fbpx
ಹೆಚ್ಚಿನ

ಕರ್ನಾಟಕದಲ್ಲಿ ಕನ್ನಡ ಬೇಡವೆಂದ ಭಾರತೀಯ. ಕನ್ನಡ VS ಭಾರತೀಯ ಫೈಟ್ ಶುರು

ಕರ್ನಾಟಕದಲ್ಲಿ ಕನ್ನಡ ಬೇಡವೆಂದ ಭಾರತೀಯ. ಕನ್ನಡ VS ಭಾರತೀಯ ಫೈಟ್ ಶುರು

 

ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಕಲಿಯದೇ ಪರ ಭಾಷೆಗಳಲ್ಲೇ ವ್ಯವಹಾರ ನಡೆಸುತ್ತಿರುವ ಹೊರ ರಾಜ್ಯಗಳ ಅಧಿಕಾರಿಗಳ ವಿರುದ್ಧ ಕನ್ನಡಿಗರು ಆಕ್ರೋಶವನ್ನು ವ್ಯಕ್ತಪಡಿಸೋದು ಆಗಾಗ ಕೇಳಿಬರುತ್ತಲೇ ಇರುತ್ತದೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿರುವ ವಿಜಯ ಬ್ಯಾಂಕಿನಲ್ಲೂ ಕೂಡ ಇಂಥದ್ದೇ ಘಟನೆ ನಡೆದಿದ್ದು ಆ ಬ್ಯಾಂಕಿನ ಅಧಿಕಾರಿಗೆ ತರತೆಯನ್ನು ತೆಗೆದುಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಆ ವಿಡಿಯೋವನ್ನು ಇಲ್ಲಿ ನೋಡಿ👇👇👇

 

ಈ ವಿಡಿಯೋ ಪೋಸ್ಟ್ ಬುಕ್ ನಲ್ಲಿ ಪೋಸ್ಟ್ ಮಾಡಿದಾಗ Subhasish Mazumder ಎಂಬ ವ್ಯಕ್ತಿ ಕಾಮೆಂಟ್ ಮಾಡಿ ಬ್ಯಾಂಕ್ ಅಧಿಕಾರಿಗೆ ಕನ್ನಡ ಕಲಿಯಲು ಹೇಳಿದ ಕನ್ನಡಿಗನಿಗೆ ಮುಖದ ಮೇಲೆ ಉಗುಳುತ್ತೇನೆಂದು ದರ್ಪ ತೋರಿದ್ದಾನೆ. ಸಾಲದಕ್ಕೆ ಕನ್ನಡಿಗನಿಗೆ ಸೈಕೋ ಎಂದು ಕರೆದು ಅವರಿಗೆ ಎಲೆಕ್ಟ್ರಿಕ್ ಶಾಕ್ ಕೊಡಿಸಬೇಕೆಂದು ಹೇಳಿದ. ಕರ್ನಾಟದಲ್ಲಿ ಬೇರೆ ಭಾಷೆ ಅಡ್ಜಸ್ಟ್ ಮಾಡ್ಕೋಬೇಕಂತೆ.

 

 

Subhasish Mazumder ಮಾಡಿರುವ ಫೇಸ್ಬುಕ್ ಕಾಮೆಂಟ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

 

ಹಿಂದಿವಾಲಗಳ ಗುಲಾಮಗಿರಿಯಲ್ಲಿ ನಾವು ಬದುಕುತ್ತಿರುವುದಕ್ಕೆ ಇದೊಂದು ತಾಜಾ ಉದಾಹರಣೆ. ಯಾವ ನಿಯಮವೂ ಇಲ್ಲ, ಕನ್ನಡಿಗನಿಗೆ ಅನ್ಯಾಯವಾದರೂ ಪರವಾಗಿಲ್ಲ ಹಿಂದಿವಾಲಗಳಿಗೆ ಕೆಲಸ ಇದೆ.

ಆ ಹಿಂದಿ ಮಹಿಳಾ ಅಧಿಕಾರಿಗೆ ಬೆಂಬಲಕ್ಕೆ ನಿಂತ ವೇಳೆ ಅವರ ಬೆಂಬಲಕ್ಕೆ ನಿಂತ ಬ್ಯಾಂಕ್ ಸಿಬ್ಬಂದಿಗಳಿಗೂ ತರಾಟೆ ತೆಗೆದುಕೊಂಡಿರುವ ಗ್ರಾಹಕ “ಕೆಲಸಕ್ಕೆ ಸೇರಿದ ಆರು ತಿಂಗಳಲ್ಲಿ ಕನ್ನಡ ಕಲಿಯಬೇಕು, ಕೆಲಸ ಕಲಿಯದಿದ್ದರೆ ಕೆಲಸ ಬಿಡಿ ನಮ್ಮ ರಾಜ್ಯದ ಯುವಕರೇ ಕೆಲಸ ಮಾಡ್ತಾರೆ” ಎಂದು ಖಡಕ್ಕಾಗಿಆಗ್ರಹಿಸಿದ್ದಾನೆ. ಈ ವಿಡಿಯೋಗೆ ನೆಟ್ಟಿಗರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top