fbpx
ವಾಸ್ತು

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಉಪಯೋಗಿಸುವ ನೀರು ಅಥವಾ ಬಳಸುವ ನೀರು ಯಾವ ದಿಕ್ಕಿನ ಕಡೆಗೆ ಹರಿದರೆ ಶುಭ ಗೊತ್ತೇ ?

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಉಪಯೋಗಿಸುವ ನೀರು ಅಥವಾ ಬಳಸುವ ನೀರು ಯಾವ ದಿಕ್ಕಿನ ಕಡೆಗೆ ಹರಿದರೆ ಶುಭ ಗೊತ್ತೇ ?

ನಿಮ್ಮ ಮನೆಯಲ್ಲಿ ನೀರು ಯಾವ ದಿಕ್ಕಿಗೆ ಹರಿದರೆ ಶುಭ ? ಯಾವ ಯಾವ ದಿಕ್ಕಿಗೆ ನಿಮ್ಮ ಮನೆಯಲ್ಲಿ ನೀರು ಹರಿಯುವುದರಿಂದ ಅದರಿಂದ ಯಾವೆಲ್ಲಾ ಫಲಗಳು ಸಿಗುತ್ತವೆ ?. ಎಂಬುದನ್ನು ತಿಳಿದುಕೊಳ್ಳಿ….
ಸಾಮಾನ್ಯವಾಗಿ ಈಶಾನ್ಯ ,ಉತ್ತರ, ಪೂರ್ವ ದಿಕ್ಕಿಗೆ ನೀರು ಹರಿಯುತ್ತದೆ. ಇನ್ನು ನಿವೇಶಗಳನ್ನು ಮಾಡಿದಾಗ ಸಂಪೂರ್ಣವಾಗಿ (ಲೇಔಟ್ ಗಳು) ನಿವೇಶನಗಳನ್ನು ಕಟಿದ್ದಾಗ, ಅವರು ಬಳಸುವ ಅಡಿಗೆ ಮನೆಯ ನೀರು,ಸಿಂಕ್ ಮತ್ತು ಬಚ್ಚಲು ಮನೆಯ ನೀರು ಇರಬಹುದು, ಎಲ್ಲವನ್ನು ಒಂದೇ ಕಡೆಗೆ ಬಿಡುವ ಸಾಧ್ಯತೆ ಹೆಚ್ಚಿರುತ್ತದೆ.ಹಾಗೆಯೇ ಪೈಪಗಳನ್ನು ಕೂಡ ಅಳವಡಿಸಿಕೊಂಡು ಇರುತ್ತಾರೆ.ಈ ರೀತಿಯಾಗಿದ್ದರೆ ಉತ್ತಮ ಎಂದು ಶಾಸ್ತ್ರ ಹೇಳುತ್ತದೆ.ಆದರೆ ಅದು ಯಾವ ದಿಕ್ಕಿಗೆ ಹರಿದರೆ ಶಭ ಎಂದು ನೋಡಬೇಕು? ಅದು ವಾಸ್ತು ಪ್ರಕಾರ ಸರಿಯಿದೆಯೇ ಎಂದು ಮೊದಲು ತಿಳಿದುಕೊಳ್ಳಿ….

 

 

ಸಾಮಾನ್ಯವಾಗಿ ಮನೆಯಲ್ಲಿ ಬಳಸುವಂತಹ ನೀರು ,ಮನೆಯಲ್ಲಿ ಮಹಡಿಯ ಮೇಲೆ ಬಿದ್ದಂತಹ ನೀರು, ಎಲ್ಲವೂ ಅಡಿಗೆ ಮನೆಯಲ್ಲಿ ಇರಬಹುದು, ಬಚ್ಚಲು ಮನೆ ಆಥವಾ ಮನೆಯ ಹೂರಗಡೆ ಅಂಗಳದಲ್ಲಿ ಬಿದ್ದ ನೀರು ಆಗಿರಬಹುದು , ಆ ನೀರು ಎಲ್ಲವೂ ಪೂರ್ವ ದಿಕ್ಕಿಗೆ ಹರಿದರೆ ,ಅಥವಾ ಪೂರ್ವ ದಿಕ್ಕಿಗೆ ಹರಿಯುವ ವ್ಯವಸ್ಥೆ ಇದ್ದರೆ ಅದು ಉತ್ತಮ, ಒಳ್ಳೆಯದು, ಆರೋಗ್ಯ ಬಾಗ್ಯ ದೊರೆಯುವುದು ,ಮನೆಯಲ್ಲಿ ಇರುವವಲೆಲ್ಲರು ಆರೋಗ್ಯವಾಗಿ ಇರುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

