fbpx
ಬಿಗ್ ಬಾಸ್

ಈ ಕಾರಣಕ್ಕಾಗಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಲು ಹೋರಾಟ ಸಮೀರ್ ಆಚಾರ್ಯ!

ಈ ಕಾರಣಕ್ಕಾಗಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಲು ಹೋರಾಟ ಸಮೀರ್ ಆಚಾರ್ಯ!

 

 

ಬಿಗ್ ಬಾಸ್ ರಿಯಾಲಿಟಿ ಷೋಗೆ ಸ್ಪರ್ಧಿಯಾಗಿ ಹೋಗಿ ಸುಮಾರು 100 ದಿನಗಳ ಕಾಲ ಸ್ಪರ್ಧಿಯಲ್ಲಿ ಉಳಿದುಕೊಂಡು ಪ್ರಬಲ ಪೈಪೋಟಿ ನೀಡಿದ್ದ ಸಮೀರಾಚಾರ್ಯ ಬಿಗ್ ಬಾಸ್ ನಿಂದ ಹೊರ ಬಂದ ಕೂಡಲೇ ತಮ್ಮ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸಗಳನ್ನು ಆರಂಭಿಸಿಕೊಂಡಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಹೋಗಿದ್ದೆ ಮಹದಾಯಿ ಹೋರಾಟವನ್ನು ಮಾಡಲಂತೆ ಹಾಗಾಗಿ ಇದೇ ವಿಚಾರವಾಗಿ ಪ್ರಧಾನಿ ಮೋದಿಯನ್ನು ಕೂಡ ಮೀಟ್ ಮಾಡಲು ದೆಹಲಿಗೆ ಹೋಗ್ತಿದ್ದಾರೆ.

 

 

“ನಾನು ರೈತರ ಕುಟುಂಬದಲ್ಲಿ ಹುಟ್ಟಿಲ್ಲ ಆದರೆ ರೈತರ ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ಉತ್ತರ ಕರ್ನಾಟಕದ ಜನ ನೀರಲ್ಲದೆ ಕಂಗೆಡುತ್ತಿದ್ದಾರೆ.  ಕಳೆದ ಮೋದಿ ಅವರು ಬೆಳಗಾವಿಗೆ ಬಂದಿದ್ದಾಗ ಅವರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ಕೊಟ್ಟಿರಲಿಲ್ಲ.. ಹಾಗಾಗಿ ಮಹದಾಯಿಯ ವಿಚಾರವಾಗಿ ನೇರವಾಗಿ ಪ್ರಧಾನಿಯವರೊಂದಿಗೆಯೇ ಮಾತನಾಡಲು ಅವರ ಭೇಟಿಗಾಗಿ ದಿನಾಂಕ ನಿಗದಿ ಮಾಡುತ್ತಿದ್ದೇನೆ” ಎಂದು ಸಮೀರಾಚಾರ್ಯ ಹೇಳಿದ್ದಾರೆ.

“ನಾನು ಬಿಗ್ ಬಾಸ್ ಮನೆಯಲ್ಲಿದ್ದಾಗ ಪದೇ ಪದೇ ಮಹದಾಯಿ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೆ ಅಲ್ಲದೇ ಪ್ಯಾಷನ್ ಷೋ ಟಾಸ್ಕ್ ನೀಡಿದ್ದಾಗ ಮಹದಾಯಿಯ ಕುರಿತು ಹಾಡನ್ನು ಕೂಡ ಹಾಡಿದ್ದೇ. ಆಗ ನನಗೆ ಕಡಿಮೆ ಅಂಕ ಸಿಕ್ಕಿರತ್ತು ಅದು ನನಗೆ ಬೇಸರವನ್ನು ಕೂಡ ತಂದಿತ್ತು. ಈ ವಿಚಾರವನ್ನು ಯಾರು ಹೈಲೈಟ್ ಮಾಡಲಿಲ್ಲ. ಏನೇ ಆದರೂ ಮಹದಾಯಿ ಹೋರಾಟವನ್ನು ಮಾತ್ರ ನಾನು ಕೈ ಬಿಡುವುದಿಲ್ಲ” ಎಂದು ಸಮೀರ್ ಆಚಾರ್ಯ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top