fbpx
ಹೆಚ್ಚಿನ

ಮೊಬೈಲ್ ಚಾರ್ಜರ್ ಕಚ್ಚಿ ಬಾಲಕ ಸಾವು. ಪ್ರತಿಯೊಬ್ಬ ಪೋಷಕರಿಗೂ ಎಚ್ಚರಿಕೆ ಘಂಟೆ.

ಮೊಬೈಲ್ ಚಾರ್ಜರ್ ಕಚ್ಚಿ ಬಾಲಕ ಸಾವು.
ಪ್ರತಿಯೊಬ್ಬ ಪೋಷಕರಿಗೂ ಎಚ್ಚರಿಕೆ ಘಂಟೆ.

ಮನೆಯಲ್ಲಿ ಮೊಬೈಲ್‌ ಚಾರ್ಜರ್‌ ನೊಂದಿಗೆ ಆಟವಾಡುತ್ತಿದ್ದ 4 ವರ್ಷದ ಬಾಲಕನೊಬ್ಬ ಆ ಚಾರ್ಜರ್ ಅನ್ನು ಬಾಯಿಯಿಂದ ಕಚ್ಚಿದಾಗ ಎಲೆಕ್ಟ್ರಿಕ್ ಶಾಕ್‌ ತಗುಲಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನ ವಗರ್‌ ರಸ್ತೆಯಲ್ಲಿ ನಿನ್ನೆ ಸಂಜೆ ನಡೆದಿದೆ. ಇನ್ನು ಘಟನೆ ಸಂಭವಿಸಿದಾಗ ಮನೆಯಲ್ಲಿ ತಾಯಿ ಹಾಗು ಮಗು ಮಾತ್ರ ಇದ್ದರು ಎಂದು ತಿಳಿದು ಬಂದಿದೆ.

 

ಲೀಲಾ ಮತ್ತು ಇಂದ್ರೇಶ್ ದಂಪತಿಯ ಪುತ್ರನಾಗಿರುವ 4 ವರ್ಷ ವಯಸ್ಸಿನ ಬಾಲಕ ‘ಅಭಿಜ್ಞಾನ್’ ಮೃತ ದುರ್ದೈವಿ. ವಿದ್ಯುತ್ ಹರಿಯುತ್ತಿದ್ದ ಚಾರ್ಜರ್ ಬಾಯಿಂದ ಕಚ್ಚಿದ ಮಗು ತೀವ್ರವಾಗಿ ಅಸ್ವಸ್ಥವಾಗಿತ್ತು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಆದರೆ ದಾರಿ ಮಧ್ಯೆಯೇ ಮಗು ಸಾವನ್ನಪ್ಪಿದೆ. ಈ ಘಟನೆ ಸಂಬಂಧಿಸಿದಂತೆ ಆಲ್ದೂರು ಪೊಲೀಸರು ಪ್ರಕರಣವನ್ನು ದಾಖಲು ಮಾಡಿದ್ದಾರೆ.

 

ಮೊದಲು ತೆರಳಿದ್ದ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಕರೆದು ಒಯ್ದಿದ್ದಾರೆ ಆದರೆ ಅಷ್ಟರಲ್ಲಿ ಮಗು ಸಾವನಪ್ಪಿತ್ತು. ಮಗನನ್ನು ಕಳೆದುಕೊಂಡ ದಂಪತಿಗಳ ಆಕ್ರಂದನ ಮುಗಿಲು ಮುಟ್ಟಿದೆ.

 

 

ಈ ಘಟನೆ ಪ್ರತಿಯೊಬ್ಬ ಪೋಷಕರಿಗೆ ಎಚ್ಚರಿಕೆ ಘಂಟೆಯಾಗಿದೆ. ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಅಪಾಯಕಾರಿ ವಸ್ತುಗಳು ಮಕ್ಕಳ ಕೈಗೆ ಸಿಗದಂತೆ ಎಚ್ಚರ ವಹಿಸಬೇಕು. ಮಕ್ಕಳಿಗೆ ಯಾವುದು ಅಪಾಯ ಎಂಬುದು ಅರಿವು ಇರುವುದಿಲ್ಲ ಹಾಗಾಗಿ ಮಕ್ಕಳನ್ನು ಜಾಗರೂಕರಾಗಿ ನೋಡಿಕೊಳ್ಳಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top