fbpx
ಹೆಚ್ಚಿನ

ಕನ್ನಡದಲ್ಲೇ ಪರೇಡ್ ಕಮಾಂಡ್ ನಡೆಸಿದ ಅಪ್ಪಟ ಕನ್ನಡ ಪ್ರೇಮಿ ಎಸ್ಪಿ ರವಿಕಾಂತೆಗೌಡ

ಕನ್ನಡದಲ್ಲೇ ಪರೇಡ್ ಕಮಾಂಡ್ ನಡೆಸಿದ ಅಪ್ಪಟ ಕನ್ನಡ ಪ್ರೇಮಿ ಎಸ್ಪಿ ರವಿಕಾಂತೆಗೌಡ

ಈ ಮೊದಲು ಪೊಲೀಸ್ ಪರೇಡ್‌‌‌ನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕಮಾಂಡ್‌‌‌ಗಳನ್ನು ಬಳಸುತ್ತಿದ್ದರು. ಕಳೆದ ವರ್ಷ ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದ ಎರಡನೇ ರಾಜ್ಯಧಾನಿ ಬೆಳಗಾವಿ ಪೊಲೀಸ್ ಇಲಾಖೆ ಕನ್ನಡದಲ್ಲಿ ಕವಾಯತು ಆದೇಶ ನೀಡಿ ಮೆಚ್ಚುಗೆಗೆ ಪಾತ್ರವಾಗಿತ್ತು. ಅಷ್ಟೇ ಅಲ್ಲ ಇದನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿತ್ತು. ಇದಕ್ಕೆಲ್ಲ ಕಾರಣಕರ್ತರಾಗಿದ್ದವರು ಅಪ್ಪಟ ಕನ್ನಡ ಪ್ರೇಮಿ ಆಗಿನ ಬೆಳಗಾವಿ ಎಸ್ಪಿ ಡಾ. ರವಿಕಾಂತೇಗೌಡ

 

 

ಈಗ ಮಂಗಳೂರಿಗೆ ವರ್ಗಾವಣೆ ಆಗಿರುವ ಡಾ. ರವಿಕಾಂತೇಗೌಡ ಇಲ್ಲಿಯೂ ಕೂಡ ತಮ್ಮ ಕನ್ನಡ ಪ್ರೇಮ ಮೆರೆಯಲಿದ್ದಾರೆ ಕನ್ನಡದಲ್ಲೇ ಪರೇಡ್ ಕಮಾಂಡ್ ನಡೆಸಲಿದ್ದಾರೆ. ಕನ್ನಡವನ್ನು ಬೆಳೆಸುವುದಕ್ಕಾಗಿ ಇವರು ಮಾಡುತ್ತಿರುವ ಕೆಲಸಕ್ಕೆ ರಾಜ್ಯಾಧ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

 

ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ಪರೇಡ್ ನಡೆಸುವ ಕುರಿತು ವರದಿ ನೀಡಲು ADGP ನೇತೃತ್ವದ ಸಾಮಿಯನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ. ಕನ್ನಡದಲ್ಲಿ ಪರೇಡ್ ಅಧಿಕೃತವಾಗಿ ಕನ್ನಡದ ಕಂಪು ಹರಡಲಿ ಎಂದು ಆಶಿಸೋಣ.

 

 

ರಾಜ್ಯ ಪೊಲೀಸ್‌ ಮ್ಯಾನ್ಯುಯಲ್‌ ಇನ್ನೂ ಕೂಡ ಕನ್ನಡೀಕರಣ ಆಗಿಲ್ಲ. ಆದರೂ ಅಪ್ಪಟ ಕನ್ನಡ ಪ್ರೇಮಿ ಪೊಲೀಸ್ ಅಧಿಕಾರಿ ರವಿಕಾಂತೇಗೌಡ ತಮ್ಮ ಅಧೀನದಲ್ಲಿ ಬರುವ ಸಿಬ್ಬಂದಿ ವರ್ಗದವರಿಗೆ ಕನ್ನಡದಲ್ಲೇ ಟಿಪ್ಪಣಿ ಬರೆದುಕೊಂಡು ಬರುವುದನ್ನು ಕಡ್ಡಾಯ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top