fbpx
ಸಿನಿಮಾ

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ದರ್ಶನ್ ಚಿತ್ರ ಪ್ರಿಂಟ್ ಮಾಡಿಸಿದ ಅಭಿಮಾನಿ

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ದರ್ಶನ್ ಚಿತ್ರ ಪ್ರಿಂಟ್ ಮಾಡಿಸಿದ ಅಭಿಮಾನಿ

 

 

ಚಲನಚಿತ್ರ ಕಲಾವಿದರಿಗೆ ಅಭಿಮಾನಿಗಳು ಇರಲೇಬೇಕು. ಅಪಾರ ಅಭಿಮಾನಿ ಬಳಗ ಹೊಂದಿರುವ ದರ್ಶನ ತಮ್ಮ ಅಭಿಮಾನಿಗಳಿಗೆ ಅನೇಕ ಜನಪರ ಕೆಲಸ ಮಾಡುತ್ತ ಬಂದಿದ್ದಾರೆ. ದರ್ಶನ ಸಿನಿಮಾ ರಿಲೀಸ್ ಆಗುತ್ತಲೇ ದೊಡ್ಡ ಕಟೌಟ್ ನಿಲ್ಲಿಸಿ ಹಾಲಿನ ಅಭಿಷೇಕ ಮಾಡುತ್ತಾರೆ ಹಲವಾರು ಅಭಿಮಾನಿಗಳು.

 

 

ಮೈಸೂರು ಜಿಲ್ಲೆಯ ಅಭಿಮಾನಿಯೊಬ್ಬರು ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ದರ್ಶನ ಹಾಗು ಕುಟುಂಬಸ್ಥರ ಭಾವಚಿತ್ರಗಳನ್ನು ಹಾಕಿಸಿ ವಿಶಿಷ್ಟವಾಗಿ ಆಮಂತ್ರಣ ಮದುವೆ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿದ್ದಾರೆ. ಮದುವೆಯು ಫೆಬ್ರುವರಿ 7 ನೆಯ ದಿನಾಂಕದಂದು ನಡೆಯಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನರವರ ಆಶೀರ್ವಾದದೊಂದಿಗೆ ಎಂದು ಮದುವೆಯ ಆಮಂತ್ರಣ ಪತ್ರಿಕೆಯ ಮೊದಲ ಪುಟದಲ್ಲಿ ಮುದ್ರಣ ಮಾಡಲಾಗಿದೆ. ಈ ಪತ್ರಿಕೆಯಲ್ಲಿ ಭಾವಚಿತ್ರಗಳು ಅಷ್ಟೇ ಅಲ್ಲದೆ ದರ್ಶನ ರವರ ಕುಟುಂಬದ ಎಲ್ಲರ ಹೆಸರನ್ನೂ ಮುದ್ರಿಸಲಾಗಿದೆ.

 

 

ಇನ್ನೊಂದು ವಿಶೇಷ ಅಂದ್ರೆ ದರ್ಶನ ರವರ ದುರ್ಯೋಧನ ಪಾತ್ರದಾರಿಯಾಗಿರುವ ಚಿತ್ರವನ್ನು ಈ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣ ಮಾಡಲಾಗಿದೆ. ಮೈಸೂರಿನ ಸುನೀಲ್ ಮತ್ತು ನಯನ ರವರ ಮದುವೆ ಸಮಾರಂಭ ಫೆಬ್ರವರಿ 7 ರಂದು ಜರುಗಲಿದೆ.

 

ಅಪ್ಪಟ ದರ್ಶನ ಅಭಿಮಾನಿ ಆಗಿರುವ ಸುನೀಲ್ ದರ್ಶನ ತೂಗುದೀಪ್ ಅಭಿಮಾನಿ ಬಳಗದ ಸದಸ್ಯನಾಗಿದ್ದಾನೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top