fbpx
ಮನೋರಂಜನೆ

ಟಕಿಲಾ ನಂತರ ಚಂದನ್ ಶೆಟ್ಟಿ ಮುಂದಿನ ಸಾಂಗ್ ಯಾವುದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ಟಕಿಲಾ ನಂತರ ಚಂದನ್ ಶೆಟ್ಟಿ ಮುಂದಿನ ಸಾಂಗ್ ಯಾವುದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

 

 

ಬಿಗ್ ಬಾಸ್ ಶೋ ವಿನ್ ಆದ ನಂತರ ರ್ಯಾಪರ್ ಚಂದನ್ ಶೆಟ್ಟಿಗೆ ದೊಡ್ಡ ಬ್ರೇಕ್ ಸಿಕ್ಕಿದೆ. ಸಿನಿಮಾ, ಇವೆಂಟ್, ಟಿವಿ ಷೋ ಸೇರಿದಂತೆ ಅನೇಕ ಆಫರ್ ಗಳು ತನ್ನ ಮನೆ ಬಾಗಿಲ ಬಳಿಗೆ ಬರುತ್ತಿವೆ. ಜನಪ್ರಿಯತೆ ಸಿಕ್ಕಿರುವ ಕಾರಣ ಪಾರ್ಟಿ ಸಾಂಗ್ ಗಳನ್ನ ಮಾಡುವುದನ್ನು ನಿಲ್ಲಿಸಿ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಅವರ ಅಭಿಮಾನಿಗಳು ಮಾತ್ರ ಟಕಿಲಾ ನಂತರ ಯಾವ ಹಾಡನ್ನು ಮಾಡುತ್ತಾರೆ, ಅದರಲ್ಲಿ ಯಾವ ಕಾನ್ಸೆಪ್ಟ್ ಇರುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದರು. ಈಗ ಸ್ವತಃ ಚಂದನ್ ಶೆಟ್ಟಿಯವರೇ ತಮ್ಮ ಮುಂದಿನ ಹಾಡಿನ ಬಗ್ಗೆ ಮಾಹಿತಿ ನೀಡಿದ್ದಾರೆ.

 

 

ಚಂದನ್ ತಯಾರು ಮಾಡಲು ಹೊರಟಿರುವ ಮುಂದಿನ ಹಾಡಿನ ಹೆಸರು ‘ಫಯರ್’ ಅಂತೇ, ಫಯರ್ ಅಂದ್ರೆ ಬೆಂಕಿ, ಕಿಚ್ಚು ಅಂತ ಅರ್ಥ, ಮನುಷ್ಯನಿಗೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಫಯರ್ ಇರಬೇಕು ಇದೆ ಕಾನ್ಸೆಪ್ಟ್ ನಲ್ಲಿ ಒಂದು ಹಾಡನ್ನು ಮಾಡುವುದಾಗಿ ಚಂದನ್ ಹೇಳಿದ್ದಾರೆ. ಸದ್ಯದಲ್ಲೇ ಈ ಹಾಡಿನ ಕೆಲಸಗಳನ್ನು ಆರಂಭಿಸುತ್ತಿರುವ ಚಂದನ್ ಆದಷ್ಟು ಬೇಗ ಬಿಡುಗಡೆಗೊಳಿಸುವ ಯೋಚನೆಯಲ್ಲಿದ್ದರಂತೆ. ಈ ಹಾಡು ಮುಗಿದ ನಂತರ ಬಿಗ್ ಬಾಸ್ ಮನೆಯಲ್ಲಿ ತಾವು ಹಾಡಿದ್ದ ಹಾಡುಗಳ ಆಲ್ಬಮ್ ಅನ್ನು ಮಾಡುವ ಯೋಚನೆ ಕೂಡ ಚಂದನ್ ಶೆಟ್ಟಿ ತಲೆಯಲ್ಲಿ ಇದೆಯಂತೆ.

 

 

ಎಲ್ಲ ಅಂದುಕೊಂಡಂತೆ ಆದರೆ ಚಂದನ್ ಅಭಿಮಾನಿಗಳಿಗೆ ಅವರ ಹಾಡುಗಳನ್ನು ಸಾಲು ಸಾಲಾಗಿ ಕೇಳುವ ಭಾಗ್ಯ ಅತಿಬೇಗವಾಗಿ ಸಿಗಲಿದೆ. ಈ ನಡುವೆ ತಮ್ಮ ಸಿನಿಮಾ ಮತ್ತು ಕಲರ್ಸ್ ಚಾನೆಲ್ ನ ಒಂದು ರಿಯಾಲಿಟಿ ಷೋಗಳಲ್ಲೂ ಕೂಡ ಚಂದನ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರಂತೆ. ಅವರ ಸಿನಿಮಾಗಳ ಬಗ್ಗೆ ಅತಿ ಶೀಘ್ರದಲ್ಲೇ ಮಾಹಿತಿ ನೀಡಲಿದ್ದಾರಂತೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top