fbpx
ಸಿನಿಮಾ

ಜೂಹಿ ಚಾವ್ಲಾ ಗೆ ತನ್ನ ಮಗಳು ಏನಾಗಬೇಕೆಂದು ಆಸೆ ಇದೆ ಗೊತ್ತಾ?

ಜೂಹಿ ಚಾವ್ಲಾ ಗೆ ತನ್ನ ಮಗಳು ಏನಾಗಬೇಕೆಂದು ಆಸೆ ಇದೆ ಗೊತ್ತಾ?

 

 

ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ‘ಪ್ರೇಮಲೋಕ’ ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಬಾಲಿವುಡ್ ನಟಿ ಜೂಹಿ ಚಾವ್ಲಾ ನಂತರ ಅನೇಕ ಕನ್ನಡ ಚಿತ್ರದಲ್ಲಿ ನಟಿಸಿದ್ದು. ಬಾಲಿವುಡ್ ನಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ. ಉದ್ಯಮಿ ಜಯ್ ಮೆಹ್ತಾ ಅವರನ್ನು ಮದುವೆ ಆಗಿರುವ ಜೂಹಿ ಚಾವ್ಲಾ ಈಗಲೂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಮೇಶ ಅರವಿಂದರ ‘ಪುಷ್ಪಕ ವಿಮಾನ’ ಚಿತ್ರದಲ್ಲಿ ಒಂದು ಪಾತ್ರದಲ್ಲಿ ಮತ್ತೆ ಕನ್ನಡ ಚಿತ್ರೋದ್ಯಮಕ್ಕೆ ಮರಳಿದ್ದರು.

 

 

ಈ ಹಿಂದೆ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯಾಗಿ, ಹೆಸರು ಮಾಡಿದ್ದ ಜೂಹಿ ಚಾವ್ಲಾ ಅವರು ಇಂದಿಗೂ ಅದೇ ಛಾಪನ್ನು ಉಳಿಸಿಕೊಂಡು ಬಂದಿದ್ದಾರೆ. ಹೀಗಿದ್ದರೂ ಜೂಹಿ ಚಾವ್ಲಾ ರವರು ತಮ್ಮ ಮಕ್ಕಳಿಗೆ ಮಾತ್ರ ಸರಳ, ಸಾಮಾನ್ಯ ಅಮ್ಮನಂತೆ. ತಮ್ಮ ಬ್ಯುಸಿ ಜೀವನದಲ್ಲೂ ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ.

 

 

ಬಹಳಷ್ಟು ಜನ ಬಾಲಿವುಡ್ ತಾರೆಯರು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ತರಲು ಇಚ್ಛಿಸುತ್ತಿರುತ್ತಾರೆ. ಆದ್ರೆ ಜೂಹಿ ಚಾವ್ಲಾ ಮಾತ್ರ ತಮ್ಮ ಮಗಳು ತಂದೆಯಂತೆ ಖ್ಯಾತ ಉದ್ಯಮಿ ಆಗಲಿ ಎಂದು ಆಸೆ ಹೊಂದಿದ್ದಾರೆ. ಜೂಹಿ ಚಾವ್ಲಾ ಮಗಳಾದ ಜಾಹ್ನವಿ ಚಾವ್ಲಾ ಇಂಗ್ಲೆಂಡ್ ನಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿದ್ದಾರೆ. ಇತ್ತೀಚಿಗೆ ಬೆಂಗಳೂರು ನಗರದಲ್ಲಿ ನಡೆದ ಐಪಿಎಲ್ ಬಿಡ್ಡಿಂಗ್ ನಲ್ಲಿ ಕಾಣಿಸಿಕೊಂಡಿದ್ದರು. ಜೂಹಿ ಚಾವ್ಲಾ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಒಡತಿಯಾಗಿದ್ದರೆ. ಜಾಹ್ನವಿ ಈ ಐಪಿಎಲ್ ಬಿಡ್ಡಿಂಗ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಒಡತಿ ಪ್ರೀತಿ ಜಿಂಟಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸಾಮಾಜಿಕ ಜಾತನದಲ್ಲಿ ಈ ಚಿತ್ರ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top