fbpx
ಕ್ರೈಂ ಸ್ಟೋರಿ

ನಟಿ ಜಿಯಾ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್.. ಸಿಬಿಐ ಬಹಿರಂಗಪಡಿಸಿತು ಭಯಾನಕ ವಿಷಯ

ನಟಿ ಜಿಯಾ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್.. ಸಿಬಿಐ ಬಹಿರಂಗಪಡಿಸಿತು ಭಯಾನಕ ವಿಷಯ

 

ಬಾಲಿವುಡ್ ನಟಿ ಜಿಯಾ ಖಾನ್ ರವರ ಆತ್ಮಹತ್ಯೆ ಪ್ರಕರಣ ದೇಶ್ಯಾದ್ಯಂತ ಸದ್ದು ಮಾಡಿತ್ತು. ಈಗ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಹೊಸ ರೋಚಕ ಟ್ವಿಸ್ಟ್ ಸಿಕ್ಕಿದೆ ಪ್ರಕರಣದ ಸಂಬಂಧ ಬಾಲಿವುಡ್ ಹಿರಿಯ ನಟ ಆದಿತ್ಯ ಪಾಂಚೋಲಿ ಪುತ್ರ ಸೂರಜ್ ಪಾಂಚೋಲಿ ಜಿಯಾ ಖಾನ್ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಕುರಿತು ದೋಷಾರೋಪ ಪಟ್ಟಿಯು ನಿನ್ನೆ ಸಲ್ಲಿಕೆ ಆಗಿದೆ. ಮುಂಬೈ ಸೆಷನ್ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ನಡೆಸಲಿದೆ. ಈ ಆರೋಪ ಸಾಬೀತಾದರೆ ಗರಿಷ್ಠ 10 ವರ್ಷ ಕಾಲ ಕಾರಾಗ್ರಹ ವಾಸ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

 

 

ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬೆನ್ನಲ್ಲಿ ತಾನು ಅಮಾಯಕ ನಾಗಿದ್ದೇನೆ ಎಂದು ಸೂರಜ್ ಪಾಂಚೋಲಿ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾನೆ ಎಂದು ತಿಳಿದುಬಂದಿದೆ, ಮುಂಬೈ ಸೆಷನ್ಸ್ ಕೋರ್ಟ್ ಫೆಬ್ರುವರಿ 14 ರಿಂದ ವಿಚಾರಣೆ ಮಾಡಲಿದೆ.

 

 

ಸಿಬಿಐ ತಂಡ ತನಿಖೆ ಮಾಡಿದಾಗ, ಅನೇಕ ವಿಷಯಗಳು ಬಹಿರಂಗವಾಗಿವೆ. ಸಿಬಿಐ ಚಾರ್ಜ್‍ಶೀಟ್‌ನಲ್ಲಿ ಸಲ್ಲಿಕೆ ಮಾಡಿದೆ. ಜಿಯಾ ಹಾಗು ಸೂರಜ್ ಸರಳವಾದ ಜೇವನ ನಡೆಸುತ್ತಿದ್ದರು ಆಮೇಲೆ ಜಿಯಾ ಗರ್ಭಿಣಿ ಆದರು. ಜಿಯಾಗೆ ಒತ್ತಾಯ ಪೂರ್ವಕವಾಗಿ ಗರ್ಭಪಾತ ಮಾಡಿಸಲಾಯಿತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

 

 

ಸಿಬಿಐ ತಂಡ ವಿಚಾರಣೆ ಮಾಡುತ್ತಿರುವಾಗ ಆದಿತ್ಯ ಪಾಂಚೋಲಿ ಸತ್ಯವನ್ನು ಮುಚ್ಚಿ ಇಡುತ್ತಿದರೆ ಎಂದು ಹೇಳಿತ್ತು , ಇವರನ್ನು ಬ್ರೈನ್ ಮ್ಯಾಪಿಂಗ್ ಟೆಸ್ಟ್‌ಗೆ ಒಳಪಡಿಸಬೇಕು ಎಂದು ಸಿಬಿಐ ಹೇಳಿತ್ತು. ಆದರೆ ಆದಿತ್ಯ ಬ್ರೈನ್ ಮ್ಯಾಪಿಂಗ್ ಟೆಸ್ಟ್‌ಗೆ ನಿರಾಕರಿಸಿದ್ದ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top