fbpx
ರಾಜಕೀಯ

ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರಗಳಿಗೆ ವೇತನ ಹೆಚ್ಚಳ ಮಾಡಿದ ಮೋದಿ ಸರ್ಕಾರ. ವೇತನ ಎಷ್ಟು ಗೊತ್ತ??

ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರಗಳಿಗೆ ವೇತನ ಹೆಚ್ಚಳ ಮಾಡಿದ ಮೋದಿ ಸರ್ಕಾರ. ವೇತನ ಎಷ್ಟು ಗೊತ್ತ??

ಇಂದು 2018-19 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಮಾಡಿರುವ ಕೇಂದ್ರ ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳ ಸಂಬಳವನ್ನು ಬಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದಾರೆ.

 

 

2018-19 ನೇ ಶಾಲಿನ ಬಜೆಟ್ ಮಂಡನೆಯಲ್ಲಿ ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗು ರಾಜ್ಯಪಾಲರ ವೇತನವನ್ನು ಹೆಚ್ಚಳ ಮಾಡಿದ್ದಾರೆ. ಹೊಸ ಪರಿಷ್ಕರಣೆ ಪ್ರಕಾರ ರಾಷ್ಟ್ರಪತಿ ಅವರ ವೇತನ 5 ಲಕ್ಷ ರೂ., ಉಪರಾಷ್ಟ್ರಪತಿ ಅವರ ವೇತನ 4 ಲಕ್ಷ ರೂಪಾಯಿ ಹಾಗು ರಾಜ್ಯಪಾಲರ ವೇತನ 3.5 ಲಕ್ಷ ರೂ. ನೀಡಲಾಗುವುದು. ಲೋಕಸಭಾ ಹಾಗು ರಾಜ್ಯ ಸಭಾ ಸಂಸದರ ವೇತನವನ್ನು ಪ್ರತಿ 5 ವರ್ಷಕ್ಕೆ ಒಮ್ಮೆ ಹಣದುಬ್ಬರವನ್ನು ಆಧರಿಸಿ ಪರಿಷ್ಕರಣೆ ಮಾಡಲಾಗುವುದು ಎಂದು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

 

 

 

ಈ ಹಿಂದೆ 2008ರಲ್ಲಿ ರಾಷ್ಟ್ರಪತಿ ಅವರ ಸಂಬಳವನ್ನು ಐವತ್ತು ಸಾವಿರ ರೂಪಾಯಿಯಿಂದ 1.5 ಲಕ್ಷ ರೂ. ಗಳಿಗೆ ಏರಿಕೆ ಮಾಡಲಾಗಿತ್ತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top