಎಂದು ಕರೆಯುತ್ತಾರೆ. ಹೀಗೆ ಸತ್ತ ಮೇಲೆ ಮನುಷ್ಯರನ್ನು ದಹನ ಮಾಡುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಇದಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top