fbpx
ಬಿಗ್ ಬಾಸ್

ಯಾವ ಕಾರಣಕ್ಕೆ ಸುದೀಪ್ ಕುಮಾರ್ ಬಂಗಾರಪ್ಪಗೆ ಥ್ಯಾಂಕ್ಸ್ ಹೇಳಿದ್ರು ಗೊತ್ತಾ.

ಯಾವ ಕಾರಣಕ್ಕೆ ಸುದೀಪ್ ಕುಮಾರ್ ಬಂಗಾರಪ್ಪಗೆ ಥ್ಯಾಂಕ್ಸ್ ಹೇಳಿದ್ರು ಗೊತ್ತಾ.

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ‘ಬಿಗ್ ಬಾಸ್ ಕನ್ನಡ ಸೀಸನ್-5’ ಅಂತ್ಯಗೊಂಡಿದ್ದು ವೀಕ್ಷಕರ ಬಯಕೆಯಂತೆ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವಾಕರ್‌ ಬಿಗ್‌ಬಾಸ್‌ ಸೀಸನ್ 5ನ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

 

 

ಕಳೆದ ವಾರವಷ್ಟೇ ಬಿಗ್ ಬಾಸ್ ಸೀಸನ್ 5 ಮುಕ್ತಾಯವಾಯಿತು ‘ಬಿಗ್ ಬಾಸ್ ಕನ್ನಡ’ ನಡೆದು ಬಂದ ಹಾದಿಯ ವಿಟಿ ತೋರಿಸಲಾಯಿತು. ಈ ವಿಟಿಯನ್ನು ಮಾಜಿ ಸಚಿವ, ನಟ ಕುಮಾರ್ ಬಂಗಾರಪ್ಪ ವೀಕ್ಷಣೆ ಮಾಡಿದ್ದಾರೆ.

 

ವಿಟಿ ವೀಕ್ಷಣೆ ಮಾಡಿದ ಕುಮಾರ ಬಂಗಾರಪ್ಪ ನವರು ಸುದೀಪ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ, ವಿಟಿ ಬಹು ಸುಂದರವಾಗಿದೆ. ಕನ್ನಡ ಚಿತ್ರರಂಗ ಕಂಡನಂತಹ ಆಕರ್ಷಕ ಚಿತ್ರ ನಟರಲ್ಲಿ ನೀವೊಬ್ಬರಾಗಿದ್ದೀರಿ. ದೇವರು ನಿಮಗೆ ಇಷ್ಟಾರ್ಥಗಳನ್ನು ಈಡೇರಿಸಲಿ. ನಿಮ್ಮ ಬಣ್ಣ ಬಣ್ಣದ ಪ್ರಯಾಣ ಯಶಸ್ಸಿನ ದಿಕ್ಕಿನಲ್ಲಿ ಸಾಗಲಿ ಎಂದು ಶುಭ ಹಾರೈಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್, ಧನ್ಯವಾದ ಸರ್ ಎಂದು ಹೇಳಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top