fbpx
ಮನೋರಂಜನೆ

ರಕ್ಷಿತ್ ಶೆಟ್ಟಿಯದ್ದೀಗ ಫಿಟ್ನೆಸ್ ಮಂತ್ರ!

ರಕ್ಷಿತ್ ಶೆಟ್ಟಿಯದ್ದೀಗ ಫಿಟ್ನೆಸ್ ಮಂತ್ರ!

 

 

ಪಾತ್ರಕ್ಕೆ ತಕ್ಕಂಥಾ ಕಸರತ್ತು ಮಾಡಿ ದೇಹವನ್ನು ಸಜ್ಜುಗೊಳಿಸಿಕೊಳ್ಳೋ ಟ್ರೆಂಡು ಬಾಲಿವುಡ್ಡಲ್ಲಿ ಫೇಮಸ್ಸು. ಅಲ್ಲಿನ ನಟರನೇಕರು ಅಚ್ಚರಿದಾಯಕವಾಗಿ ದೇಹವನ್ನು ಪಾತ್ರಗಳಿಗೆ ಒಗ್ಗಿಸಿಕೊಳ್ಳುತ್ತಾರೆ. ಇದೀಗ ಈ ಫಿಟ್ನೆಸ್ ಮಂತ್ರ ಕನ್ನಡ ಚಿತ್ರರಂಗಕ್ಕೂ ಪಸರಿಸಿಕೊಂಡಿದೆ. ಇದೀಗ ರಕ್ಷಿತ್ ಶೆಟ್ಟಿ ಕೂಡಾ ಸಿಕ್ಸ್‌ಪ್ಯಾಕ್‌ಗಾಗಿ ಕಸರತ್ತು ಆರಂಭಿಸಿದ್ದಾರೆ!

ರಕ್ಷಿತ್ ಶೆಟ್ಟಿ ಇದುವರೆಗೂ ವರ್ಕೌಟ್ ಸಂಬಂಧಿತ ವಿಚಾರಗಳಿಂದ ಸುದ್ದಿಗೆ ಗ್ರಾಸವಾದವರಲ್ಲ. ಅವರು ಏಕಾಏಕಿ ಪಟ್ಟು ಹಿಡಿದು ವರ್ಕೌಟ್ ಮಾಡಲು ನಿಂತಿರೋದರ ಹಿಂದೆ ರಶ್ಮಿಕಾ ಮಂದಣ್ಣ ಕೈವಾಡವಿದೆಯಾ? ತನ್ನ ಹುಡುಗಿಯನ್ನು ಮೆಚ್ಚಿಸಲೋಸ್ಕರವೇ ರಕ್ಷಿತ್ ಜಿಮ್ ದಾರಿ ಹಿಡಿದಿದ್ದಾರಾ ಅಂತೆಲ್ಲ ಅನುಮಾನ ಕಾಡೋದು ಸಹಜವೇ. ಆದರೆ ಅಸಲೀ ಮ್ಯಾಟರ್ ಬೇರೆಯದ್ದಿದೆ!

 

 

ರಕ್ಷಿತ್ ಶೆಟ್ಟಿ ಸೀರಿಯಸ್ಸಾಗಿ ವರ್ಕೌಟ್ ಮಾಡಲಾರಂಭಿಸಿರೋದು ಪಾತ್ರವೊಂದಕ್ಕಾಗಿ. ಶ್ರೀಮನ್ನಾರಾಯಣ ಚಿತ್ರದಲ್ಲಿನ ವಿಶಿಷ್ಟವಾದ ಪಾತ್ರಕ್ಕಾಗಿ ರಕ್ಷಿತ್ ದೇಹವನ್ನು ಹದಗೊಳಿಸುತ್ತಿದ್ದಾರಂತೆ. ಇದೀಗ ದಿನಂಂತಿe ಸರಿಯಾದ ಸಮಯಕ್ಕೆ ಜಿಮ್‌ಗೆ ತೆರಳುತ್ತಿರೋ ರಕ್ಷಿತ್ ಬೆವರು ಹರಿಸಿ ಸಿಕ್ಸ್‌ಪ್ಯಾಕಿಗಾಗಿ ಕಸರತ್ತು ನಡೆಸುತ್ತಿದ್ದಾರಂತೆ.

ಕೆಲವೇ ಕೆಲ ನಟರನ್ನು ಹೊರತಾಗಿಸಿದರೆ ಕನ್ನಡದಲ್ಲಿ ನಟರಿಗೆ ಫಿಟ್ನೆಸ್ ಸೆನ್ಸ್ ಕಡಿಮೆ ಅಂತೊಂದು ಆರೋಪವಿದೆ. ಆದರೆ ರಕ್ಷಿತ್‌ರಂಥವರು ಪಾತ್ರವೊಂದಕ್ಕಾಗಿ ವರ್ಕೌಟ್ ರೂಟು ಹಿಡಿದಿರೋದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಅಂತೂ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್ ಬೇರೆಯದ್ದೇ ರೀತಿಯಲ್ಲಿ ಪ್ರೇಕ್ಷಕರನ್ನು ಎದುರುಗೊಳ್ಳಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top