ವಿಶೇಷ

ಸ್ನೇಕ್ ವೈನ್ ಒಂದ್ಸರಿ ಕುಡಿದ್ರೆ ಮತ್ತೆ ಮತ್ತೆ ಬಾಯಿ ಚಪ್ಪರಿಸಿಕೊಂಡು ಕುಡೀತಾರಂತೆ ಇವ್ರು , ಆದ್ರೆ ಅಸಲಿ ಕಿಕ್ಕು ಬೇರೇನೇ ಇದೆ

ಹಾವು ,ಕಪ್ಪೆಗಳನ್ನ ತಿನ್ನುವುದರಲ್ಲಿ ಚೀನಾ,ಜಪಾನ್ ನವರು ಎತ್ತಿದ ಕೈ ಬಾಯಿ ಚಪ್ಪರಿಸುತ್ತಾ ಈಗೊಂದು ಹೊಸ ವರಸೆಯನ್ನು ಶುರು ಹಚ್ಚಿಕೊಂಡಿದ್ದಾರೆ .

ಬಾಟಲ್ ನಲ್ಲಿ ವೈನ್ ಜೊತೆ ಹಾವನ್ನು ನೋಡಿದರೆ ಎಂತವರಿಗಾದರು ಭಯ ಆಗದೆ ಇರೋಲ್ಲ , ಕುಡಿಯದೆ ಇದ್ದರೆ ದಿನವೇ ಕಳೆಯದ ಚೈನಾ ಮಂದಿಗೆ ಇದು ಭಲೇ ರುಚಿ ಕೊಟ್ಟಿದೆಯಂತೆ ,ವಿಧವಿಧವಾದ ಹಾವುಗಳನ್ನು ಹಿಡಿದು ವೈನ್ ತಯಾರಿ ಮಾಡಿ ದೇಶ ವಿದೇಶಗಳ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ .

ಆ ವೈನ್ ಹಾಗಿರಲಿ ಅದನ್ನು ನೋಡಿದರೆ ಭಯವಾಗುತ್ತದೆ ಅಷ್ಟೇ ಅಲ್ಲದೆ ವಿಚಿತ್ರ ಕೂಡ ಅನಿಸುತ್ತದೆ .

 

 

ಬನ್ನಿ ಈಗ ಇದನ್ನು ಹೇಗೆ ತಯಾರಿ ಮಾಡುತ್ತಾರೆ ತಿಳಿಯೋಣ..

 

ಮೊದಲಿಗೆ ಒಂದು ಬಾಟಲ್ ನಷ್ಟು ವೈನ್ ಅನ್ನು ತೆಗೆದುಕೊಂಡು ಅದಕ್ಕೆ ಸುಗಂಧ ವಾಸನೆ ಬೀರುವ ಮೂಲಿಕೆಗಳನ್ನು ಹಾಕಲಾಗುತ್ತದೆ .
ಆನಂತರ ಸತ್ತ ಹಾವನ್ನು ಚೆನ್ನಾಗಿ ತೊಳೆದು ವೈನ್ ಬಾಟಲ್ ಒಳಗೆ ಇರಿಸಲಾಗುತ್ತದೆ .

ಹೀಗೆ 20 ರಿಂದ ಒಂದು ತಿಂಗಳು ಹಾವು ವೈನ್ ನಲ್ಲಿ ನೆನೆಸಿಟ್ಟರೆ ಬಲು ರುಚಿಯಂತೆ , ಇನ್ನು ಕೆಲವು ಬಾರಿ ಹಾವು ನಲವತ್ತು ದಿನಗಳ ವರೆಗೂ ಬದುಕಿಯೇ ಇರುತ್ತದೆಯಂತೆ ಅಂತಹ ವೈನ್ ಗೆ ಸಾಹಸ ಪ್ರಿಯರು ಹೆಚ್ಚೆಚ್ಚು ದುಡ್ಡು ಕೊಟ್ಟು ಕುಡಿಯುತ್ತಾರೆ ಅಷ್ಟೇ ಅಲ್ಲದೆ ಅದು ಒಂದು ರೀತಿಯ ಬೇರೆಯ ರುಚಿಯನ್ನೇ ಕೊಡುತ್ತದೆಯಂತೆ .

ಬೆನ್ನು ನೋವು ,ಕೀಲು ನೋವು ಮತ್ತು ಕೂದಲು ಉದರುವ ಸಮಸ್ಯೆಗೆ ಈ ವೈನ್ ರಾಮಬಾಣ , ಇನ್ನು ಇಷ್ಟೆಲ್ಲ ಮದ್ದಿನ ಗುಣಗಳು ಇವೆಯೆಂದು ತಿಳಿದ ಮೇಲೆ ಒಂದು ಬಾಟೆಲ್ ಗೆ ಕನಿಷ್ಠ 20 ಸಾವಿರ ಬೆಲೆ ಇರುತ್ತದೆಯಂತೆ .

ಇನ್ನು ಕೆಲವು ರೆಸ್ಟೋರೆಂಟ್ ಗಳಲ್ಲಿ ಬದುಕಿರುವ ಹಾವನ್ನು ಕಣ್ಣು ಮುಂದೆಯೇ ವೈನ್ ನಲ್ಲಿ ಹಾಕಿ ,ರಕ್ತ ಹೀರುತ್ತಾರಂತೆ ಇದು ಇನ್ನು ಕಾಸ್ಟ್ಲಿ ,ಚೀನಾಗೆ ಬರುವ ವಿಯೆಟ್ನಾಮ್ ಹ್ಯಾಂಗ ಕಾಂಗ್ ಪ್ರವಾಸಿಗರು ಇದನ್ನು ಸವಿಯುವುದಕ್ಕೆ ಭೇಟಿ ನೀಡುತ್ತಾರಂತೆ , ಹಾವಿನ ಜೊತೆ ಚೇಳು ವೈನ್ ಕೂಡ ಇಲ್ಲಿ ಸಿಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top