 

 

ಇನ್ನೂ ಮನೆಯ ನೀರು ಉತ್ತರ ದಿಕ್ಕಿಗೆ ಹರಿದರೆ ಅದು ಸಂಪತ್ತನ್ನು ತಂದುಕೊಡುತ್ತದೆ ಎಂದು ಹೇಳಲಾಗಿದೆ. ಇವೆರಡು ದಿಕ್ಕುಗಳಲ್ಲಿ ನೀರು ಹರಿದರೆ ಮಾತ್ರ ಒಳ್ಳೆಯದು ಉತ್ತಮ ಎಂದು ಶಾಸ್ತ್ರ ಹೇಳಿದೆ.
ಇನ್ನೂ ಇದೇ ಮನೆಯಲಿ ಬಳಸುವಂತಹ ನೀರು ಪಶ್ಚಿಮಕ್ಕೆ ಏನಾದರೂ ಹರಿದರೆ ಅದು ದರಿದ್ರ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.ಕಷ್ಟಗಳು,ದಾರಿದ್ರ್ಯ,ಹಣದ ಸಮಸ್ಯೆಗಳು ಎಷ್ಟು ಹಣ ಬಂದರು ಉಳಿಯುವುದಿಲ್ಲ, ಮನೆಗೆ ದರಿದ್ರವೂ ಬಂದು ವಕ್ಕರಿಸಿಕೊಳ್ಳುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

 

 

ಇನ್ನೂ ಮನೆಯಲ್ಲಿ ಉಪಯೋಗಿಸುವ ನೀರು ದಕ್ಷಿಣ ದಿಕ್ಕಿಗೆ ಏನಾದರೂ ಹರಿದರೆ ಮೃತ್ಯುವಿನ ಭಯ ಕಾಡುತ್ತದೆ ಎಂದು ಹೇಳಲಾಗಿದೆ.ಅನಾರೋಗ್ಯಗಳು ಜಾಸ್ತಿಯಾಗುತ್ತವೆ ಅಥವಾ ಅನಿರೀಕ್ಷಿತ ಅಪಘಾತಗಳು ಸಂಭವಿಸುತ್ತವೆ,ತೊಂದರೆಗಳು ಮತ್ತು ಹೆಚ್ಚು ಹೆಚ್ಚು ಅರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ.

ಸಾಮಾನ್ಯವಾಗಿ ಪಟ್ಟಣಗಳಲ್ಲಿ ಏನು ಮಾಡುತ್ತಾರೆ ಎಂದರೆ ಒಳ ಚರಂಡಿ ವ್ಯವಸ್ಥೆಯು ಯಾವ ದಿಕ್ಕಿಗೆ ಇರುತ್ತದೆಯೋ ಅದೇ ದಿಕ್ಕಿಗೆ ನೀರು ಹರಿಯುವಂತೆ ವ್ಯವಸ್ಥೆಯನ್ನು ಮಾಡಲಾಗುತ್ತದೆ.ಆದರೆ ಅಂತಹ ಮನೆಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ.ವಾಸ್ತು ತಜ್ಞರು ಹೋಗಿ ಪರಿಶೀಲಿಸಿದಾಗ ಸಮಸ್ಯೆ ಅವರಿಗೆ ಅರ್ಥವಾಗುತ್ತದೆ.ಅನಾರೋಗ್ಯ,ಅಪಘಾತಗಳು ಸಂಭವಿಸುತ್ತವೆ.

 

 

ನೀವು ನಿಮ್ಮ ಮನೆಯಲ್ಲಿ ಈಶಾನ್ಯ, ಪೂರ್ವ ಮತ್ತು ಉತ್ತರ ದಿಕ್ಕಿಗೆ ಹೆಚ್ಚಾಗಿ ಬರುವಂತೆ ನೋಡಿಕೊಳ್ಳಿ.
ಇನ್ನೂ ಇದಕ್ಕೆ ಪರಿಹಾರ ಮತ್ಸ್ಯ ಯಂತ್ರವನ್ನು ಮನೆಯಲ್ಲಿ ತಂದಿಟ್ಟರೆ ಈ ವಾಸ್ತು ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರ ವಾಗಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top