fbpx
ಮನೋರಂಜನೆ

‘ಅಯೋಗ್ಯ’ ಚಿತ್ರದ ಶೂಟಿಂಗ್ ಮುಗಿಸಿ ಬರುತ್ತಿದ್ದಾಗ ನಟ ಸತೀಶ್ ನೀನಾಸಂ ಕಾರು ಅಪಘಾತ!

‘ಅಯೋಗ್ಯ’ ಚಿತ್ರದ ಶೂಟಿಂಗ್ ಮುಗಿಸಿ ಬರುತ್ತಿದ್ದಾಗ ನಟ ಸತೀಶ್ ನೀನಾಸಂ ಕಾರು ಅಪಘಾತ!

 

 

ಚಂದನವನದ ಯುವನಟ ಸತೀಶ್ ನೀನಾಸಂ ಕಾರು ಅಪಘಾತಕ್ಕೀಡಾಗಿದೆ. ಹೌದು ಅವರು ಅಭಿನಯಿಸುತ್ತಿರುವ ಅಯೋಗ್ಯ ಚಿತ್ರೀಕರಣ ಮುಗಿಸಿಕೊಂಡು ವಾಪಸ್ಸು ಬರುತ್ತಿರುವಾಗ ಅಪಘಾತಕ್ಕೆ ತುತ್ತಾಗಿದೆ.ಅದೃಷ್ಟವಶಾತ್ ಕಾರಿನಲ್ಲಿದ್ದ ಯಾರಿಗೂ ಯಾವುದೇ ಅನಾಹುತಗಳಾಗಿಲ್ಲ.

 

 

ಅಯೋಗ್ಯ’ ಚಿತ್ರದ ಶೂಟಿಂಗ್ ಮಂಡ್ಯದಲ್ಲಿ ನಡೆಯುತ್ತಿದ್ದು ನಿನ್ನೆ ಚಿತ್ರದ ಶೂಟಿಂಗ್’ನಲ್ಲಿ ಪಾಲ್ಗೊಂಡಿದ್ದರು..ಸತೀಶ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾರ್ ಡ್ರೈವರ್, ಮೇಕಪ್ ಮ್ಯಾನ್ ಮತ್ತು ಪರ್ಸನಲ್ ಅಸಿಸ್ಟೆಂಟ್’ಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಗಂಭೀರವಾಗಿ ಗಾಯಗಳಾಗಿಲ್ಲ ಎಂದು ಸತೀಶ್ ಅವರೇ ಸ್ಪಷ್ಟಿಸಿದ್ದಾರೆ.. ಗಾಯಗೊಂಡವರನ್ನು ತಕ್ಷಣವೇ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಎಂದು ತಿಳಿದು ಬಂದಿದೆ.

 

 

ಕಾರು ಅಪಘಾತವಾದಾಗ ಸತೀಶ್ ಅವ್ರು ಕಾರಿನಲ್ಲಿ ಇರಲಿಲ್ಲವಂತೆ ಹೀಗಂತ ಟ್ವೀಟ್ ಮಾಡಿರುವ ಸತೀಶ್ “ಕಾರ್ ಆ್ಯಕ್ಸಿಡೆಂಟ್ ಆದಾಗ ನಾನು ಆ ಕಾರಲ್ಲಿ ಪ್ರಯಾಣ ಮಾಡ್ತ ಇರಲಿಲ್ಲ ,ಹಾಗೂ ಕಾರಿನಲ್ಲಿದ್ದವರು ಕ್ಷೇಮ ನಿಮ್ಮೆಲ್ಲರ ಪ್ರೀತಿಯಿಂದ ಧನ್ಯವಾದಗಳು….” ಎಂದು ಬರೆದುಕೊಂಡಿದ್ದಾರೆ.

ಮಹೇಶ್ ನಿರ್ದೇಶನದ ‘ಅಯೋಗ್ಯ’ ಚಿತ್ರಕ್ಕೆ ಚಂದ್ರಶೇಖರ್ ನಿರ್ಮಾಪಕರಾಗಿದ್ದು ಚಿತ್ರದಲ್ಲಿ ಸತೀಶ್ ಅವರಿಗೆ ರಚಿತಾ ರಾಮ್ ನಾಯಕಿಯಾಗಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top